ರಿಶಿ ಕಪೂರ್ ಗೆ ಅಂತಿಮ ನಮನ ಸಲ್ಲಿಸಿದ WWE ಫೈಟರ್ ಜಾನ್ ಸೀನಾ
ನಿನ್ನೆ ನಿಧನ ಹೊಂದಿದ ಖ್ಯಾತ ನಟ ರಿಶಿ ಕಪೂರ್ ಅವರಿಗೆ ಕೋಟ್ಯಂತರ ಮಂದಿ ಅಂತಿಮ ನಮನ ಸಲ್ಲಿಸಿದ್ದಾರೆ. ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ ಅಂತಿಮ ವಂದನೆ ಸಲ್ಲಿಸಿದ್ದಾರೆ.
ಬಾಲಿವುಡ್ ನ ಖ್ಯಾತ ನಟ-ನಟಿಯರು ರಿಶಿ ಕಪೂರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ. ಲಾಕ್‌ಡೌನ್ ಇರುವ ಕಾರಣ ಅಂತಿಮ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲಾಗದ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿಯೇ ಭಾವನಾತ್ಮಕ ವಿದಾಯಗಳನ್ನು ಹೇಳಿದ್ದಾರೆ.
ಈ ನಡುವೆ ವಿಶೇಷವೆಂದರೆ ಭಾರತೀಯ ಸಿನಿಮಾದೊಂದಿಗೆ ಏನೊಂದು ಸಂಬಂಧವಿಲ್ಲದ ಜಗದ್ವಿಖ್ಯಾತ WWE ಫೈಟರ್ ಜಾನ್ ಸೀನ ಸಹ ರಿಶಿ ಕಪೂರ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ರಿಶಿ ಕಪೂರ್ ಚಿತ್ರ ಪ್ರಕಟಿಸಿರುವ ಜಾನ್ ಸೀನಾ
ಹೌದು, ಜಾನ್ ಸೀನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಿಶಿ ಕಪೂರ್ ಚಿತ್ರವನ್ನು ಪ್ರಕಟಿಸಿ, 'ಇವರೊಬ್ಬ ದಂತಕತೆ' ಎಂಬ ಸಾಲನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಅವರು ನಿನ್ನಯೇ ಹಾಕಿದ್ದಾರೆ.

ಹಲವು ಸಿನಿಮಾಗಳಲ್ಲಿ ನಟಿಸಿರುವ ಜಾನ್ ಸೀನಾ
WWE ಖ್ಯಾತ ಫೈಟರ್ ಆಗಿರುವ ರಿಶಿ ಕಪೂರ್, ಸಿನಿಮಾ ನಟರೂ ಹೌದು, ಹಲವು ಹಾಲಿವುಡ್ ಆಕ್ಷನ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮರೀನ್, 12 ರೌಂಡ್ಸ್, ದಿ ಸೂಸೈಡ್ ಸ್ಕ್ವಾಡ್ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿ ಬಗ್ಗೆ ಪೋಸ್ಟ್ ಹಾಕಿದ್ದರು
ಜಾನ್ ಸೀನಾ ಭಾರತೀಯರ ಬಗ್ಗೆ ಪೋಸ್ಟ್ ಹಾಕುತ್ತಿರುವುದು ಇದು ಮೊದಲೇನೂ ಅಲ್ಲ, ಅವರು ಈ ಮುಂಚೆ ಬಿಗ್‌ಬಾಸ್ 13 ನೇ ಸೀಸನ್‌ನ ಸ್ಪರ್ಧಿ, ಅಸೀಮ್ ರಿಯಾಜ್ ಬಗ್ಗೆಯೂ ಪೋಸ್ಟ್ ಹಾಕಿದ್ದರು. ಅಸೀಮ್ ರಿಯಾಜ್ ಗೆ ಮತ ಹಾಕುವಂತೆ ಮನವಿ ಸಹ ಮಾಡಿದ್ದರು.

ನಿನ್ನೆ ನಿಧನ ಹೊಂದಿದ ನಟ ರಿಶಿ ಕಪೂರ್
ನಟ ರಿಶಿ ಕಪೂರ್ ಅವರು ನಿನ್ನೆ ಬೆಳಿಗ್ಗೆ ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಲಾಕ್‌ಡೌನ್ ಇದ್ದ ಕಾರಣ ಕುಟುಂಬ ವರ್ಗದವರ ಉಪಸ್ಥಿತಿಯಲ್ಲಿ ಅವರ ವಿಧಿ ವಿಧಾನ ನಿನ್ನೆ ಮುಗಿಸಲಾಗಿದೆ.


Click it and Unblock the Notifications











