'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್ ಈಗ ಬಹಳ ಖುಷಿಯಲ್ಲಿದ್ದಾರೆ. ತಮ್ಮ ಮಾಜಿ ಪತ್ನಿ ಅಂಬರ್ ಹರ್ಡ್‌ ವಿರುದ್ಧ ಕೇಸು ಗೆದ್ದಿರುವ ಜಾನಿ, ಭಾರಿ ಮೊತ್ತದ ಪರಿಹಾರ ಹಣವನ್ನೂ ಸಹ ಪಡೆಯಲಿದ್ದಾರೆ.

ಜಾನಿ ಡೆಪ್ ಹಾಗೂ ಅಂಬರ್ ಹರ್ಡ್‌ ನಡುವಿನ ಕೋರ್ಟ್ ಕಲಾಪ ವಿಶ್ವದ ಗಮನ ಸೆಳೆದಿತ್ತು. ಜಾನಿ ಡೆಪ್ ವಿರುದ್ಧ ಗೃಹ ದೌರ್ಜನ್ಯ, ಲೈಂಗಿಕ ಕಿರುಕುಳಗಳಂಥಗಾ ಗಂಭೀರ ಆರೋಪವನ್ನು ಅಂಬರ್ ಹರ್ಡ್‌ ಮಾಡಿದ್ದರು. ಇಂಥಹಾ ಗಂಭೀರ ಪ್ರಕರಣಗಳಿಂದ ಪಾರಾಗಿ ಗೆದ್ದಿರುವ ಜಾನಿ ಡೆಪ್ ಈ ಗೆಲುವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಜಾನಿ ಡೆಪ್, ತಮ್ಮ ಈ ಗೆಲುವನ್ನು ಗೆಳೆಯರೊಟ್ಟಿಗೆ ಅದ್ಧೂರಿಯಾಗಿ ಸಂಭ್ರಮಿಸಿದ್ದು, ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಭಾರತೀಯ ರೆಸ್ಟೊರೆಂಟ್‌ ಒಂದರಲ್ಲಿ ಅದ್ಧೂರಿ ಪಾರ್ಟಿ ಮಾಡಿದ್ದಾರೆ.

Johnny Depp Spends 48 Lakh Rs In Indian Restaurant For Party

ಬರ್ಮಿಂಗ್‌ಹ್ಯಾಮ್‌ನಲ್ಲಿ 'ವಾರಣಾಸಿ' ಹೆಸರಿನ ಭಾರತೀಯ ರೆಸ್ಟೊರೆಂಟ್‌ನಲ್ಲಿ ಗೆಳೆಯರೊಟ್ಟಿಗೆ ಕೆಲ ದಿನಗಳ ಹಿಂದೆ ಪಾರ್ಟಿ ಮಾಡಿರುವ ಜಾನಿ ಡೆಪ್, ಒಂದೇ ರಾತ್ರಿಗೆ ಸುಮಾರು 48 ಲಕ್ಷ ರುಪಾಯಿ ಬಿಲ್ ಪಾವತಿಸಿದ್ದಾರೆ.

ವಾರಣಾಸಿ ರೆಸ್ಟೊರೆಂಟ್‌ನಲ್ಲಿ 'ಕರ್ರಿ ಪಾರ್ಟಿ'ಯನ್ನು ಜಾನಿ ಡೆಪ್ ಹಾಗೂ ಗೆಳೆಯರು ಮಾಡಿದ್ದಾರೆ. ಪಾರ್ಟಿಯಲ್ಲಿ ವಿಧ ವಿಧವಾದ ಕಾಕ್‌ಟೇಲ್‌ಗಳು, ರೋಸ್ ಶಾಂಪೇನ್ ಸೇರಿದಂತೆ ವಿವಿಧ ಮಾದರಿಯ ಮದ್ಯವನ್ನು ಸರ್ವ್ ಮಾಡಲಾಗಿದೆ. ಜೊತೆಗೆ ಅತಿಥಿಗಳೆಲ್ಲರಿಗೂ ಭಾರತೀಯ ಆಹಾರವನ್ನು ಉಣಬಡಿಸಲಾಗಿದೆ.

ಜಾನಿ ಡೆಪ್ ನೀಡಿದ ಪಾರ್ಟಿಯಲ್ಲಿ ಸಂಗೀತ ನಿರ್ದೇಶಕ ಜೆಫ್ ಬೆಕ್ ಸೇರಿದಂತೆ ಸುಮಾರು 20 ಮಂದಿ ಇದ್ದರು ಎನ್ನಲಾಗುತ್ತಿದೆ. ಕೇವಲ 20 ಜನರಿಗೆ ನೀಡಿದ ಪಾರ್ಟಿಗೆ 48.22 ಲಕ್ಷ ರುಪಾಯಿಯನ್ನು (62,000 ಡಾಲರ್) ಜಾನಿ ಡೆಪ್ ಖರ್ಚು ಮಾಡಿದ್ದಾರೆ.

20,000 ಚದರ ಅಡಿಯ ವಾರಣಾಸಿ ರೆಸ್ಟೊರೆಂಟ್‌ ಅನ್ನು ಒಂದು ರಾತ್ರಿಗೆ ಬಾಡಿಗೆ ಪಡೆದಿದ್ದರು ಜಾನಿ. ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವಾರಣಾಸಿ ರೆಸ್ಟೊರೆಂಟ್‌ನ ಮ್ಯಾನೇಜರ್ ಮೊಹಮ್ಮದ್ ಹುಸೇನ್, ಭಾನುವಾರ ಮಧ್ಯಾಹ್ನ ನಮಗೆ ಇದ್ದಕ್ಕಿದ್ದಂತೆ ಕರೆ ಬಂತು, 'ಜಾನಿ ಡೆಪ್ ತಮ್ಮ ಗೆಳೆಯರೊಟ್ಟಿಗೆ ನಿಮ್ಮ ರೆಸ್ಟೊರೆಂಟ್‌ಗೆ ಬಂದು ಭೋಜನ ಸವಿಯಲಿದ್ದಾರೆ'' ಎನ್ನಲಾಯಿತು. ನಾವು ಮೊದಲು ಇದನ್ನು ನಂಬಿರಲಿಲ್ಲ. ಆದರೆ ಬಳಿಕ ಜಾನಿ ಡೆಪ್‌ನ ಭದ್ರತಾ ತಂಡ ಬಂದಾಗಲೇ ನಮಗೆ ಖಾತ್ರಿಯಾಗಿದ್ದು'' ಎಂದಿದ್ದಾರೆ.

''ಜಾನಿ ಡೆಪ್‌ನ ಭದ್ರತಾ ತಂಡ ಬಂದು ರೆಸ್ಟೊರೆಂಟ್‌ನ ಹೊರಗೆ, ಒಳಗೆ ಪರಿಶೀಲನೆ ನಡೆಸಿ, ಜಾನಿ ಡೆಪ್ ಯಾವ ಸಮಯಕ್ಕೆ ಎಷ್ಟು ಜನರೊಟ್ಟಿಗೆ ಬರಲಿದ್ದಾರೆ ಎಂಬ ಮಾಹಿತಿ ನೀಡಿದರು. ನಾವು ಜಾನಿ ಡೆಪ್‌ಗಾಗಿ ಇತರ ಗ್ರಾಹಕರಿಗೆ ರೆಸ್ಟೊರೆಂಟ್ ಅನ್ನು ಬಂದ್ ಮಾಡಿದೆವು. ಕೇವಲ ಜಾನಿ ಡೆಪ್ ಹಾಗೂ ಅವರ ಗೆಳೆಯರು ಮಾತ್ರವೇ ರೆಸ್ಟೊರೆಂಟ್‌ನಲ್ಲಿ ಭೋಜನ ಸವಿದರು. ಒಳ್ಳೆಯ ಸಮಯವನ್ನು ಅವರು ನಮ್ಮಲ್ಲಿ ಕಳೆದರು'' ಎಂದಿದ್ದಾರೆ ಮ್ಯಾನೇಜರ್ ಮೊಹಮ್ಮದ್ ಹುಸೇನ್.

''ಜಾನಿ ಡೆಪ್ ಅದ್ಭುತವಾದ ಮನುಷ್ಯ. ನಮ್ಮೊಂದಿಗೆ, ನಮ್ಮ ಇತರ ಸಿಬ್ಬಂದಿಗಳೊಟ್ಟಿಗೆ ಬಹಳ ಪ್ರೀತಿಯಿಂದ ಅವರು ನಡೆದುಕೊಂಡರು. ನಾವೆಲ್ಲ ಅವರೊಟ್ಟಿಗೆ ಫೋಟೊಕ್ಕೆ ಫೋಸು ನೀಡಿದೆವು. ಇದನ್ನು ನಾನೆಂದೂ ಊಹಿಸಿರಲಿಲ್ಲ. ಅವರಿಗೆ ನಮ್ಮೆಲ್ಲರ ಜೊತೆ ಸಾಕಷ್ಟು ಸಮಯ ವ್ಯಯಿಸಿದರು. ಅಷ್ಟೇ ಅಲ್ಲದೆ, ನನ್ನ ಕಚೇರಿಯಲ್ಲಿ ಸುಮಾರು 20 ನಿಮಿಷ ಕುಳಿತು ನನ್ನೊಂದಿಗೆ ಮಾತನಾಡಿದರು. ಸಿಸಿಟಿವಿ ಹೇಗೆ ಕೆಲಸ ಮಾಡುತ್ತದೆ ಎಂಬೆಲ್ಲ ಮಾಹಿತಿಯನ್ನು ನನ್ನಿಂದ ಪಡೆದುಕೊಂಡರು'' ಎಂದರು ಮೊಹಮ್ಮದ್.

''ನಾವು ಕಳೆದ ಒಂದು ವಾರದಲ್ಲಿ ಮಾಡಿದ ಬ್ಯುಸಿನೆಸ್‌ ಅನ್ನು ಜಾನಿ ಡೆಪ್ ಬಂದ ಒಂದೇ ದಿನದಲ್ಲಿ ಮಾಡಿದೆವು. ಐದು ಅಂಕೆಗಳ ಬಿಲ್ ಅನ್ನು ಅವರು ನೀಡಿ ಹೋದರು. ಒಂದು ವಾರ ನಾವು ಗಳಿಸಿದ ಬಿಲ್‌ಗಿಂತಲೂ ಎಷ್ಟೋ ಪಾಲು ಹೆಚ್ಚು ಅದು. ಅವರೊಬ್ಬ ಅದ್ಭುತ ವ್ಯಕ್ತಿ ಬಹಳ ಪ್ರೀತಿ, ಗೌರವದಿಂದ ನಮ್ಮನ್ನೆಲ್ಲ ಕಂಡರು. ಬಹಳ ಪ್ರೀತಿಯಿಂದ ಮಾತನಾಡಿದರು. ಅವರು ನನ್ನೊಟ್ಟಿಗೆ ನನ್ನ ಆಫೀಸ್‌ನಲ್ಲಿ ಕುಳಿತು ಮಾತನಾಡುತ್ತಾರೆ ಎಂದು ನಾನು ಎಣಿಸಿಯೇ ಇರಲಿಲ್ಲ'' ಎಂದಿದ್ದಾರೆ ಮೊಹಮ್ಮದ್.

More from Filmibeat

English summary
Hollywood star actor Johnny Depp partied in an Indian restaurant in Birmingham, England. He spent nearly 48 lakh rs in just one night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X