»   » ಭಾರತದಾದ್ಯಂತ ಬಾಕ್ಸಾಫೀಸ್ ಧೂಳಿಪಟ ಮಾಡಿದ 'ಜಂಗಲ್ ಬುಕ್'

ಭಾರತದಾದ್ಯಂತ ಬಾಕ್ಸಾಫೀಸ್ ಧೂಳಿಪಟ ಮಾಡಿದ 'ಜಂಗಲ್ ಬುಕ್'

Posted By:
Subscribe to Filmibeat Kannada

ಇಡೀ ಭಾರತದಾದ್ಯಂತ ಏಪ್ರಿಲ್ 8 ರಂದು ಅದ್ದೂರಿಯಾಗಿ ತೆರೆಗೆ ಬಂದಿದ್ದ ಬಹುನಿರೀಕ್ಷಿತ ಮಕ್ಕಳ ಚಿತ್ರವಾದ 'ದಿ ಜಂಗಲ್ ಬುಕ್' ಬಾಕ್ಸಾಫೀಸ್ ಉಡೀಸ್ ಮಾಡಿದೆ. ಈ ಸಿನಿಮಾ ಹಿಂದಿ ಭಾಷೆಯಲ್ಲೂ ತೆರೆ ಕಂಡಿದ್ದು, ಇಡೀ ಬಿಟೌನ್ ನಲ್ಲಿ ಅಲೆ ಎಬ್ಬಿಸಿದೆ.

ಅದೇ ದಿನ ತೆರೆ ಕಂಡ ತೆಲುಗು ಸಿನಿಮಾ 'ಸರ್ದಾರ್ ಗಬ್ಬರ್ ಸಿಂಗ್' ಹಾಗೂ ಬಾಲಿವುಡ್ ಸಿನಿಮಾಗಳಾದ 'ಕಪೂರ್ ಅಂಡ್ ಸನ್ಸ್ ಮತ್ತು ನೀರ್ಜಾ ಚಿತ್ರಗಳ ವಾರದ ಕಲೆಕ್ಷನ್ಸ್ ಹಿಂದಿಕ್ಕಿ ಹಾಲಿವುಡ್ ಸಿನಿಮಾ 'ದಿ ಜಂಗಲ್ ಬುಕ್' ಮೊದಲ ವಾರದಲ್ಲೇ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ.[ಸಾರ್ವಜನಿಕರು ಮನಸ್ಸು ಮಾಡಿದ್ರೆ 'ಜಂಗಲ್ ಬುಕ್' ಕನ್ನಡಕ್ಕೆ ಪಕ್ಕಾ]

'Jungle Book' beats 'Kapoor and Sons', 'Neerja' in a week at the box office

ಹೌದು ಕೇವಲ ಒಂದು ವಾರದಲ್ಲಿ ಬರೋಬ್ಬರಿ 73.50 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ಹೊಸ ರೆಕಾರ್ಡ್ ಹುಟ್ಟುಹಾಕಿದೆ. ಇನ್ನು ಭಾರತದಲ್ಲಿ ತೆರೆಕಂಡ ಹಾಲಿವುಡ್ ಡಬ್ ಚಿತ್ರಗಳ ಪೈಕಿ 'ದಿ ಜಂಗಲ್ ಬುಕ್' 100 ಕೋಟಿ ಕ್ಲಬ್ ಸೇರಲಿರುವ ಮೊದಲ ಚಿತ್ರವಾಗಲಿದೆ.[ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಜಂಗಲ್ ಬುಕ್']

ಹಾಲಿವುಡ್ ಚಿತ್ರ 'ದಿ ಜಂಗಲ್ ಬುಕ್' ಮತ್ತು ಅಲಿಯಾ ಭಟ್, ಸಿದ್ದಾರ್ಥ್ ಕಪೂರ್ ಕಾಣಿಸಿಕೊಂಡಿದ್ದ ಹಿಂದಿ ಸಿನಿಮಾ 'ಕಪೂರ್ ಅಂಡ್ ಸನ್ಸ್' ಏಕಕಾಲಕ್ಕೆ ಸುಮಾರು 1500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದವು.[ಭಾರತದಲ್ಲಿ ಅಮೆರಿಕಕ್ಕಿಂತಲೂ ಮೊದಲೇ ಜಂಗಲ್ ಬುಕ್ ದರ್ಶನ]

1967ರ ಡಿಸ್ನಿ ನಿರ್ವಿುತ ರುಡ್ ಯಾರ್ಡ್ ಕ್ಲಿಪ್ಲಿಂಗ್ ಅವರ ಕಥೆ ಆಧಾರಿತ 'ಜಂಗಲ್​ಬುಕ್' ಚಿತ್ರಕ್ಕೆ 'ಐರನ್ ಮ್ಯಾನ್' ಖ್ಯಾತಿಯ ನಿರ್ದೇಶಕ ಜಾನ್ ಫವ್ರೆಯೂ ಅವರು ಆಕ್ಷನ್-ಕಟ್ ಹೇಳಿದ್ದಾರೆ.

ಭಾರತದಾದ್ಯಂತ ಬಾಕ್ಸಾಫೀಸ್ ಧೂಳಿಪಟ ಮಾಡಿದ 'ಜಂಗಲ್ ಬುಕ್'

ಭಾರತದಾದ್ಯಂತ ಬಾಕ್ಸಾಫೀಸ್ ಧೂಳಿಪಟ ಮಾಡಿದ 'ಜಂಗಲ್ ಬುಕ್'

-
-
-
-
-
-
-
-
-
-
-
-
-
-

English summary
The Jungle Book has reportedly crushed hit movies like 'Kapoor and Sons' and 'Neerja' within a week at the box office in India. The collection of Jon Favreau's 3D live-animation adventure fantasy film have gone up to Rs. 73.50 crore net with the collections on Thursday beating all other days to go up to the Rs 11 crore mark.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X