twitter
    For Quick Alerts
    ALLOW NOTIFICATIONS  
    For Daily Alerts

    ಥ್ರಿಲ್ ಇರದ ಟ್ರೇಲರ್ ಗೂ ಕೋಟಿ ಮಂದಿ ಮೆಚ್ಚುಗೆ

    By ಜೇಮ್ಸ್ ಮಾರ್ಟಿನ್
    |

    ಜುರಾಸಿಕ್ ಪಾರ್ಕ್ ಸರಣಿಯ ನಾಲ್ಕನೇ ಚಿತ್ರ ಜುರಾಸಿಕ್ ವರ್ಲ್ಡ್ ಟ್ರೇಲರ್ ಬಿಡುಗಡೆಗೂ ಮುನ್ನ ಟೀಸರ್ ಬಿಟ್ಟು ಕುತೂಹಲ ಕಾಯ್ದುಕೊಂಡಿದ್ದು ಸಾರ್ಥಕವಾಗಿದೆ. ಜುರಾಸಿಕ್ ವರ್ಲ್ಡ್ ಚಿತ್ರದ ಮೊದಲ ಟ್ರೇಲರ್ ಯೂಟ್ಯೂಬ್ ನಲ್ಲಿ ಕಿಚ್ಚು ಹಬ್ಬಿಸಿದೆ. ಸರಿ ಸುಮಾರು 3 ಬಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿರುವ ಟ್ರೇಲರ್ ಜನಮೆಚ್ಚುಗೆ ಗಳಿಸಿದೆ.

    ಯುನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಈ ಚಿತ್ರಕ್ಕೆ ಮೊದಲ ಎರಡು ಜುರಾಸಿಕ್ ಪಾರ್ಕ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ ಹಾಲಿವುಡ್ ನ ಶ್ರೇಷ್ಠ ಚಿತ್ರಕರ್ಮಿ ಸ್ಟೀವನ್ ಸ್ಪೀಲ್ಬರ್ಗ್ ಕೈಜೋಡಿಸಿರುವುದರಿಂದ ಹೆಚ್ಚಿನ ನಿರೀಕ್ಷೆಯಿದೆ.ನ. 25ರಂದು ಬಿಡುಗಡೆಗೊಂಡ ಟ್ರೇಲರ್ ಈ ಸಮಯಕ್ಕೆ 37,817,910 ವೀಕ್ಷಣೆ, 167,012 ಲೈಕ್ಸ್, 8,267 ಡಿಸ್ ಲೈಕ್ಸ್ ಪಡೆದುಕೊಂಡಿದೆ. ಸುಮಾರು 41,765 ಕಾಮೆಂಟ್ ಗಳು ಕಂಡು ಬಂದಿದೆ. ಚಿತ್ರದ ಸ್ಪೆಷಲ್ ಎಫೆಕ್ಟ್, ಹಳೆ ಚಿತ್ರಗಳ ಥ್ರಿಲ್ ಮಿಸ್ ಆಗಿದೆ ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ.

    Jurassic World first Trailer is out Fans Freak Out

    ಮೈಕಲ್ ಕ್ರಿಚ್ಟನ್ ಅವರ ಡೈನೋಸರರ್ಸ್ ಕಾದಂಬರಿ ಆಧಾರದ ಮೇಲೆ ಜುರಾಸಿಕ್ ಪಾರ್ಕ್ ಚಿತ್ರಗಳು ರೂಪುಗೊಂಡಿದೆ. 2001ರಲ್ಲಿ ಬಿಡುಗಡೆಗೊಂಡ ಜುರಾಸಿಕ್ ಪಾರ್ಕ್ 3 ಅನ್ನು ಸ್ಪೀಲ್ಬರ್ಗ್ ಬದಲಿಗೆ ಜೊ ಜಾನ್ ಸ್ಟನ್ ನಿರ್ದೇಶಿಸಿದ್ದರು. ನಾಲ್ಕನೇ ಚಿತ್ರಕ್ಕೆ ಕಥೆ ಬರೆದು ನಿರ್ದೇಶನದ ಹೊಣೆಯನ್ನು ಕಾಲಿನ್ ಟ್ರೆವೊರೊಗೆ ನೀಡಿದ್ದಾರೆ. ಯುಎಸ್, ಯುಕೆಯಲ್ಲಿ ಜೂನ್12, 2015ರಂದು ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

    ಟ್ರೇಲರ್ ಹೇಗಿದೆ?: 22 ವರ್ಷಗಳ ನಂತರ ಡೈನಾಸರ್ ಥೀಮ್ ಪಾರ್ಕ್ ಹೊಸ ವ್ಯವಸ್ಥೆಯೊಂದಿಗೆ ಆರಂಭಗೊಳ್ಳುತ್ತದೆ. ಒವೆನ್(ಕ್ರಿಸ್ ಪ್ರಾಟ್) ಪಾರ್ಕ್ ನ ಸಿಬ್ಬಂದಿಯಾಗಿ ವೆಲೊಚಿರಾಪ್ಟರ್ಸ್ ಗಳ ಚಲನವಲನಗಳ ಬಗ್ಗೆ ಸಂಶೋಧನೆ ನಡೆಸುತ್ತಿರುತ್ತಾನೆ. ಕಾರ್ಪೋರೇಷನ್ ನ ಮನವಿ ಮೇರೆಗೆ ಪಾರ್ಕಿನ ಜೀವ ವಿಜ್ಞಾನಿಗಳು ಕುಲಾಂತರಿ ವಂಶವಾಹಿ ಸಂಸ್ಕರಿತ ಹೈಬ್ರೀಡ್ ಡೈನೋಸಾರ್ ಗಳನ್ನು ಸೃಷ್ಟಿಸುತ್ತಾರೆ. ಇವುಗಳ ಪೈಕಿ ದೈತ್ಯಸರಿಸೃಪವೊಂದು ವಿಲನ್ (D-Rex) ಆಗಿ ಕಾಡ ತೊಡಗುತ್ತದೆ. [ಟ್ರೇಲರ್ ಗೊಂದು ಟೀಸರ್ ಬಂತು]

    ಉತ್ತಮ ಗ್ರಾಫಿಕ್ಸ್, ಭವಿಷ್ಯದ ತಂತ್ರಜ್ಞಾನದ ಕುರುಹುಗಳನ್ನು ತೋರುವ ಹೈ ಟೆಕ್ ಲ್ಯಾಬ್ಸ್ ಊಹೆಗೂ ನಿಲುಕದ ಥೀಮ್ ಪಾರ್ಕ್ ವಿನ್ಯಾಸದೊಂದಿಗೆ ಜುರಾಸಿಕ್ ವರ್ಲ್ಡ್ ಗೆ ಪ್ರವೇಶ ಸಿಗಲಿದೆ. ಟ್ರೇಲರ್ ನಲ್ಲಿ ಚಿತ್ರದ ಓಟದ ಗತಿ ಸ್ಲೋ ಇರಬಹುದು ಎಂಬ ಅನುಮಾನ ಕಾಡುತ್ತದೆ. ಒಟ್ಟಾರೆ, ಸ್ಪೀಲ್ಬರ್ಗ್ ನ ಡೈರೆಕ್ಟರ್ ಮ್ಯಾಜಿಕ್ ಅಲ್ಲಲ್ಲಿ ಮರೆಯಾಗುವುದು ಮೊದಲ ನೋಟಕ್ಕೆ ಕಂಡು ಬರುತ್ತದೆ.

    English summary
    The first trailer for Jurassic World was released to a fairly positive reception among Jurassic Park fans, Colin Trevorrow’s Sci-Fi action adventure, Jurassic World reboots the Jurassic Park Franchise for the new generation. But, many cine goers not fancy on Hybrid dinosaur D Rex.
    Monday, December 1, 2014, 12:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X