For Quick Alerts
  ALLOW NOTIFICATIONS  
  For Daily Alerts

  'ಜುರಾಸಿಕ್ ವರ್ಲ್ಡ್' ಚಿತ್ರದ ಥ್ರಿಲ್ಲಿಂಗ್ ಟ್ರೈಲರ್ ನೋಡಿ

  By Bharath Kumar
  |

  ಹಾಲಿವುಡ್ ನ ಬಹುನಿರೀಕ್ಷೆಯ 'ಜುರಾಸಿಕ್ ಪಾರ್ಕ್' ಸೀರಿಸ್ ಮುಂದುವರೆದಿದ್ದು, ಐದನೇ ಭಾಗ ತೆರೆಗೆ ಬರಲು ಸಜ್ಜಾಗಿದೆ. ಸದ್ಯ, 'ಜುರಾಸಿಕ್ ವರ್ಲ್ಡ್: ದಿ ಫಾಲೆನ್ ಕಿಂಗ್‍ ಡಮ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮತ್ತೊಂದು ರೋಚಕ ಕಾದಾಟಕ್ಕೆ ಹಾಲಿವುಡ್ ತಯಾರಾಗಿದೆ.

  ಯಾವಾಗಲೋ ನಾಶವಾಗಬೇಕಿದ್ದ ಡೈನೋಸಾರ್ ಗಳು ಮತ್ತೆ ಹುಟ್ಟಿಬಂದರೆ ಏನಾಗುತ್ತದೆ, ಹೇಗಿರುತ್ತವೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಬಂದ ಜುರಾಸಿಕ್ ಸರಣಿಯ ಚಿತ್ರಗಳು ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿವೆ. ಈಗ ಆ ಮನರಂಜನೆ ಮತ್ತೆ ಮುಂದುವರೆದಿದೆ.

  1993ರಲ್ಲಿ ಮೊದಲ ಬಾರಿಗೆ 'ಜುರಾಸಿಕ್ ಪಾರ್ಕ್' ಸಿನಿಮಾ ತೆರೆಕಂಡಿತ್ತು. ನಂತರ 1997ರಲ್ಲಿ 'ದಿ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್' ಸಿನಿಮಾ ಬಿಡುಗಡೆಯಾಗಿತ್ತು. 2001ರಲ್ಲಿ 'ಜುರಾಸಿಕ್ ಪಾರ್ಕ್-3' ರಿಲೀಸ್ ಆಗಿತ್ತು. 2015ರಲ್ಲಿ 'ಜುರಾಸಿಕ್ ವರ್ಲ್ಡ್' ನಾಲ್ಕನೇ ಭಾಗ ಬಂದಿತ್ತು. ಇದೀಗ ಎರಡು ವರ್ಷದ ನಂತರ 'ಜುರಾಸಿಕ್ ವರ್ಲ್ಡ್: ದಿ ಫಾಲೆನ್ ಕಿಂಗ್‍ ಡಮ್' ಎಂಬ ಹೆಸರಿನಲ್ಲಿ ಮತ್ತೆ ರೋಚಕ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

  ಜೆ ಎ ಬಯೋನಾ ನಿರ್ದೇಶನದ ಚಿತ್ರವನ್ನು ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಕ್ರಿಸ್ ಪ್ರಾಟ್, ಬ್ರೈಸ್ ಡಲ್ಲಾಸ್ ಹೋವರ್ಡ್ ಸೇರಿದಂತೆ ಹಲವು ಹಾಲಿವುಡ್ ತಾರೆಗಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೂನ್ 22, 2018ಕ್ಕೆ ಚಿತ್ರ ತೆರೆಗೆ ಬರಲಿದೆ.

  'ಜುರಾಸಿಕ್ ವರ್ಲ್ಡ್: ದಿ ಫಾಲೆನ್ ಕಿಂಗ್‍ ಡಮ್' ಟ್ರೈಲರ್ ಇಲ್ಲಿದೆ ನೋಡಿ

  English summary
  The first trailer for Jurassic World: Fallen Kingdom looks absolutely goofy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X