ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಮೇಲೆ ಲೈಂಗಿಕ ಕಿರುಕುಳ ಆರೋಪ

ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. 2014ರಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಜಸ್ಟಿನ್ ಮೇಲೆ ಆರೋಪ ಮಾಡಲಾಗಿದೆ. ಆದರೆ ಇದನ್ನು ಜಸ್ಟಿನ್ ಬೀಬರ್ ತಳ್ಳಿಹಾಕಿದ್ದಾರೆ. ಇದು ವಾಸ್ತವಿಕವಾಗಿ ಅಸಾದ್ಯ ಎಂದು ಜಸ್ಟಿನ್ ಹೇಳಿದ್ದಾರೆ. ಅಲ್ಲದೆ ಟ್ವಿಟ್ಟರ್ ಮತ್ತು ಅಧಿಕಾರಿಗಳೊಂದಿಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಸ್ಟಿನ್ ಹೇಳಿದ್ದಾರೆ.

Recommended Video

ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

ಏನಿದು ಘಟನೆ?

ಡೇನಿಯಲ್ ಎನ್ನುವ ಮಹಿಳೆಯೊಬ್ಬರು ಗಾಯಕ ಜಸ್ಟಿನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಮಹಿಳೆ "21 ವರ್ಷವಿದ್ದಾಗ ಆಸ್ಟಿನ್ ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಜಸ್ಟಿನ್ ಅನ್ನು ಭೇಟಿಯಾಗಿದ್ದೆ. ಆಗ ಅವರಿಗೆ 21 ವರ್ಷ. ಸಂಗೀತ ಕಾರ್ಯಕ್ರಮದ ನಂತರ ಬೀಬರ್, ನನ್ನನ್ನು ಮತ್ತು ನನ್ನ ಸ್ನೇಹಿತರನ್ನು ಫೋರ್ ಸೀಸನ್ಸ್ ಹೋಟೆಲ್ ಗೆ ಆಹ್ವಾನಿಸಿದರು. ಅಲ್ಲಿ ಪ್ರತ್ಯೇಕ ರೂಮ್ ಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ" ಎಂದು ಟ್ವೀಟ್ ಮಾಡುವ ಮೂಲಕ ಆರೋಪ ಮಾಡಿದ್ದಾರೆ.

ಆದರೆ ಬೇರೆ ಯಾವುದೆ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಈ ಆರೋಪವನ್ನು ನಿರಾಕರಿಸಿರುವ ಜಸ್ಟಿನ್ ಅಂದು ಟ್ವೀಟ್ ಮಾಡಿರುವುದನ್ನು, ಪತ್ರಿಕಾ ಪ್ರಕಟನೆಗಳನ್ನು ಮತ್ತು ಅಂದು ತಾನು ತಂಗಿದ್ದ ಹೋಟೆಲ್ ವಿವರಗಳನ್ನು ನೀಡಿ, ಆರೋಪ ತಳ್ಳಿ ಹಾಕಿದ್ದಾರೆ. ಜೊತೆಗೆ ಅಂದು ಗೆಳತಿ ಸೆಲನಾ ಗೊಮೆಜ್ ಜೊತೆ ಆಸ್ಟಿನ್ ನಲ್ಲಿದ್ದ ಬಗ್ಗೆಯೂ ಹೇಳಿದ್ದಾರೆ.

https://kannada.filmibeat.com/hollywood/oscars-2021-postponed-to-april-25-due-to-coronavirus-pandemic-043638.html

"ಈ ಕಥೆಯಲ್ಲಿ ಯಾವುದೆ ಸತ್ಯವಿಲ್ಲ. ಲೈಂಗಿಕ ಕಿರುಕುಳದ ಪ್ರತಿ ಹಕ್ಕನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಅದಕ್ಕಾಗಿಯೇ ನನ್ನ ಪ್ರತಿಕ್ರಿಯೆಯ ಅಗತ್ಯವಿತ್ತು. ಆದರೆ ಈ ಕಥೆ ವಾಸ್ತವಿಕವಾಗಿ ಅಸಾಧ್ಯ" ಎಂದು ಜಸ್ಟಿನ್ ಟ್ವೀಟ್ ಮಾಡಿದ್ದಾರೆ.

ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜಸ್ಟಿನ್ ವೇರ್ ಯೂ ನೌ, ಬಾಯ್ ಫ್ರೆಂಡ್, ಲವ್ ಯುವರ್ ಸೆಲ್ಫ್ ಸೇರಿದ್ದಂತೆ ಸಾಕಷ್ಟು ಪ್ರಸಿದ್ಧ ಹಾಡುಗಳನ್ನು ಹಾಡಿದ್ದಾರೆ.

More from Filmibeat

English summary
Famous pop Singer Justin Bieber denies sexual assault allegation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X