ಪಾಪ್ ಗಾಯಕ ಜಸ್ಟಿನ್ ಬೀಬರ್ ದಾಂಪತ್ಯದಲ್ಲಿ ಬಿರುಕು, 300 ಮಿಲಿಯನ್ ಡಾಲರ್ ಜೀವನಾಂಶ..!
ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಅಲ್ಲ ಹಾಲಿವುಡ್‌ನಲ್ಲಿ ಕೂಡ ವಿಚ್ಚೇದನದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಖ್ಯಾತ ಗಾಯಕ ಜಸ್ಟಿನ್ ಬೀಬರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿಚ್ಛೇದನ ಕೋರಿ ಜಸ್ಟಿನ್ ಬೀಬರ್ ಪತ್ನಿ ಹೈಲಿ ರೋಡ್ ಬೀಬರ್ ನ್ಯಾಯಾಲಯದ ಮೆಟ್ಟಿಲನ್ನೇರುವ ಸಾಧ್ಯತೆ ಇದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನು ಹಾಗೊಂದು ವೇಳೆ ಜಸ್ಟೀನ್ ಬೀಬರ್ ತಮ್ಮ ಪತ್ನಿ ಹೈಲಿಗೆ ಡಿವೋರ್ಸ್ ನೀಡಿದ್ದೇ ಆದಲ್ಲಿ $300 ಮಿಲಿಯನ್ ಜೀವನಾಂಶ ನೀಡಬೇಕಾಗುತ್ತೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದ್ದು ಜಸ್ಟೀನ್ ಅವರಿಂದ ದೂರವಾಗುವಂತೆ ಹೈಲಿ ರೋಡ್ ಬೀಬರ್ ಅವರ ಮೇಲೆ ಅವರ ಸ್ನೇಹಿತರು ಒತ್ತಡ ಹಾಕುತ್ತಿದ್ದಾರೆ ಎಂದು ಕೂಡ ವರದಿಯಾಗಿದೆ. ಸದ್ಯ ಈ ಸುದ್ದಿ ಜಸ್ಟೀನ್ ಬೀಬರ್ ಅವರ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಯಾಕೆಂದರೆ ಮಾದಕ ಮಾಯಾಜಾಲದಲ್ಲಿ ಸಿಲುಕಿ ಜಸ್ಟೀನ್ ಬೀಬರ್ ಬದುಕು ಹಳಿ ತಪ್ಪಿತ್ತು. ಅಲ್ಲಿಂದ ಹೈಲಿ ಅವರನ್ನು ಪಾರು ಮಾಡಿಕೊಂಡು ಬಂದಿದ್ದರು. ಆದರೆ ಈಗ ಜಸ್ಟೀನ್ ಅವರಿಂದ ಹೈಲಿ ದೂರವಾಗುವ ಸುದ್ದಿ ಕೇಳಿ ಬರುತ್ತಿದೆ.

ಅಂದ್ಹಾಗೇ ಜಸ್ಟೀನ್ ಬೀಬರ್ ಮತ್ತು ಹೈಲಿ ಸೆಪ್ಟೆಂಬರ್ 2018ರಲ್ಲಿ ಮದುವೆಯಾಗಿದ್ದರು. ಅದಕ್ಕೂ ಮುನ್ನ ಕೆಲ ಕಾಲ ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದರು. ಇನ್ನು ಮಾಧ್ಯಮಗಳ ವರದಿಯ ಪ್ರಕಾರ ಮದುವೆ ಮುನ್ನ ಮಾದಕ ದ್ರವ್ಯ ಸೇವನೆಯಿಂದ ದೂರವಿರುವುದಾಗಿ ಹೈಲಿ ಅವರಿಗೆ ಜಸ್ಟೀನ್ ಬೀಬರ್ ಮಾತು ನೀಡಿದ್ದರು.ಹೀಗಾಗಿಯೇ ಹೈಲಿ ರೋಡ್ ಬೀಬರ್ ಅವರನ್ನು ಮದುವೆಯಾದರು. ಆದರೆ ಈಗ ಜಸ್ಟೀನ್ ಬೀಬರ್‌ಗೆ ಮತ್ತೆ ಡ್ರಗ್ಸ್ ಚಟ ಅಂಟಿಕೊಂಡಿದೆ.
ಇನ್ನು ಜಸ್ಟೀನ್ ಮತ್ತು ಹೈಲಿ ಪ್ರೇಮದ ಸಂಕೇತವಾಗಿ ಒಬ್ಬ ಮಗ ಇದ್ದಾನೆ. ಕಳೆದ ವರ್ಷವಷ್ಟೇ ಹುಟ್ಟಿದ ಈ ಮಗುಗೆ ಜ್ಯಾಕ್ ಬ್ಲೂಸ್ ಬೀಬರ್ ಎಂದು ಇಬ್ಬರು ಹೆಸರನ್ನಿಟ್ಟಿದ್ದಾರೆ. ತಮ್ಮ ಈ ಮಗುವಿನ ಭವಿಷ್ಯಕ್ಕೋಸ್ಕರ ಸದ್ಯ ಹೈಲಿ ಆತಂಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ತಂದೆಯ ನಡುವಳಿಕೆ ಮಗನ ಮೇಲೆ ಪರಿಣಾಮವನ್ನು ಬೀರಬಹುದು, ಮಗನ ಜೀವನದ ಜೊತೆ ನನ್ನ ಜೀವನ ಕೂಡ ಹಾಳಾಗಬಹುದು ಎಂದು ಹೈಲಿ ಭಯ ಪಡುತ್ತಿದ್ದಾರೆ ಎಂದು ನ್ಯಾಷನಲ್ ಎನ್ಕ್ವೈರರ್ ವರದಿಯನ್ನು ಮಾಡಿದೆ.
ಇನ್ನು ಜಸ್ಟೀನ್ ಬೀಬರ್ ಮತ್ತು ಹೈಲಿ ಇಬ್ಬರನ್ನು ಹತ್ತಿರದಿಂದ ಬಲ್ಲವರು ಇಬ್ಬರ ದಾಂಪತ್ಯ ಜೀವನದ ಕುರಿತು 'ದಿ ಯುಎಸ್ ಸನ್'ಗೆ ಮಾಹಿತಿಯನ್ನು ನೀಡಿದ್ದು ಮೊದಲಿಂದ ಹೈಲಿ ತನ್ನ ದಾಂಪತ್ಯದಲ್ಲಿ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ಪ್ರೀತಿಗಾಗಿ ಜಸ್ಟಿನ್ ಜೊತೆ ಹೋರಾಡುತ್ತಿದ್ದಾರೆ ಆದರೆ ಜಸ್ಟಿನ್‌ಗೆ ಹೈಲಿಯ ಪ್ರೀತಿಯ ಮೇಲಾಗಲಿ ತನ್ನ ದಾಂಪತ್ಯದ ಮೇಲಾಗಲಿ ಯಾವುದೇ ಗೌರವ ಇಲ್ಲ ಎಂದು ಹೇಳಿದ್ದಾರೆ. ಜಸ್ಟಿನ್‌ನನ್ನು ಹೈಲಿ ಹುಚ್ಚಿಯಂತೆ ಪ್ರೀತಿ ಮಾಡುತ್ತಾಳೆ ಆದರೆ ಅವನು ಆಕೆಯನ್ನು ಕಾಲ ಕಸದಂತೆ ನೋಡುತ್ತಾನೆ ಎಂದು ಹೇಳಿದ್ದಾರೆ. ಹೀಗಾಗಿಯೇ ಜಸ್ಟಿನ್ ಅವರಿಂದ ದೂರವಾಗುವಂತೆ ನಾವೇ ಹೈಲಿ ಅವರಿಗೆ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಸದ್ಯ ಜಸ್ಟಿಬ್ ಬೀಬರ್ ದಾಂಪತ್ಯ ವಿಚಾರ ಸಾರ್ವಜನಿಕ ವಲಯದಲ್ಲಿ ಚಚೇಗೀಡಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಚರ್ಚೆ ನಡೆಯುತ್ತಿದೆ.


Click it and Unblock the Notifications











