Cannes 2023: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಹೆಜ್ಜೆ ಹಾಕಿದ ಕನ್ನಡತಿ: ಕಪ್ಪು ಧಿರಿಸಿನಲ್ಲಿ ಮಿಂಚಿದ ಇತಿ ಆಚಾರ್ಯ

By ಫಿಲ್ಮಿಬೀಟ್ ಡೆಸ್ಕ್

ಕಾನ್ ಫಿಲ್ಮ್ ಫೆಸ್ಟಿವಲ್ ವಿಶ್ವದ ಪ್ರತಿಷ್ಠಿತ ಚಲನ ಚಿತ್ರೋತ್ಸವ. ಬಾಲಿವುಡ್ ತಾರೆಯರು ಭಿನ್ನ ವಿಭಿನ್ನ ಉಡುಗೆ ತೊಟ್ಟು ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹೆಜ್ಜೆ ಹಾಕುತ್ತಾರೆ. ಬರೊಬ್ಬರಿ 10 ದಿನಗಳ ಕಾಲ ನಡೆಯುವ ಈ ಚಲನ ಚಿತ್ರೋತ್ಸವದಲ್ಲಿ ವಿಶ್ವದ ಮೂಲೆ ಮೂಲೆಯಿಂದ ಬಂದಿರೋ ಸೆಲೆಬ್ರೆಟಿಗಳೇ ಕಾಣಿಸುತ್ತಾರೆ.

ಬಹುತೇಕ ಬಾಲಿವುಡ್‌ ನಟಿಯರೇ ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ. ಆದರೆ, ಈ ಬಾರಿಗೆ ಕನ್ನಡತಿಗೂ ಆ ಅವಕಾಶ ಸಿಕ್ಕಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಮಾಡಲ್ ಕಮ್ ನಟಿ ಇತಿ ಆಚಾರ್ಯ ಕೂಡ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದಾರೆ.

ವಿಮ್ ವೆಂಡರ್ಸ್ ನಿರ್ದೇಶಿಸಿದ 'ಅನ್ಸೆಲ್ಮ್' ಸಿನಿಮಾಗಾಗಿ ಕಾನ್ ಚಲನಚಿತ್ರೋತ್ಸವದಲ್ಲಿ ಇತಿ ಆಚಾರ್ಯ ಹೆಜ್ಜೆ ಹಾಕುವ ಅವಕಾಶ ಪಡೆದುಕೊಂಡಿದ್ದರು. ಹೀಗಾಗಿ ಕಪ್ಪು ಬಣ್ಣದ ಗೌನ್ ತೊಟ್ಟು ವಿದೇಶಿ ನೆಲದಲ್ಲಿ ಮಿಂಚಿದ್ದಾರೆ.

Kannada model Ithi Achara walks the red carpet at the Cannes Film Festival 2023

ಕಪ್ಪು ಗೌನ್ ಜೊತೆ ಬೆಂಗಳೂರಿನ ಖಿಯಾ ಜ್ಯುವೆಲ್ಲರಿಯವರ ವಜ್ರದ ಆಭರಣ ಹೊಂದಿಕೊಳ್ಳುತ್ತಿತ್ತು. ಅದರಂತೆಯೇ ದೆಹಲಿ ಮೂಲದ ತಾರಿಣಿ ನಿರುಲಾ ಅವರ ಕರಕುಶಲ ಹಮ್ಮಿಂಗ್ ಬರ್ಡ್‌ ಕಪ್ಪು ಕೈ ಕ್ಲಚ್ ಹಿಡಿದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಚಿತ್ರೋತ್ಸವವನ್ನು ರಂಗೇರಿಸಿದ್ದಾರೆ.ಇತಿ ಆಚಾರ್ಯ ಅಪ್ಪಟ ಕನ್ನಡತಿ. 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕೂಡ ಹೌದು. ಮಾಡಲ್ ಆಗಿ, ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಅನ್ನೋ ಸಂಸ್ಥೆ ನಿರ್ಮಿಸಿ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಹಿಂದಿ, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್‌ನಲ್ಲಿ ಇತಿ ಆಚಾರ್ಯ ಕಾಣಿಸಿಕೊಂಡಿದ್ದರು. ಅಮೆರಿಕಾದ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‌ನಲ್ಲಿ ಕಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಇತಿ ಆಚಾರ್ಯ ಸದ್ಯ ಕಾನ್‌ ಫಿಲ್ಮ್ ಫೆಸ್ಟಿವಲ್‌ಗೂ ಹೋಗಿ ಬಂದಿದ್ದು ಅವರ ವೃತ್ತಿ ಬದುಕಿಗೆ ಹೊಸ ಗರಿ ಬಂದಂತಾಗಿದೆ. ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಇತಿ ಆಚಾರ್ಯ ಹೊಸ ಹೊಸ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Kannada model Ithi Achara walks the red carpet at the Cannes Film Festival 2023, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X