ಟೈಟಾನಿಕ್ ಚಿತ್ರಕ್ಕಾಗಿ ಅನಗತ್ಯ ರೋಮ ತೆಗೆಸಿದ್ದ ಕೇಟ್

ಇತ್ತೀಚೆಗೆ ಈ ಚಿತ್ರದ ತ್ರಿಡಿ ಅವತರಣಿಕೆ ಬಿಡುಗಡೆಯಾಗಿ ಮತ್ತೊಮ್ಮೆ ಪ್ರೇಕ್ಷಕರನ್ನು ಮನತಣಿಸುತ್ತಿದೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ತಮ್ಮ ಅಪೂರ್ವ ಚೆಲುವನ್ನು ಧಾರೆ ಎರೆದ ಕೇಟ್ ವಿನ್ಸ್ ಲೆಟ್. ಈಕೆಯ ಅಪ್ರತಿಮ ಚೆಲುವನ್ನು ಚಿತ್ರದಲ್ಲಿ ಅನಾವರಣಗೊಳಿಸಿದ್ದಾರೆ ಚಿತ್ರದ ನಿರ್ದೇಶಕ ಜೇಮ್ಸ್ ಕೆಮೆರಾನ್.
'ಟೈಟಾನಿಕ್' ಚಿತ್ರೀಕರಣದ ವೇಳೆ ನಡೆದ ಕೆಲವು ಘಟನೆಗಳನ್ನು ಕೇಟ್ ಮೆಲುಕು ಹಾಕಿದ್ದಾರೆ. "ಆಗ ತಮ್ಮ ಕಂಕುಳ ಕೆಳಗಿನ ಕೂದಲನ್ನು ತೆಗೆಯುವಂತೆ ಬಲವಂತ ಮಾಡಿದ್ದರು. ಹಾಲಿನಂತಹ ಬೆಳಕು ನೇರವಾಗಿ ನನ್ನ ಕಂಕುಳ ಕೆಳಗಿನ ಕೂದಲನ್ನು ಫಳ ಫಳನೆ ಹೊಳೆಯುವಂತೆ ಮಾಡುತ್ತಿತ್ತು. ಹಾಗಾಗಿ ಅದನ್ನು ಶೇವ್ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದರು" ಎಂದು ಕೇಟ್ ತೀರಾ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಆಗ ಕೇಟ್ ವಯಸ್ಸು ಅಕ್ಷರಶಃ ಕೇವಲ ಇನ್ನೂ ಇಪ್ಪತ್ತರ ಹರೆಯ. ಚಿತ್ರದ ನಾಯಕ ನಟ ಲಿಯೊನಾರ್ಡೊ ಡಿಕಾಪ್ರಿಯೊ ಜೊತೆ ಲೀಲಾಜಾಲವಾಗಿ ಅಭಿನಯಿಸಿದ್ದರು. ತಮ್ಮ ಕಂಕುಳ ಕೂದಲನ್ನು ತೆಗೆಸುವ ಸಲುವಾಗಿ ನಿರ್ದೇಶಕ ಕೆಮರಾನ್ ಹಾಗೂ ನನ್ನ ನಡುವೆ ಮನಸ್ತಾಪ ತಲೆದೋರಿತ್ತು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಕೇಟ್.
ಚಿತ್ರದ ಸನ್ನಿವೇಶವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಕಂಕುಳ ಕೆಳಗಿನ ಅನಗತ್ಯ ರೋಮಗಳು ಕುಕ್ಕುತ್ತಿದ್ದವು. ಇದರಿಂದ ಕುಪಿತರಾದ ಕೆಮರಾನ್ ಕೂಡಲೆ ಕಟ್ ಹೇಳಿದ್ದರು. "ನಿನ್ನ ಕಂಕುಳ ಕೆಳಗಿನ ಕೂದಲನ್ನು ತೆಗೆಸಬೇಕಾಗಿದೆ. ಹಾಗಾಗಿ ಚಿತ್ರೀಕರಣ ನಿಲ್ಲಿಸಿದ್ದೇವೆ. ಬಳಿಕ ಮೇಕಪ್ ಆರ್ಟಿಸ್ಟ್ ಬಂದು ಜಿಲ್ಲೆಟ್ ಶೇವಿಂಗ್ ಕ್ರೀಮು ಹಚ್ಚಿ ಕೂದಲನ್ನು ತೆಗೆದರು. ಆಗ ಚಕ್ಕಳಗುಳಿ ಇಟ್ಟಂತಾಗಿತ್ತು." ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಮೊದಲೇ ಕೊರೆಯುವ ಚಳಿ. ಕೂದಲನ್ನು ತೆಗೆಸಿದ ಮೇಲೆ ಇನ್ನಷ್ಟು ತಣ್ಣಗಿನ ಅನುಭವಾಗುತ್ತಿತ್ತು. ಇದೆಲ್ಲವನ್ನೂ ನನ್ನ ಸಹ ನಟ ಲಿಯೋನಾರ್ಡೋ ಸುಮ್ಮನೆ ನೋಡುತ್ತಿದ್ದ. ಬಳಿಕ ಅವನನ್ನು ನಾನು ಬೆಚ್ಚಗೆ ಮಾಡಿದೆ. ಆಗ ಅವನಿಗೆ ಕೇವಲ 21ರ ಪ್ರಾಯ.


Click it and Unblock the Notifications











