ಭಾರತದಲ್ಲಿ ನಡೆದ ಭಾವುಕ ಸನ್ನಿವೇಶವನ್ನು ನೆನಪಿಸಿಕೊಂಡ ಟೈಟಾನಿಕ್ ನಾಯಕಿ

ಟೈಟಾನಿಕ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ? ಅತಿ ಹೆಚ್ಚು ಜನರಿಂದ ವೀಕ್ಷಣೆಗೊಳಗೊಂಡ ಸಿನಿಮಾಗಳಲ್ಲಿ ಟೈಟಾನಿಕ್ ಸಹ ಒಂದು.

ಆ ಸಿನಿಮಾದ ನಾಯಕ-ನಾಯಕಿ ಜಗತ್ತಿಗೇ ಮೋಡಿ ಮಾಡಿಬಿಟ್ಟಿದ್ದರು. ಲೈಲಾ-ಮಜ್ನು, ರೋಮಿಯೋ-ಜೂಲಿಯೆಟ್‌ನಂತೆಯೇ ಟೈಟಾನಿಕ್‌ ಸಿನಿಮಾದ ನಾಯಕ-ನಾಯಕಿ, ರೋಸ್-ಜಾಕ್ ಸಹ ಅಮರ ಪ್ರೇಮಿಗಳಾಗಿ ನಿಂತುಬಿಟ್ಟರು.

ಸಿನಿಮಾದ ನಾಯಕ ಲಿಯೊನಾರ್ಡ್ ಡಿಕ್ಯಾಪ್ರಿಕೋ ಮತ್ತು ಕೇಟ್ ವಿನ್ಸ್‌ಲೆಟ್‌ ಯಾವ ಪರಿ ಜನಪ್ರಿಯರಾದರೆಂದರೆ, ತಾವು ಹೆಸರುಗಳೇ ಕೇಳದ ಪ್ರದೇಶಗಳಲ್ಲೂ ಅವರ ಕೀರ್ತಿಗಳು ಪಸರಿಸಿಬಿಟ್ಟಿದ್ದವು. ಅಂಥಹುದ್ದೇ ಒಂದು ಭಾವುಕ ಸನ್ನಿವೇಶ ಭಾರತದಲ್ಲಿ ನಡೆದಿದ್ದು ಅದನ್ನು ಕೇಟ್ ವಿನ್ಸ್‌ಲೆಟ್‌ ನೆನಪು ಮಾಡಿಕೊಂಡಿದ್ದಾರೆ.

ಸಾಹಸಭರಿತ ಪ್ರವಾಸಗಳಿಂದಲೂ ಖ್ಯಾತರು

ಸಾಹಸಭರಿತ ಪ್ರವಾಸಗಳಿಂದಲೂ ಖ್ಯಾತರು

ಟೈಟಾನಿಕ್ ನಾಯಕ ನಟಿ ಕೇಟ್ ವಿನ್ಸ್‌ಲೆಟ್‌ ತಮ್ಮ ಅಭಿನಯ ಚಾತುರ್ಯದಿಂದ ಮಾತ್ರವಲ್ಲ ತಮ್ಮ ಸಾಹಸಭರಿತ ಪ್ರವಾಸಗಳಿಂದಲೂ, ಪರಿಸರ ಪ್ರೇಮದಿಂದಲೂ ಖ್ಯಾತರು. ಟೈಟಾನಿಕ್ ಬಿಡುಗಡೆ ಆದ ಕೆಲವೇ ವರ್ಷಗಳ ನಂತರ ಸಾಹಸ ಯಾತ್ರೆಗೆಂದು ಕೇಟ್ ಭಾರತಕ್ಕೆ ಬಂದಿದ್ದರಂತೆ.

ಹಿಮಾಲಯ ಪರ್ವತ ಬಳಿ ವೃದ್ಧನೊಬ್ಬನ ಭೇಟಿ

ಹಿಮಾಲಯ ಪರ್ವತ ಬಳಿ ವೃದ್ಧನೊಬ್ಬನ ಭೇಟಿ

ಹಿಮಾಲಯ ಪರ್ವತದ ಬುಡದಲ್ಲಿ ಬ್ಯಾಗ್ ಒಂದನ್ನು ಬೆನ್ನಿಗೆ ಏರಿಸಿಕೊಂಡು ಕೇಟ್ ನಡೆಯುತ್ತಿದ್ದರಂತೆ, ಅದೇ ಸಮಯದಲ್ಲಿ ಎದುರಿಂದ ವ್ಯಕ್ತಿಯೊಬ್ಬ ಊರುಗೋಲು ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದನಂತೆ. ಹತ್ತಿರಕ್ಕೆ ಬರುತ್ತಿದ್ದಂತೆ, 'ಯು, ಟೈಟಾನಿಕ್?' ಎಂದು ಅರೆಬರೆ ಇಂಗ್ಲೀಷಿನಲ್ಲಿ 'ನೀವು ಟೈಟಾನಿಕ್ ಸಿನಿಮಾದ ನಾಯಕಿ ಅಲ್ಲವೇ?' ಎಂದು ಕೇಳಿದನಂತೆ ಆ ವೃದ್ಧ. ಇದಕ್ಕೆ ಹೌದೆಂದು ತಲೆ ಆಡಿಸಿದಂತೆ ಕೇಟ್.

ವೃದ್ಧನ ಮಾತು ಕೇಳಿ ಕಣ್ಣೀರು ಹಾಕಿದ ಕೇಟ್

ವೃದ್ಧನ ಮಾತು ಕೇಳಿ ಕಣ್ಣೀರು ಹಾಕಿದ ಕೇಟ್

ಕೇಟ್ ಉತ್ತರ ಕೇಳಿದವನೇ ಆ ವೃದ್ಧ ಎದೆಯ ಮೇಲೆ ಕೈಇಟ್ಟುಕೊಂಡು, 'ಥ್ಯಾಂಕ್ ಯು' ಎಂದನಂರೆ. ಆತನ ಪ್ರತಿಕ್ರಿಯೆ ನೋಡಿ ಕೇಟ್‌ ವಿನ್‌ಸ್ಲೆಟ್‌ ಗೆ ಆ ಕ್ಷಣದಲ್ಲಿ ಕಣ್ಣೀರು ಬಂದು ಬಿಟ್ಟಿತಂತೆ. ಆ ಸಿನಿಮಾ ಎಷ್ಟು ಜನರಿಗೆ ಆಪ್ತವಾಗಿದೆ, ಎಷ್ಟು ಜನಕ್ಕೆ ಇಷ್ಟವಾಗಿದೆ ಅಂಥಹಾ ಸಿನಿಮಾದ ಭಾಗವಾಗಿದ್ದು ಪುಣ್ಯ ಎಂದು ಕೇಟ್‌ ಗೆ ಆ ಕ್ಷಣ ಎನಿಸಿತಂತೆ.

ಅವತಾರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ಅವತಾರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ

ಕೇಟ್ ವಿನ್‌ಸ್ಲೆಟ್ ಟೈಟಾನಿಕ್ ಸೇರಿ ಹಲವು ಪ್ರಶಸ್ತಿ ವಿಜೇತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವತಾರ್ 2 ಸಿನಿಮಾದಲ್ಲಿಯೂ ನಟಿಸಿದ್ದು, ಅದು ಮುಂದಿನ ವರ್ಷ ಬಿಡುಗಡೆ ಆಗಲಿದೆ. ದಿ ಫ್ರೆಂಚ್ ಡಿಸ್‌ಪ್ಯಾಚ್‌, ಅಮ್ಮೋನೈಟ್, ಬ್ಲ್ಯಾಕ್ ಬ್ಯೂಟಿ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

More from Filmibeat

English summary
Titanic heroine Kate Winslet shares an emotional incident that happens to her in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X