For Quick Alerts
  ALLOW NOTIFICATIONS  
  For Daily Alerts

  biffes 2020: ಕಜಕ್ ಇತಿಹಾಸ ಸರಣಿ: ಗೋಲ್ಡನ್ ಥ್ರೋನ್ ವಿಮರ್ಶೆ

  By ಜೇಮ್ಸ್ ಮಾರ್ಟಿನ್
  |

  ಕಜಕ್ ಖಾನ್ಟೆ(Khante) ಅರಸರ ಕಥೆಯುಳ್ಳ ಡೈಮಂಡ್ ಸ್ವಾರ್ಡ್ ಕಾದಂಬರಿಯನ್ನು ಆಧಾರಿಸಿರುವ ಚಿತ್ರ ಗೋಲ್ಡನ್ ಥ್ರೋನ್. ಮೂರು ಚಿತ್ರಗಳ ಸರಣಿಯಲ್ಲಿ ಎರಡನೇ ಚಿತ್ರ ಇದಾಗಿದ್ದು ಬೆಂಗಳೂರಿನಲ್ಲಿ ನಡೆದಿರುವ 12ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಫೆಬ್ರವರಿ 27ರಿಂದ ಮಾರ್ಚ್ 04ರ ತನಕ ಬೆಂಗಳೂರಿನ ವಿವಿಧ ಚಿತ್ರಮಂದಿರದಲ್ಲಿ ವಿವಿಧ ದೇಶ, ಭಾಷೆ, ಪಂಗಡ, ಜನಾಂಗದ ಚಿತ್ರಗಳನ್ನು ನೋಡಬಹುದಾಗಿದೆ.

  ಗೋಲ್ಡನ್ ಥ್ರೋನ್ ಮೊದಲ ಸರಣಿ 2017ರಲ್ಲಿ ತೆರೆ ಕಂಡಿತ್ತು. ಎರಡನೇ ಸರಣಿ ಈ ಬಾರಿ ಆಸ್ಕರ್ ಪ್ರಶಸ್ತಿ ರೇಸಿಗೂ ಕಳಿಸಲಾಗಿತ್ತು. ಆದರೆ, ನಾಮಾಂಕಿತಗೊಂಡಿರಲಿಲ್ಲ. ಕಜಕಸ್ತಾನದ ಚಿತ್ರಕಥೆಗಾರ, ನಿರ್ದೇಶಕ ರುಸ್ಟೆನ್ ಅಬ್ದ್ರಾಶೆವ್ ನಿರ್ದೇಶನದ ಈ ಚಿತ್ರ ಜೆಂಗೀಸ್ ಖಾನ್ ನಂತರ ಆತನ ಮುಂದಿನ ಪೀಳಿಗೆ ಸಾಮ್ರಾಜ್ಯ ಉಳಿಸಿಕೊಳ್ಳುವುದು, ಕಜಕ್ ಬುಡಕಟ್ಟು ಜನಾಂಗದ ಪ್ರತಿರೋಧದ ಸುತ್ತಾ ಸುತ್ತಲಿದೆ.

  ಮೊದಲ ದಿನದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜನಸಾಗರಮೊದಲ ದಿನದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಜನಸಾಗರ

  ಮೂಲತಃ ಅಲೆಮಾರಿಗಳಾದ ಮಂಗೋಲರನ್ನು ಒಗ್ಗೂಡಿಸಿದ ಜೆಂಗೀಸ್ ಖಾನ್, 1206ರ ಹೊತ್ತಿಗೆ ಇತಿಹಾಸದಲ್ಲೇ ಅತಿ ದೊಡ್ಡ ಸಾಮ್ರಾಜ್ಯ ಹೊಂದಿದ್ದ. ಈತನ ಸಾಮ್ರಾಜ್ಯ 92.7 ಲಕ್ಷ ಚದರ ಮೈಲು ವ್ಯಾಪಿಸಿತು. ಕೇಂದ್ರ ಏಷ್ಯಾ, ಜಪಾನ್ ಸಮುದ್ರ, ಕೇಂದ್ರ ಯುರೋಪ್, ಲೆವೆಂಟ್ ಪಶ್ಚಿಮ ಮತ್ತು ಅರೇಬಿಯಾ ತನಕ ವ್ಯಾಪಿಸಿತ್ತು. ಇನ್ನು ಉತ್ತರದ ಕಡೆ ಸೈಬೀರಿಯಾ, ದಕ್ಷಿಣ ಮತ್ತು ಪೂರ್ವಕ್ಕೆ ಇಂಡೋಚೀನಾ, ಇರಾನಿಯನ್ ಪ್ರಸ್ಥ ಭೂಮಿ ಮತ್ತು ಭಾರತದ ಉಪಖಂಡದ ತನಕ ವ್ಯಾಪಿಸಿತ್ತು.

  ಆದರೆ, ನಂತರ 1465ರ ವೇಳೆಗೆ ಚಿನ್ನದ ಸಿಂಹಾಸನ ಏರಲು ಅರ್ಹತೆಯಿದ್ದ ಇಬ್ಬರು ಉತ್ತರಾಧಿಕಾರಿಗಳನ್ನು ದೂರಾಗಿಸಿ ಅಬುಲ್ ಕೈರ್ ಶೈಬಾನಿ ರಾಜ್ಯಭಾರ ನಡೆಸುತ್ತಾನೆ. ಇದರಿಂದ ಕೆರೈ ಹಾಗೂ ಝಾನಿಬೆಕ್ ಕ್ರೋಧಗೊಳ್ಳುತ್ತಾರೆ. ಕಜಕ್ ಪ್ರತಿರೋಧವನ್ನು ಹತ್ತಿಕ್ಕಲು ಯತ್ನಿಸಿದ ಶೈಬಾನಿ ಕೊನೆಗೆ ಯುದ್ಧಭೂಮಿಯಲ್ಲಿ ಯಾವುದೇ ಆಯುಧ ಪ್ರಯೋಗಿಸದೇ ಸಾಯುತ್ತಾನೆ. ಶೈಬಾನ್ ಜನಾಂಗದ ರಾಜಧಾನಿಯನ್ನು ಉಪಾಯದಿಂದ ವಶಪಡಿಸಿಕೊಳ್ಳುವ ಕಜಕ್ ಜನಾಂಗದವರು Syganak ಹಾಗೂ ಗೋಲ್ಡನ್ ಥ್ರೋನ್ ತನ್ನದಾಗಿಸಿಕೊಳ್ಳುತ್ತಾರೆ.

  ಚಿತ್ರದ ಮೇಕಿಂಗ್, ಮರುಭೂಮಿ, ಹಿಮಾಲಯ, ಹುಲ್ಲುಗಾವಲು ಎಲ್ಲವನ್ನು ದೃಶ್ಯದಿಂದ ದೃಶ್ಯಕ್ಕೆ ಚೆನ್ನಾಗಿ ಅಲೆಕ್ಸಾಂಡ್ರ್ ಪ್ಲೊಟ್ನಿಕೊವ್ ಹಾಗೂ ಸಪರ್ ಕೊಯಿಚುಮಾನವ್ ಕಟ್ಟಿಕೊಡುತ್ತಾರೆ. ಚಿತ್ರದ ಆರಂಭದಲ್ಲಿ ಕಜಕ್ ಕಥೆ ಸಕತ್ ವೇಗವಾಗಿ ಹೇಳುವುದರಿಂದ ಫಾಲೋ ಮಾಡೋಕೆ ಕಷ್ಟವಾಗುತ್ತದೆ. ಗೇಮ್ ಆಫ್ ಥ್ರೋನ್ ಮಾದರಿಯಲ್ಲಿ ಟಿವಿ ಸರಣಿಗೆ ಹೇಳಿ ಮಾಡಿಸಿದ ಕಥೆ ಹೊಂದಿರುವ ಕಜಕ್ , ಇತಿಹಾಸ, ಯುದ್ಧ ಸರಣಿ ನೋಡುವವರಿಗೆ ಆಪ್ತವೆನಿಸಬಹುದು.

  English summary
  Golden Throne movie based on the novel ‘Diamond Sword’ is about the kings of Kazakh Khante. the descendants of the great Genghis Khan created their own nationalities while crushing the alien states. the Kazakhs were able to return the capital of the Shaiban tribes - Syganak and their Golden throne without loss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X