»   » ಕೆಂಡಲ್ ಜೆನ್ನರ್ ಹಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕೆಂಡಲ್ ಜೆನ್ನರ್ ಹಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Posted By:
Subscribe to Filmibeat Kannada

ಮಾಡೆಲ್ ಗಳು ಮತ್ತು ನಟಿಯರು ತಮ್ಮ ಬಿಕಿನಿ ಅವತಾರಗಳು, ಹಾಟ್ ಲುಕ್ ನ ಫೋಟೋಗಳನ್ನು ಸಾಮಾಜಿಕ ತಾಲತಾಣಗಳಲ್ಲಿ ಹರಿಯಬಿಡುವುದು ಹೊಸ ವಿಷಯವೇನು ಅಲ್ಲ. ಭಾನುವಾರ ಇಡೀ ಜಗತ್ತು ಮರಿನ್ ಸಿಲಿಕ್ ಮತ್ತು ರೋಜರ್ ಫೆಡರರ್ ನಡುವಿನ ವಿಂಬಲ್ಡನ್ ಫೈನಲ್ ಮ್ಯಾಚ್ ನೋಡುವಲ್ಲಿ ಕಾತುರರಾಗಿದ್ದರು. ಆದರೇ ಅದೇ ಸಮಯಕ್ಕೆ ಅಮೆರಿಕ ಮಾಡೆಲ್ ಕೆಂಡಲ್ ಜೆನ್ನರ್ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದರು.

ಟೆನ್ನಿಸ್ ಪ್ರಿಯರು ಹಾಗೆ ಏಕಾಏಕಿ ಕೆಂಡಲ್ ಜೆನ್ನರ್ ಕಡೆ ಆಕರ್ಷಿತರಾಗಲು ಅವರು ಮಾಡಿದ್ದಾದರೂ ಏನು ಎನ್ನಬಹುದು. ಅಂದು ರೂಪದರ್ಶಿ ಕೆಂಡಲ್ ಜೆನ್ನರ್ ತಮ್ಮ ಇನ್‌ಸ್ಟಗ್ರಾಂ ಖಾತೆಯಲ್ಲಿ ಒಳ ಉಡುಪು ಧರಿಸದೇ ಫೋಟೋಗೆ ಪೋಸ್ ನೀಡಿದ ಚಿತ್ರವನ್ನು ಶೇರ್ ಮಾಡಿದ್ದು, ತಮ್ಮ ಸೆಕ್ಸಿ ಅವತಾರವನ್ನು ಪ್ರದರ್ಶಿಸಿದ್ದೇ ಕಾರಣ. ಈಗ ಅದೇ ಫೋಟೋ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಹ ವೈರಲ್ ಆಗಿದೆ. ಅವರು ಶೇರ್ ಮಾಡಿರುವ ಫೋಟೋ ಈ ಕೆಳಗಿನಂತಿದೆ ನೋಡಿ.

jet lag

A post shared by Kendall (@kendalljenner) on Jul 16, 2017 at 6:45am PDT

ಕೆಂಡಲ್ ಜೆನ್ನರ್ ರವರ ಈ ಸೆನ್ಸೇಷನಲ್ ಫೋಟೋವನ್ನು ನೋಡಿ ಗಾಯಕ ಮತ್ತು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ರವರು ಟ್ವೀಟ್ ಮಾಡಿ, 'ಕೆಂಡಲ್ ಈ ರೀತಿಯ ಫೋಟೋಗಳನ್ನು ಹಾಕಿ ವಿವಾಹಿತರ ಮನಸ್ಸನ್ನು ಚಂಚಲಗೊಳಿಸಬೇಡಿ' ಎಂದು ಕೇಳಿ ಕೊಂಡಿದ್ದರು.

ಇನ್‌ಸ್ಟಗ್ರಾಂ ನಲ್ಲಿ ಕೆಂಡಲ್ ಶೇರ್ ಮಾಡಿರುವ ಒಳ ಉಡುಪು ರಹಿತ ಹಾಟ್ ಫೋಟೋಗೆ ಎರಡು ದಿನಗಳ ಅಂತರದಲ್ಲಿ 2.9 ದಶಲಕ್ಷ ಲೈಕ್‌ಗಳು ಸಿಕ್ಕಿವೆ.

English summary
Kendall Jenner goes braless on Instagram

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada