»   » ಲಕ್ಷ ಮಂದಿ ಮೆಚ್ಚಿದ ಈ ಚಿತ್ರದಾಗ ಅಂಥದ್ದೇನೈತಿ

ಲಕ್ಷ ಮಂದಿ ಮೆಚ್ಚಿದ ಈ ಚಿತ್ರದಾಗ ಅಂಥದ್ದೇನೈತಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್, ಫ್ಯಾಷನ್ ಹಾಗೂ ಟಿವಿ ರಿಯಾಲಿಟಿಶೋ ಗಳ ಮೂಲಕ ರಸಿಕರ ಎದೆಗೆ ಕಿಚ್ಚು ಹಬ್ಬಿಸಿರುವ ಕಿಮ್ ಕದರ್ಶಿಯನ್ ಅವರ ಚಾಳಿ ಅವರ ಸೋದರಿಗೂ ಹಬ್ಬಿದೆ. ಕಿಮ್ ಸೋದರಿ ಕೋಲೆ(Khloe) ಈಗ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದಿದ್ದಾಳೆ.

30ರ ಹರೆಯದ ಕೋಲೆ ಕದರ್ಶಿಯನ್ ತನ್ನ ಸೌಂದರ್ಯವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅನಾವರಣಗೊಳಿಸಿ ಹಾಕಿದ್ದ ಒಂದು ಚಿತ್ರಕ್ಕೆ ಸಿಕ್ಕ ಹಿಂಬಾಲಕರ ಸಂಖ್ಯೆ 14 ಮಿಲಿಯನ್!. ಅಕ್ಕನ ಜೊತೆ ನಡೆಸಿಕೊಡುವ ನಡೆಸಿಕೊಡುವ Keeping Up with the Kardashians ಕಾರ್ಯಕ್ರಮದ ಮೂಲಕ ಕೋಲೆ ಕೂಡಾ ಜನಪ್ರಿಯತೆ ಬೆಳೆಸಿಕೊಂಡಿದ್ದಾಳೆ. [ನಗ್ನತೆ ಸ್ವತಂತ್ರದ ಸಂಕೇತ ಎಂದ ಕಿಮ್]

ಹಿಂದೊಮ್ಮೆ ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ಕಿಮ್ ತನ್ನ 'ಕರ್ವ್' ನೈಸರ್ಗಿಕವಾದದ್ದು ಎಂದು ಸಾಬೀತು ಸಮೇತ ತೋರಿಸಿದ್ದಳು ಇದಕ್ಕೆ ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ 100% ನೈಜವಾದದ್ದು ಎಂದು ಘೋಷಿಸಿದ್ದಳು.

Khloé Kardashian Celebrates 14M Followers With This Hot Pic

ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಕೋಲೆ ಹಾಕಿರುವ ಈ ಅಪರೂಪದ ಚಿತ್ರ ಈಗ ಬಹು ಚರ್ಚಿತವಾಗಿದೆ. ಈ ಚಿತ್ರದಲ್ಲಿ ಕೋಲೆ ತನ್ನ ಮುಖ ಮುಚ್ಚಿಕೊಂಡಿದ್ದು, ಹಿನ್ನೆಲೆ ದೃಶ್ಯಗಳನ್ನು ಬ್ಲರ್ ಮಾಡಲಾಗಿದೆ. ಸಪೂರ ದೇಹ, ನಿತಂಬ ಆಕರ್ಷಕವಾಗಿದೆ ಎಂದು ಫೋಟೋ ತೆಗೆದವರು ಹೇಳಿದ್ದಾರೆ.

"THOT Thursday #14Milli." ಎಂಬ ಅಡಿಬರಹದೊಂದಿಗೆ ಪ್ರಕಟವಾದ ಈ ಚಿತ್ರವನ್ನು ನೋಡಲು ಲಕ್ಷಾಂತರ ಮಂದಿ ಮುಗಿ ಬಿದ್ದಿದ್ದು ಏಕೆ ಎಂಬ ಪ್ರಶ್ನೆ ಇದ್ದೇ ಇದೆ. [ಅಮ್ಮನಾದ ಕಿಮ್ ಕರ್ದಾಶಿಯನ್ ]

ಅದರೆ, ಕಳೆದ ಕೆಲವು ತಿಂಗಳುಗಳಿಂದ ಜಿಮ್ ನಲ್ಲಿ ಬೆವರು ಸುರಿಸಿದ್ದ ಕೋಲೆ ಅನೇಕ ದಿನಗಳ ನಂತರ ಈ ರೀತಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಎದ್ದು ಬಿದ್ದು ಈ ಚಿತ್ರ ನೋಡಲು ಕಾರಣವಿರಬಹುದು ಎಂಬ ಸುದ್ದಿಯೂ ಇದೆ. ತನ್ನ ದೇಹ ಸೌಂದರ್ಯವನ್ನು ಕಾಪಾಡಲು ನೆರವಾಗ ಜಿಮ್ ಟ್ರೈನರ್ ಗುನ್ನರ್ ಪೀಟರ್ಸನ್ ಗೆ ಕೋಲೆ ಥ್ಯಾಂಕ್ಸ್ ಹೇಳಿದ್ದಾಳೆ. ಒಟ್ಟಾರೆ ಅಕ್ಕ ತಂಗಿಯರ ದೇಹಸಿರಿಯನ್ನು ಸವಿಯುವ ಭಾಗ್ಯ ಈ ಸೀಸನ್ ನಲ್ಲಿ ಪಡ್ಡೆಗಳಿಗೆ ನಿರಂತರವಾಗಿ ಸಿಗುವ ಸೂಚನೆಯಂತೂ ಸಿಕ್ಕಿದೆ.

English summary
Khloé Kardashian has a unique and appealing way to thank her fans! On Thursday, the 30-year-old curvy Kardashian beauty celebrated reaching 14 million followers on Instagram with a hot and sexy pic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada