ಗಣೇಶ ಮೂರ್ತಿ ಜೊತೆ ಪೋಸ್ ಕೊಟ್ಟು ನಟಿ ಕಿಮ್​ ಕರ್ದಾಶಿಯಾನ್ ಎಡವಟ್ಟು

ನಟ-ನಟಿಯರಿಗೂ ವಿವಾದಗಳಿಗೂ ಬಿಡಿಸಲಾರದ ನಂಟು. ಇನ್ನು ಫೋಟೊಶೂಟ್ ವೇಳೆಯೂ ಕೆಲವರು ರಾದ್ಧಾಂತ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅಂಬಾನಿ ಮಗನ ಮದುವೆಗೆ ಸಮಾರಂಭಕ್ಕೆ ಹಾಲಿವುಡ್ ನಟ-ನಟಿಯರು, ಪಾಪ್ ಗಾಯಕರು ಹಾಜರಾಗಿದ್ದರು. ಹಾಲಿವುಡ್ ನಟಿ ಕಿಮ್​ ಕರ್ದಾಶಿಯಾನ್ ಕೂಡ ಈ ಲಿಸ್ಟ್‌ನಲ್ಲಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಕಿಮ್​ ಕರ್ದಾಶಿಯಾನ್ ಬಿಂದಾಸ್ ಫೋಟೊಶೂಟ್‌ಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಗೆ ದೇಸಿ ಸ್ಟೈಲ್ ಕಾಸ್ಟೂಮ್‌ನಲ್ಲಿ ಕಿಮ್ ಮಿಂಚಿದ್ದರು. ಲೆಹಂಗಾ ತೊಟ್ಟು ಕಂಗೊಳಿಸಿದ್ದರು. ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ್ದ ಕೆಂಪು ಹಾಗೂ ಬಿಳಿ ಬಣ್ಣದ ಲೆಹಂಗಾದಲ್ಲಿ ಆಕೆ ಕಾಣಿಸಿಕೊಂಡಿದ್ದರು.

Kim Kardashian faced backlash after posing with a Lord Ganesha idol

ಬಿಳಿ ಬಣ್ಣದ ಲೆಹಂಗಾ ತೊಟ್ಟಿದ್ದ ಕಿಮ್ ಮದುವೆ ಮನೆಯಲ್ಲೇ ಕಲರ್‌ಫುಲ್ ಫೋಟೊಶೂಟ್ ಮಾಡಿಸಿದ್ದಾರೆ. ಅಲ್ಲೇ ಇದ್ದ ಗಣಪತಿ ಮೂರ್ತಿ ಮೇಲೆ ಒರಗಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಇತ್ತೀಚಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೊ ಹಂಚಿಕೊಂಡಿದ್ದರು. ಗಣೇಶ ಮೂರ್ತಿ ಮೇಲೆ ಒರಗಿ ಕ್ಲಿಕ್ಕಿಸಿರುವ ಫೋಟೊ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಬಳಿಕ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.

ಈ ಹಿಂದೆ ಅನೇಕ ವಿದೇಶಿ ಸೆಲೆಬ್ರಿಟಿಗಳು ಇದೇ ರೀತಿಯ ತಪ್ಪನ್ನು ಮಾಡಿದ್ದಾರೆ. ಹಿಂದೂಗಳು ಪೂಜಿಸುವ ದೇವರ ಫೋಟೋಗಳು ಮತ್ತು ವಿಗ್ರಹಗಳನ್ನು ವಿದೇಶಿಗರಿಗೆ ಅಲಂಕಾರಿಕ ವಸ್ತುಗಳಂತೆ ಕಾಣಿಸುತ್ತವೆ. ಕಿಮ್ ಕರ್ದಾಶಿಯಾನ್ ಕೂಡ ಅದೇ ತಪ್ಪನ್ನು ಮಾಡಿದ್ದಾರೆ. "ನಿಮ್ಮ ದರಿದ್ರ ಫೋಟೊಶೂಟ್‌ಗೆ ಹಿಂದೂ ದೇವರನ್ನು ಉಪಯೋಗಿಸುತ್ತೀರಾ?" ಎಂದು ಕೆಲವರು ಕಾಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು.

ಮುಂಬೈನಲ್ಲಿ 3 ದಿನಗಳ ಕಾಲ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ ನಡೆಯಿತು. ಭಾರತೀಯ ಚಿತ್ರರಂಗದ ತಾರೆಯರ ಜೊತೆ ಸಾಕಷ್ಟು ಉದ್ಯಮಿಗಳು, ರಾಜಕೀಯ ಮುಖಂಡರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಕರ್ನಾಟಕದಿಂದ ಡಿಸಿಎಂ ಡಿ. ಕೆ ಶಿವಕುಮಾರ್ ಹಾಗೂ ನಟ ಯಶ್ -ರಾಧಿಕಾ ದಂಪತಿ ಭಾಗಿ ಆಗಿದ್ದು ಗಮನ ಸೆಳೆಯಿತು.

ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ದಂಪತಿ, WWE ಜಾನ್ ಸೆನಾ, ಖ್ಲೋ ಮತ್ತು ಕಿಮ್ ಕರ್ದಾಶಿಯಾನ್, ಜಸ್ಟಿನ್ ಬೈಬರ್ ಸೇರಿದಂತೆ ಹಲವು ಹಾಲಿವುಡ್ ಸೆಲೆಬ್ರೆಟಿಗಳು ಭಾಗಿ ಆಗಿದ್ದರು. ರಿಸೆಪ್ಷನ್ ಪಾರ್ಟಿಯಲ್ಲಿ ಹಾಡಿ, ಕುಣಿದು ರಂಜಿಸಿದ್ದಾರೆ.

More from Filmibeat

English summary
Kim Kardashian Poses With Lord Ganesha Idol, later deleted.
Read more about: bollywood hollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X