For Quick Alerts
  ALLOW NOTIFICATIONS  
  For Daily Alerts

  'ಓಂ' ಕಿವಿಯೋಲೆ ಧರಿಸಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಅಮೆರಿಕ ಸ್ಟಾರ್ ಕಿಮ್ ಕಾರ್ದಾಶಿಯನ್

  |

  ಅಮೆರಿಕದ ಟಿವಿ ಸ್ಟಾರ್ ಮತ್ತು ಮಾಡಲ್ ಕಿಮ್ ಕಾರ್ದಾಶಿಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ಜಾಗತಿಕ ಫ್ಯಾಷನ್ ಐಕಾನ್ ಕಿಮ್ ಹಿಂದೂಗಳ ಪವಿತ್ರ 'ಓಂ' ಚಿಹ್ನೆಯ ಕಿವಿಯೋಲೆ ಧರಿಸಿ ಭಾರತೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಅಮೆರಿಕದ ಪ್ರಸಿದ್ಧ ಟಿವಿ ಸ್ಟಾರ್ ಕಿಮ್ ಕಾರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಫ್ಯಾಷನ್ ವಿಚಾರವಾಗಿ ಕಿಮ್ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈ ಬಾರಿ ಓಂ ಚಿಹ್ನೆಯ ಕಿವಿಯೋಲೆ ಧರಿಸಿ ಭಾರತೀಯ ಹಿಂದೂಗಳ ಕೋಪಕ್ಕೆ ಕಾರಣರಾಗಿದ್ದಾರೆ.

  ವಿಚ್ಛೇದನಕ್ಕೆ ಮುಂದಾದರೇ ತಾರಾ ಜೋಡಿ ಕಿಮ್ ಕರ್ದಶಿಯನ್-ಕಾನ್ಯೆ ವೆಸ್ಟ್?ವಿಚ್ಛೇದನಕ್ಕೆ ಮುಂದಾದರೇ ತಾರಾ ಜೋಡಿ ಕಿಮ್ ಕರ್ದಶಿಯನ್-ಕಾನ್ಯೆ ವೆಸ್ಟ್?

  ಕಿಮ್ ಓಂ ಕಿವಿಯೋಲೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ಭಾರತೀಯರಿಗೆ ಬೇಸರ ತರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬೇಸರ ಹೊರಹಾಕುತ್ತಿದ್ದಾರೆ. 'ಇದು ಕೇವಲ ಕಿವಿಯೋಲೆಯಲ್ಲ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೋರ್ವ ಕಾಮೆಂಟ್ ಮಾಡಿ 'ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಬಿಟ್ಟುಬಿಡಿ' ಎನ್ನುತ್ತಿದ್ದಾರೆ.

  ಇನ್ನು ಕೆಲವರು ಭಾರತೀಯ ಸಂಸ್ಕೃತಿಯ ಸ್ವಾಧೀನವನ್ನು ನಿಲ್ಲಿಸುವಂತೆ ಹೇಳುತ್ತಿದ್ದಾರೆ. ಅಂದಹಾಗೆ ಕಿಮ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ ಭಾರತೀಯ ಸಂಸ್ಕೃತಿಯ ಚಿನ್ನದ ಆಭರಣ ಧರಿಸಿ ಭಾರತೀಯ ಕೋಪಕ್ಕೆ ಕಾರಣರಾಗಿದ್ದರು.

  ಸೀಲ್ ಡೌನ್ ಆಗಿರೋ ಏರಿಯಾದಲ್ಲಿ Harshaka ಮತ್ತು Bhuvan ಮಾಡಿದ್ದೇನು ನೋಡಿ | Filmibeat Kannada

  ಇತ್ತೀಚಿಗಷ್ಟೆ ಕಿಮ್ ಪತಿ, ಖ್ಯಾತ ರ್ಯಾಪರ್ ಕಾನ್ಯೆ ವೆಸ್ಟ್ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜಗತ್ತಿನ ದಿ ಬೆಸ್ಟ್ ಕಪಲ್ ಗೋಲ್ ಕೊಡುತ್ತಿದ್ದ ಕಿಮ್ ಮತ್ತು ಕಾನ್ಯೆ ಜೊಡಿಯ ವಿಚ್ಛೇದನ ಅಭಿಮಾನಿಗಳಿಗೆ ಶಾಕ್ ನೀಡಿತ್ತು. 2012ರಲ್ಲಿ ಮದುವೆಯಾಗಿದ್ದ ಈ ಜೋಡಿ ಕೆಲವೇ ವರ್ಷಗಳಲ್ಲಿ ದೂರ ಆಗುವ ನಿರ್ಧಾರ ಮಾಡಿದ್ದಾರೆ. ಕಿಮ್ ಗೆ ಇದು ನಾಲ್ಕನೆ ಮದುವೆಯಾಗಿದೆ.

  English summary
  American TV star Kim Kardashian receives backlash for wearing Om earrings.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X