ವಿವಾದದಲ್ಲಿ ದಕ್ಷಿಣ ಕೊರಿಯಾ ನಟ ಕಿಮ್ ಸೂ ಹ್ಯುನ್; ಒಪ್ಪಂದ ಕಡಿದುಕೊಂಡ ಪ್ರತಿಷ್ಠಿತ ಬ್ರ್ಯಾಂಡ್‌ಗಳು
ದಕ್ಷಿಣ ಕೊರಿಯಾ ನಟ ಕಿಮ್ ಸೂ ಹ್ಯುನ್ ಹಾಗೂ ದಿವಂಗತ ನಟಿ ಕಿಮ್ ಸೆ-ರಾನ್ ನಡುವಿನ ವಿವಾದ ತಾರಕಕ್ಕೇರಿದೆ. ಅವರಿಬ್ಬರ ರಿಲೇಷನ್‌ಶಿಪ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಟಿ ಕಿಮ್ ಸೆ-ರಾನ್ ಆತ್ಮಹತ್ಯೆಗೆ ನಟ ಕಿಮ್ ಸೂ ಹ್ಯುನ್ ಕಾರಣ ಎನ್ನುವ ವದಂತಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಕಿಮ್ ಸೂ ಹ್ಯುನ್ ಅವರು ಅಪ್ರಾಪ್ತ ವಯಸ್ಕರಾಗಿದ್ದ ಕಿಮ್ ಸೇ ರಾನ್ ಅವರೊಂದಿಗೆ ಡೇಟಿಂಗ್ ನಡೆಸಿದ್ದರು, ಗುಟ್ಟಾಗಿ ಇಬ್ಬರೂ ಮದುವೆ ಆಗಿದ್ದರು, ಆಕೆಗೆ ಅಬಾರ್ಷನ್ ಆಗಿತ್ತು, ಪತಿಯ ಒತ್ತಡದಿಂದಲೇ ಕಿಮ್ ಸೇ ರಾನ್ ಆತ್ಮಹತ್ಯೆಗೆ ಶರಣಾದರು ಎನ್ನುವ ಊಹಾಪೋಹ ಶುರುವಾಗಿದೆ. ಅದಕ್ಕೆ ಕಾರಣ ಯೂಟ್ಯೂಬ್‌ನಲ್ಲಿ ಹರದಾಡುತ್ತಿರುವ ಸುದ್ದಿ.

2022ರಲ್ಲಿ ಸೂ ಹ್ಯುನ್ ತನ್ನ ಡಿಯುಐ ಪ್ರಕರಣದ ಬಳಿಕ ಸೇ ರಾನ್‌ನಿಂದ ದೂರಾಗಿದ್ದರು, ಅಷ್ಟೇ ಅಲ್ಲ ಆರ್ಥಿಕ ಒತ್ತಡಕ್ಕೆ ಕಾರಣರಾದರು, ಇದೇ ಕಾರಣಕ್ಕೆ ಆಕೆ ದುಡುಕಿನ ನಿರ್ಧಾರ ಕೈಗೊಂಡಳು ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಕಿಮ್ ಸೂ ಹ್ಯುನ್‌ಗೆ ಹೊಸ ಸಂಕಷ್ಟ ಶುರುವಾಗಿದೆ. ಲಕ್ಸುರಿ ಹೌಸ್ ಪ್ರದಾ ಸೇರಿ ಹಲವು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಆತನ ಜೊತೆಗಿನ ಒಪ್ಪಂದವನ್ನು ಕಡಿದುಕೊಂಡಿವೆ.
ಈಗಾಗಲೇ ಡಿಸ್ನಿ ಪ್ಲಸ್ ಕಿಮ್ ಸೂ ಹ್ಯುನ್ ನಟನೆಯ 'ನಾಕ್‌ಆಫ್' ವೆಬ್ ಸೀರಿಸ್ ಬಿಡುಗಡೆ ಮುಂದೂಡಿದೆ. ಒಟ್ಟಾರೆ ಸೂ ಹ್ಯುನ್ ಭಾರೀ ಸಂಕಷ್ಟ ಎದುರಾಗಿದೆ. ವಿವಾದದಲ್ಲಿ ನಟನ ಹೆಸರು ಕೇಳಿಬರ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆತನನ್ನು ಫಾಲೋ ಮಾಡುವವರ ಸಂಖ್ಯೆ ಕಮ್ಮಿಯಾಗಿದೆ. ಹಣ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ತನ್ನ ಪರ ಪೋಸ್ಟ್ ಮಾಡುವಂತೆ ನಟ ಹೇಳಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.
ಲಕ್ಸುರಿ ಫ್ಯಾಷನ್ ಹೌಸ್ ಪ್ರದಾ ಈಗಾಗಲೇ ನಟ ಕಿಮ್ ಸೂ ಹ್ಯುನ್ ಜೊತೆಗಿನ ಒಪ್ಪಂದ ಕಡಿದುಕೊಂಡಿರುವುದಾಗಿ ಹೇಳಿದೆ. ಕೊರಿಯಾದ ಜನಪ್ರಿಯ ಜಾಗತಿಕ ಸೌಂದರ್ಯವರ್ಧಕ ಬ್ರ್ಯಾಂಡ್ ಡಿಂಟೋ ಕೂಡ ಇದೇ ನಿರ್ಧಾರಕ್ಕೆ ಬಂದಿದೆ. "ಕಿಮ್ ಸೂ ಹ್ಯುನ್ ಜೊತೆಗಿನ ಜಾಹೀರಾತು ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದೆ" ಎಂದು ಹೇಳಿಕೆ ನೀಡಿದೆ.
ದಕ್ಷಿಣ ಕೊರಿಯಾದ ಮತ್ತಷ್ಟು ಉತ್ಪನ್ನಗಳ ಬ್ರ್ಯಾಂಡ್‌ಗಳು ಇದೇ ರೀತಿ ನಟ ಕಿಮ್ ಸೂ ಹ್ಯುನ್ ಜೊತೆಗಿನ ಒಪ್ಪಂದಕ್ಕೆ ಬ್ರೇಕ್ ಹಾಕಿವೆ. ಆತನ ಫೋಟೊಗಳನ್ನು ತಮ್ಮ ಪ್ರಚಾರ ಸಾಮಗ್ರಿಗಳಿಂದ ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾದ ಜನಪ್ರಿಯ ತಾರೆಯರಲ್ಲಿ ಒಬ್ಬರಾದ ಕಿಮ್, ದೇಶ ಹಾಗೂ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ವಿವಾದಕ್ಕೂ ಮುನ್ನ 10 ಕ್ಕೂ ಹೆಚ್ಚು ಬ್ರಾಂಡ್‌ಗಳ ರಾಯಭಾರಿ ಆಗಿದ್ದರು.
ದಿ ಥೀವ್ಸ್, ಸೀಕ್ರೆಟ್‌ಲೀ ಗ್ರೇಟ್‌ಲೀ ಹಾಗೂ ರಿಯಲ್ ಎಂಬ ಸಿನಿಮಾಗಳಲ್ಲಿ ಕಿಮ್ ಸೂ ಹ್ಯುನ್ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವೆಬ್ ಸೀರಿಸ್‌ಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದರು. ಸಾಲು ಸಾಲು ಸೀರಿಸ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಡ್ರೀಮ್ ಹೈ-2', 'ಮೈ ಲವ್ ಫ್ರಂ ದಿ ಸ್ಟಾರ್', 'ಕ್ರಾಶ್ ಲ್ಯಾಂಡಿಂಗ್ ಆನ್ ಯು', 'ಇಟ್ಸ್ ಓಕೆ ಟು ನಾಟ್ ಬಿ ಓಕೆ', 'ಒನ್ ಆಡಿನರಿ ಡೇ' ರೀತಿಯ ಜನಪ್ರಿಯ ಟಿವಿ ಸೀರಿಸ್‌ಗಳಲ್ಲಿ ಅವರು ನಟಿಸಿದ್ದಾರೆ.


Click it and Unblock the Notifications