ಜ.13 ರಿಂದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕೊರಿಯನ್ ಫಿಲ್ಮ್ ಫೆಸ್ಟಿವಲ್
ಎಫ್.ಎಫ್.ಎಸ್.ಐ ಸಹಯೋಗದೊಂದಿಗೆ ನಾಳೆಯಿಂದ (ಜನವರಿ 13) ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕೊರಿಯನ್ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ.

ಕೊರಿಯನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಪಟ್ಟಿ ಇಂತಿದೆ:
ಜನವರಿ 13 - ಸೋಮವಾರ - ಸಂಜೆ 6.30 - ಚಿತ್ರ: ಟೂ ಹಂಡ್ರೆಡ್ ಪೌಂಡ್ಸ್ ಬ್ಯೂಟಿ (ನಿರ್ದೇಶಕ: ಯೋಂಗ್ ವ್ಹಾ ಕಿಮ್)
ಜನವರಿ 14 - ಮಂಗಳವಾರ - ಸಂಜೆ 6.30 - ಚಿತ್ರ: ಪೊಟ್ರೇಟ್ ಆಫ್ ಎ ಬ್ಯೂಟಿ (ನಿರ್ದೇಶಕ: ಜಿಯಾನ್ ಯುನ್ ಸು)
ಜನವರಿ 15 - ಬುಧವಾರ - ಮಧ್ಯಾಹ್ನ 2 - ಚಿತ್ರ: ದಿ ಪೈರೇಟ್ಸ್ (ನಿರ್ದೇಶಕ: ಲೀ ಸಿಯೋಕ್ ಹೂ)
ಜನವರಿ 15 - ಬುಧವಾರ - ಸಂಜೆ 4 - ಚಿತ್ರ: ಮೈ ಗರ್ಲ್ ಫ್ರೆಂಡ್ ಈಸ್ ಆನ್ ಏಜೆಂಟ್ (ನಿರ್ದೇಶಕ: ಟೆರಾ ಶಿನ್)
ಜನವರಿ 15 - ಬುಧವಾರ - ಸಂಜೆ 6.30 - ಚಿತ್ರ: ಎ ಬೇರ್ ಫೂಟ್ ಡ್ರೀಮ್
ಜನವರಿ 17 - ಶುಕ್ರವಾರ - ಸಂಜೆ 7.30 - ಚಿತ್ರ: ಝರಾಬ್
1971 ಆಗಸ್ಟ್ ತಿಂಗಳಲ್ಲಿ ಸಿನಿಮಾ ಆಸಕ್ತ ಸಮಾನ ಮನಸ್ಕ ಎಂಜಿನಿಯರ್ ಗಳು ಒಟ್ಟಾಗಿ ಸುಚಿತ್ರಾ ಫಿಲ್ಮ್ ಸೊಸೈಟಿಗೆ ಚಾಲನೆ ನೀಡಿದರು. ಇಲ್ಲಿಯವರೆಗೂ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಕೊರಿಯನ್, ಜರ್ಮನ್, ಫ್ರೆಂಚ್ ಸೇರಿದಂತೆ ದೇಶ-ವಿದೇಶದ ಅನೇಕ ಭಾಷೆಗಳ ಹಲವು ಚಿತ್ರಗಳು ಪ್ರದರ್ಶನ ಕಂಡಿದೆ.


Click it and Unblock the Notifications











