30 ಕೋಟಿ ಹಿಂಬಾಲಕರು: ಸಾಧನೆ ಮಾಡಿದ ಮೊದಲ ಮಹಿಳೆ ಈಕೆ
ಇದು ಸಾಮಾಜಿಕ ಜಾಲತಾಣದ ಕಾಲ. ವ್ಯಕ್ತಿಯ ಜನಪ್ರಿಯತೆಯನ್ನು ಸಮಾಜಿಕ ಜಾಲತಾಣದಲ್ಲಿ ದೊರಕುವ ಲೈಕ್ಸು, ಕಮೆಂಟ್ಸು, ಫಾಲೋವರ್‌ಗಳ ಮೇಲೆ ಅಳೆಯಲಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವುದು ಸೆಲೆಬ್ರಿಟಿಗಳಿಗೆ ಹೆಮ್ಮೆಯ ವಿಷಯ ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಾನಾ ಅವತಾರಗಳನ್ನು ಸೆಲೆಬ್ರಿಟಿಗಳು ತಾಳುತ್ತಾರೆ. ಇದಕ್ಕಾಗಿ ಲಕ್ಷಾಂತರ, ಕೋಟ್ಯಂತರ ಹಣ ವ್ಯಯಿಸುವುದೂ ಉಂಟು. ಕೆಲವರಂತೂ ಬೆತ್ತಲೆ, ಅರೆ ಬೆತ್ತಲೆ ಚಿತ್ರಗಳನ್ನೂ ಪ್ರಕಟಿಸುತ್ತಾರೆ.
ಇಡೀ ವಿಶ್ವದಲ್ಲಿಯೇ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಶ್ರೇಯ ಇರುವುದು ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊಗೆ. ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪುರುಷರೇ ಹೆಚ್ಚಿದ್ದರು. ಆದರೆ ಇದೀಗ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಹಿಳೆ ಎಂಬ ಖ್ಯಾತಿ ಮಾತ್ರವೆ ಅಲ್ಲದೆ, ವಿಶ್ವದಲ್ಲಿಯೇ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್‌ಗಳನ್ನು ಹೊಂದಿರುವ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆಕೈಲಿ ಜೆನ್ನೆರ್. ಮೊದಲ ಸ್ಥಾನದಲ್ಲಿ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯನೊ ರೊನಾಲ್ಡೊ ಇದ್ದಾರೆ. ಅವರನ್ನು ಇನ್‌ಸ್ಟಾಗ್ರಾಂನಲ್ಲಿ 38 ಕೋಟಿ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ.
ಇನ್‌ಸ್ಟಾಗ್ರಾಂನಲ್ಲಿ ಹಲವು ಮಾದಕ, ಅರೆ ನಗ್ನ ಚಿತ್ರಗಳನ್ನು ಕೈಲಿ ಜೆನ್ನೆರ್ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಜೆನ್ನೆರ್‌ನ ಬಾಯ್‌ಫ್ರೆಂಡ್ ಟ್ರಾವಿಸ್ ಸ್ಕೋಟ್ ಸಂಗೀತ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ ಹತ್ತು ಮಂದಿ ಅಸುನೀಗಿದ ಬಳಿಕ ಸಾಮಾಜಿಕ ಜಾಲತಾಣದಿಂದ ಕೈಲಿ ಜೆನ್ನೆರ್ ದೂರ ಉಳಿದಿದ್ದರು. ಬಳಿಕ ಕಳೆದ ವಾರವಷ್ಟೆ ಕೆಲವು ಚಿತ್ರಗಳನ್ನು ಕೈಲಿ ಜೆನ್ನೆರ್ ಹಂಚಿಕೊಂಡಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕೈಲಿ ಜೆನ್ನೆರ್ ತಮ್ಮ ಪ್ರೆಗ್ನೆನ್ಸಿ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಅತಿ ಹೆಚ್ಚು ಮಂದಿ ಫಾಲೋವರ್ ಹೊಂದಿರುವುದು ಸ್ವತಃ ಇನ್‌ಸ್ಟಾಗ್ರಾಂ. ಇನ್‌ಸ್ಟಾಗ್ರಾಂ ಪೇಜ್ ಅನ್ನು 46 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ. ಆದರೆ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲಿಗಿದ್ದಾರೆ. ಕೈಲಿ ಜೆನ್ನೆರ್ ಎರಡನೇ ಸ್ಥಾನ, 30 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮೂರನೇ ಸ್ಥಾನ, ನಾಲ್ಕನೇ ಸ್ಥಾನದಲ್ಲಿ ರಾಕ್ ಎಂದೇ ಕರೆಯಲಾಗುವ ಡ್ವೇನ್ ಜೋನ್ಸ್ ಇದ್ದಾರೆ. ಅವರನ್ನು 29 ಕೋಟಿ ಜನ ಫಾಲೋ ಮಾಡುತ್ತಾರೆ. ಐದನೇ ಸ್ಥಾನದಲ್ಲಿ ಪಾಪ್ ಗಾಯಕಿ ಅರಿಯಾನಾ ಗ್ರಾಂಡೆ, ಆರನೇ ಸ್ಥಾನದಲ್ಲಿ ಸೆಲಿನಾ ಗೋಮೇಜ್, ಏಳನೇ ಸ್ಥಾನದಲ್ಲಿ ಕಿಮ್ ಕರ್ದಾಶಿಯನ್, ನಂತರ ಬಿಯಾನ್ಸೆ, ಜಸ್ಟಿನ್ ಬೀಬರ್ ಇದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿ ಕ್ರಿಕೆಟ್ ಪಟು ವಿರಾಟ್ ಕೊಹ್ಲಿ, ಇವರನ್ನು 17 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ.


Click it and Unblock the Notifications











