'ಸಂಸ್ಕೃತ' ಬಳಸಿದ ಅಮೆರಿಕಾದ ಪಾಪ್ ತಾರೆ : ಬೆಕ್ಕಸ ಬೆರಗಾದ ಭಾರತೀಯರು.!

ಭಾರತೀಯ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳ ಬಗ್ಗೆ ವಿದೇಶಿಯರು ಆಕರ್ಷಿತರಾಗುವುದು ಹೊಸದೇನಲ್ಲ. ಎಷ್ಟೋ ವಿದೇಶಿಯರು ಭಾರತಕ್ಕೆ ಬಂದು, ಇಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಮದುವೆ ಆದ ಉದಾಹರಣೆಗಳಿವೆ. ಅಷ್ಟಕ್ಕೂ, ಸಂಸ್ಕೃತಿ-ಸಂಪ್ರದಾಯದ ಬಗ್ಗೆ ನಾವು ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಲೇಡಿ ಗಾಗಾ.

ಅಮೇರಿಕಾದ ಅತ್ಯಂತ ಜನಪ್ರಿಯ ಪಾಪ್ ಐಕಾನ್, ಸಿಂಗರ್, ನಟಿ ಲೇಡಿ ಗಾಗಾ ಸಂಸ್ಕೃತದ ಟ್ವೀಟ್ ಮಾಡಿದ್ದಾರೆ. ''ಲೋಕಾಃ ಸಮಸ್ತಾಃ ಸುಖಿನೋ ಭವಂತು'' ಎಂದು ಲೇಡಿ ಗಾಗಾ ಟ್ವೀಟಿಸಿದ್ದಾರೆ.

Recommended Video

ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್' | FILMIBEAT KANNADA

''ಲೋಕಾಃ ಸಮಸ್ತಾಃ ಸುಖಿನೋ ಭವಂತು'' ಅಂದರೆ ಲೋಕದಲ್ಲಿ ಇರುವವರೆಲ್ಲರೂ ಸುಖವಾಗಿರಲಿ ಎಂದರ್ಥ. ಲೇಡಿ ಗಾಗಾ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ ವಿದೇಶಿಯರು ಅರ್ಥ ಹುಡುಕುವಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದರೆ, ಭಾರತೀಯರು ಮಾತ್ರ ಬೆಕ್ಕಸ ಬೆರಗಾಗಿದ್ದಾರೆ. ಮುಂದೆ ಓದಿರಿ...

ಸಿಕ್ಕಾಪಟ್ಟೆ ವೈರಲ್ ಆಗಿರುವ ಟ್ವೀಟ್

ಸಿಕ್ಕಾಪಟ್ಟೆ ವೈರಲ್ ಆಗಿರುವ ಟ್ವೀಟ್

ಲೇಡಿ ಗಾಗಾ ಮಾಡಿರುವ ಸಂಸ್ಕೃತದ ಈ ಟ್ವೀಟ್ ವಿಶ್ವದಾದ್ಯಂತ ವೈರಲ್ ಆಗಿದೆ. ಈ ಟ್ವೀಟ್ ನ 32 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದರೆ, ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ. ಇನ್ನೂ ಸಾವಿರಾರು ಮಂದಿ ಕಾಮೆಂಟ್ ಹಾಕುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಟ್ವೀಟ್ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ.

ಭಾರತೀಯರಿಗೆ ಅಚ್ಚರಿ

ಭಾರತೀಯರಿಗೆ ಅಚ್ಚರಿ

ಲೇಡಿ ಗಾಗಾ ಬಾಯಲ್ಲಿ ಸಂಸ್ಕೃತ ಕೇಳಿ ಭಾರತೀಯರು ಅಚ್ಚರಿಗೊಂಡಿದ್ದಾರೆ. ಸಂಸ್ಕೃತದ ಅರ್ಥವನ್ನು ಜಗತ್ತಿಗೆ ಸಾರುವಲ್ಲಿ ಟ್ವೀಟಿಗರು ಬಿಜಿಯಾಗಿದ್ದಾರೆ. ಜೊತೆಗೆ ಶ್ರೀರಾಮನಿಗೆ ಜೈಕಾರ ಹಾಕುತ್ತಿದ್ದಾರೆ.

ಹೀಗೆ ಟ್ವೀಟ್ ಮಾಡಿದ್ಯಾಕೆ.?

ಹೀಗೆ ಟ್ವೀಟ್ ಮಾಡಿದ್ಯಾಕೆ.?

ಇದಕ್ಕಿದ್ದಂತೆ ಸಂಸ್ಕೃತವನ್ನ ಲೇಡಿ ಗಾಗಾ ಟ್ವೀಟ್ ಮಾಡಿದ್ಯಾಕೆ.? ಆ ಮಂತ್ರವನ್ನ ಇಟ್ಟುಕೊಂಡು ಲೇಡಿ ಗಾಗಾ ಸಾಂಗ್ ಕಂಪೋಸ್ ಮಾಡುತ್ತಿದ್ದಾರಾ.? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ಯಾರು ಈ ಲೇಡಿ ಗಾಗಾ.?

ಯಾರು ಈ ಲೇಡಿ ಗಾಗಾ.?

ಲೇಡಿ ಗಾಗಾ ಪ್ರಖ್ಯಾತ ಗಾಯಕಿ, ಗೀತ ರಚನೆಗಾರ್ತಿ ಮತ್ತು ನಟಿ. 'ದಿ ಫೇಮ್', 'ಬಾರ್ನ್ ದಿಸ್ ವೇ' ಸೇರಿದಂತೆ ಹಲವು ಆಲ್ಬಂಗಳನ್ನು ಹೊರತಂದಿರುವ ಲೇಡಿ ಗಾಗಾ 'ಪೋಕರ್ ಫೇಸ್', 'ಅಲೆಯಾಂಡ್ರೋ', 'ಟೆಲಿಫೋನ್' ಮುಂತಾದ ಹಾಡುಗಳಿಂದ ಜನಪ್ರಿಯತೆ ಪಡೆದರು. ಒಂಬತ್ತು ಗ್ರ್ಯಾಮಿ ಅವಾರ್ಡ್ಸ್, ಎರಡು ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದಿರುವ ಖ್ಯಾತಿ ಕೂಡ ಲೇಡಿ ಗಾಗಾಗಿದೆ.

More from Filmibeat

English summary
American Pop Singer Lady Gaga tweeted a famous Sanskrit Mantra 'Lokah Samastah Sukhino Bhavantu' which has gone viral in Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X