36ನೇ ವರ್ಷದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಜಗದ್ವಿಖ್ಯಾತ ಗಾಯಕಿ ; 1 ತಿಂಗಳು ಸಾವಿನ ಸುದ್ದಿಯನ್ನು ಮುಚ್ಚಿಟ್ಟಿದ್ದೇಕೆ ?

ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಮುಖ್ಯ. ಆದರೆ.. ದೈಹಿಕ ಆರೋಗ್ಯದ ಕುರಿತು ಇನ್ನಿಲ್ಲದಷ್ಟು ಕಾಳಜಿ ವಹಿಸುವ ನಾವು ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದಿಲ್ಲ. ಮಹತ್ವ ನೀಡುವುದಿಲ್ಲ. ಕೆಲವರು ತಮ್ಮ ಮಾನಸಿಕ ಆರೋಗ್ಯದ ಕುರಿತು ತಮ್ಮ ಖಿನ್ನತೆಯ ಕುರಿತು ಮಾತನಾಡಲು ಕೂಡ ಹಿಂಜರಿಯುತ್ತಾರೆ.

ಇದೆಲ್ಲದರ ಪರಿಣಾಮ ಎಂಬಂತೆ ವಿಶ್ವದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕಾಯಿಲೆಗಳಲ್ಲಿ ''ಮಾನಸಿಕ ಖಿನ್ನತೆ''ಗೆ ಮೊದಲ ಸ್ಥಾನ ಇದೆ. ಸಾವು, ಸೋಲು, ನಿರಾಶೆ, ಕಷ್ಟ, ನಷ್ಟಗಳಿಂದ ಅನೇಕರು ಖಿನ್ನತೆಗೊಳಗಾಗುತ್ತಾರೆ. ಹೀಗೆ ಖಿನ್ನತೆಗೊಳಗಾದವರು ಕೆಲ ಒಮ್ಮೆ ಖಿನ್ನತೆಯಿಂದ ಪಾರಾಗುತ್ತಾರೆ. ಕೆಲ ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

the-music-industry-mourns-party-rock-anthem-voice-lauren-bennett-dies-at-36

ಆದರೆ ಇನ್ನೂ ಕೆಲವೊಮ್ಮೆ ಈ ಖಿನ್ನತೆಯಿಂದ ಹೊರ ಬರಲು ಸಾಧ್ಯವಾಗದೇ ಒದ್ದಾಡುತ್ತಾರೆ. ಕೊನೆಗೆ ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ. ''ಲಾರೆನ್ ಬೆನೆಟ್'' ಕೂಡ ಇಂತಹದ್ದೇ ಆತುರದ ನಿರ್ಧಾರ ತೆಗೆದುಕೊಂಡ್ರಾ.? ಮಾನಸಿಕ ಖಿನ್ನತೆಯಿಂದ ಲಾರೆನ್ ಬಳಲುತ್ತಿದ್ದರಾ..? ಎನ್ನುವ ಆತಂಕ ಸದ್ಯ ಹಲವು ಗಾನಪ್ರಿಯರನ್ನು ಕಾಡುತ್ತಿದೆ.

ಹೌದು, ಲಾರೆನ್ ಬೆನೆಟ್.. ತಮ್ಮ ಚಿನ್ನದ ಕಂಠದಿಂದ ವಿಶ್ವದೆಲ್ಲೆಡೆ ಹೆಸರು ಮಾಡಿದ್ದ, ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದ ಗಾಯಕಿ. 2011ರಲ್ಲಿ ಬಂದ ಇವರ ''ಪಾರ್ಟಿ ರಾಕ್ ಆಂಥೆಮ್'' ಹಾಡನ್ನು ಪಾರ್ಟಿ ಪ್ರಿಯರು ಯಾವತ್ತು ಮರೆಯಲು ಸಾಧ್ಯ ಇಲ್ಲ. ಇದು ಮಾತ್ರವಲ್ಲ 'ಅಗ್ಲಿ ಹಾರ್ಟ್‌''.. ''ವೈಲ್ಡ್ ವೈಲ್ಡ್ ಲವ್''.. ''ಲೈಟ್ ಹೌಸ್''..

ಹೀಗೆ ಹೆಚ್ಚು ಕಡಿಮೆ 30 ಚಾರ್ಟ್‌ ಬಸ್ಟರ್ ಹಾಡುಗಳಿಗೆ ಇವರ ಕಂಠ ಕುಣಿದಿತ್ತು. ಇಂಥಾ ಲಾರೆನ್ ಬೆನೆಟ್‌ ತಮ್ಮ 36ರ ಹರೆಯದಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ಸದ್ಯ ಹಾಲಿವುಡ್‌ಗೆ ಬರಸಿಡಿಲಿನಂತೆ ಬಡಿದಿದೆ.

ಇನ್ನೂ ಆಘಾತಕಾರಿ ವಿಚಾರ ಏನಂದರೆ ಲಾರೆನ್ ಬೆನೆಟ್ ಮೇ 29ರಂದೇ ನಿಧನರಾಗಿದ್ದಾರೆ. ಆದರೆ. ಇಲ್ಲಿಯವರೆಗೆ ಇವರ ಸಾವಿನ ಸುದ್ದಿಯನ್ನು ಬಹಿರಂಗಗೊಳಿಸಿರಲಿಲ್ಲ. ನಿನ್ನೆ (ಜುಲೈ 6) ಲಾರೆನ್ ನಿಧನದ ಸುದ್ದಿಯನ್ನು ಹೊರ ಜಗತ್ತಿಗೆ ತಿಳಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಆಗಲೇ ಹೇಳಿದಂತೆ ಲಾರೆನ್ ಬೆನೆಟ್ ಅವರಿಗೆ 36 ವರ್ಷ. ಬದುಕಿದ್ದರೆ ಮೊನ್ನೆಯ ಜೂನ್ 29ಕ್ಕೆ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಅದಕ್ಕೂ ಮುನ್ನವೇ (ಮೇ 29) ಲಾರೆನ್ ದುರಂತ ಅಂತ್ಯ ಕಂಡಿದ್ದಾರೆ.

the-music-industry-mourns-party-rock-anthem-voice-lauren-bennett-dies-at-36

ಬ್ಯಾಂಡ್ ಸದಸ್ಯರು ಭಾವುಕ

ಲಾರೆನ್ ಬೆನೆಟ್ ಕೇವಲ LMFAO ಬ್ಯಾಂಡ್ ಜೊತೆ ಮಾತ್ರ ಕೆಲಸ ಮಾಡಿರಲಿಲ್ಲ. ಬದಲಿಗೆ ಜಿ.ಆರ್.ಎಲ್ ಮತ್ತು ಪ್ಯಾರಾಡಿಸೋ ಗರ್ಲ್ಸ್ ಬ್ಯಾಂಡ್‌ಗಳ ಜೊತೆ ಕೂಡ ಕೆಲಸ ಮಾಡಿದ್ದರು. ಹಾಡು ಹಾಡಿದ್ದರು. ಸದ್ಯ ಲಾರೆನ್ ಬೆನೆಟ್ ಅವರ ಈ ಅಕಾಲಿಕ ನಿಧನದ ಸುದ್ದಿಯಿಂದ ಮ್ಯೂಸಿಕ್ ಇಂಡಸ್ಟ್ರಿ ಶಾಕ್ ಆಗಿದೆ.

ಸೋಮವಾರ (ಜುಲೈ 6) ಲಾರೆನ್ ಅವರ ಈ ಹಳೇ ಬ್ಯಾಂಡ್‌ನ ಸದಸ್ಯರು ಲಾರೆನ್ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದು, ನಮ್ಮ ಪ್ರೀತಿಯ ಲಾರೆನ್ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲು ತುಂಬಾ ಸಂಕಟವಾಗುತ್ತಿದೆ" ಲಾರೆನ್, ನೀನು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀಯಾ - ಇಂತಿ ನಿನ್ನ ಜಿ.ಆರ್.ಎಲ್ ಗೆಳತಿಯರು ಎಮ್, ತಾಶ್ ಮತ್ತು ಪಿ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.


ಲಾರೆನ್ ಬೆನೆಟ್ ಸಾವಿಗೆ ಕಾರಣವೇನು..?

ಲಾರೆನ್ ಬೆನೆಟ್ ಅವರ ಸಾವಿಗೆ ನಿಖರವಾದ ಕಾರಣವೇನು..? ಎನ್ನುವುದನ್ನು ಅವರ ಕುಟುಂಬಸ್ಥರು ಅಥವಾ ಸ್ನೇಹಿತರು ಮಾಧ್ಯಮದವರ ಎದುರು ಹೇಳಿಕೆ ನೀಡಿಲ್ಲ. ಅಧಿಕೃತ ಪ್ರಕಟಣೆಯನ್ನು ಕೂಡ ಜಾರಿ ಮಾಡಿಲ್ಲ. ಆದರೆ ಹಲವರಿಗೆ ಅನುಮಾನ ಅಂತೂ ಇದ್ದೇ ಇದೆ.

ಇನ್ನು ಇದರ ನಡುವೆ ಲಾರೆನ್ ಈ ಹಿಂದೆ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದ್ದರು. ಮೆಂಟಲ್ ಹೆಲ್ತ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ತಮಗಿದ್ದ ಮಾನಸಿಕ ಒತ್ತಡದ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಿದ್ದರು.

ಲಾರೆನ್ ಅವರ ತಾಯಿಯೂ ಕೂಡ ಕೊನೆಯುಸಿರೆಳೆಯುವ ಮುನ್ನ, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು, ಆದರೆ ಲಾರೆನ್ ಇದರ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿರಲಿಲ್ಲವಾದರೂ ಕೂಡ 2014ರಲ್ಲಿ ಅವರ ಜಿ.ಆರ್.ಎಲ್ ಬ್ಯಾಂಡ್ ಗೆಳತಿ ಸಿಮೋನ್ ಬ್ಯಾಟಲ್ ಆತ್ಮಹತ್ಯೆ ಮಾಡಿಕೊಂಡಾಗ ಲಾರೆನ್ ತುಂಬಾ ನೊಂದಿದ್ದರು. ಸಿಮೋನ್ ತೀರಿಕೊಂಡ ಮೇಲೆಯೇ ಜಿ.ಆರ್.ಎಲ್ ಬ್ಯಾಂಡ್ ಕೂಡ ಮುಚ್ಚಿಹೋಯಿತು.

ತಮ್ಮ ಈ ಮನದ ನೋವನ್ನು ಲಾರೆನ್ ತಮ್ಮ ''ಹರಿಕೇನ್'' ಎಂಬ ಹಾಡಿನ ಮೂಲಕ ಹೊರ ಹಾಕಿದ್ದರು ."ಜಿ.ಆರ್.ಎಲ್'' ಬ್ಯಾಂಡ್ ಮುಚ್ಚಿದ ಮೇಲೆ ಮುಂದೆ ಏನಾಗುತ್ತೆ ಅಂತ ನನಗೆ ಗೊತ್ತಿರಲಿಲ್ಲ, ಎಲ್ಲವೂ ಕೈ ಮೀರಿ ಹೋಗಿತ್ತು. ಆಗಲೇ ನಾನು ಈ ಹಾಡು ಬರೆದಿದ್ದು. ನನ್ನ ತಾಯಿ ವರ್ಷಗಟ್ಟಲೆ ಮಾನಸಿಕವಾಗಿ ನರಳುವುದನ್ನು ಕಣ್ಣಾರೆ ನೋಡಿದ್ದೆ, ಆಮೇಲೆ ನನ್ನ ಆತ್ಮೀಯ ಗೆಳತಿಯನ್ನೂ ಇದೇ ಕಾರಣಕ್ಕೆ ಕಳೆದುಕೊಂಡೆ. ಮಾನಸಿಕ ಒತ್ತಡ ಅನ್ನೋದು ನನ್ನ ಜೀವನವನ್ನು ತುಂಬಾ ಕಾಡಿದೆ. ನಮ್ಮ ಸುತ್ತಮುತ್ತ ಯಾರೋ ಒಬ್ಬರು ಈ ನೋವನ್ನು ಅನುಭವಿಸುತ್ತಲೇ ಇರುತ್ತಾರೆ. ಇಂತಹ ತೊಂದರೆಗೆ ಒಳಗಾದಾಗ ಹೇಗಿರುತ್ತೆ ಮತ್ತು ಅಂಥವರನ್ನು ಕಳೆದುಕೊಂಡಾಗ ಆ ನೋವು ಹೇಗಿರುತ್ತೆ ಅನ್ನೋದನ್ನು ಈ ಹಾಡಿನಲ್ಲಿ ತೋರಿಸಿದ್ದೇನೆ." ಎಂದು ವೇದಿಕೆಯ ಮೇಲೆ ಮಾತನಾಡುತ್ತಾ ಭಾವುಕರಾಗಿದ್ದರು.


ಅಕ್ಟೋಬರ್ ನಲ್ಲಿ ವಿಚಾರಣೆ

''USA ಟುಡೇ'' ವರದಿಯ ಪ್ರಕಾರ ಲಾರೆನ್ ಬೆನೆಟ್ ಅವರ ಸಾವಿಗೆ ನಿಖರವಾದ ಕಾರಣವೇನು ಎನ್ನುವುದರ ಕುರಿತು ಅಕ್ಟೋಬರ್ ನಲ್ಲಿ ತನಿಖೆ ನಡೆಯಲಿದೆ. ಈ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆಯಾದರೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಾನಸಿಕ ಖಿನ್ನತೆಯಿಂದ ಲಾರೆನ್ ದುಡುಕಿರಬಹುದು ಎನ್ನುವ ಚರ್ಚೆ ನಡೆಯುತ್ತಿದೆ.


ಲಾರೆನ್‌ಗೆ ಮದುವೆಯಾಗಿತ್ತಾ ..?

ಲಾರೆನ್ ಬೆನೆಟ್ ತಮ್ಮ ವೈಯಕ್ತಿಕ ವಿಚಾರಗಳನ್ನು ತುಂಬಾ ಗೌಪ್ಯವಾಗಿ ಇಟ್ಟಿದ್ದರು. ಈ ಹಿನ್ನೆಲೆ ಇವರ ಮದುವೆ ಕುರಿತು ಸ್ಪಷ್ಟತೆ ಇಲ್ಲವಾದರು ''ಪುಟ್‌ಲೂಸ್'' ಚಿತ್ರದ ನಟ ಮತ್ತು ಡ್ಯಾನ್ಸರ್ ಕೆನ್ನಿ ವೋರ್ಮಾಲ್ಡ್ ಜೊತೆ ಇವರ ಹೆಸರು ಕೇಳಿ ಬಂದಿತ್ತು. 2019ರಲ್ಲಿ ಗುಟ್ಟಾಗಿ ಮದುವೆಯಾದರು ಎಂದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ಪ್ರಕಾರ ಇವರ ಪ್ರೇಮ ಸಂಕೇತವಾಗಿ ಇವರಿಗೆ ಹಾರ್ಲೋ ಎಂಬ 6 ವರ್ಷದ ಹೆಣ್ಣು ಮಗಳಿದ್ದಾಳೆ.

English summary
Pop world mourns Lauren Bennett. The ‘Party Rock Anthem’ and G.R.L. singer has passed away at age 37, leaving millions of fans devastated.
Read more about: death singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X