ಗಮನ ಸೆಳೆದಿರುವ ಪ್ರಕರಣ: ಬ್ರಿಟ್ನಿ ಸ್ಪಿಯರ್ಸ್ ಆಸ್ತಿ ಮೇಲೆ ಅರ್ಧ ಹಿಡಿತ ಕಳೆದುಕೊಂಡ ತಂದೆ

ಬ್ರಿಟ್ನಿ ಸ್ಪಿಯರ್ಸ್‌ ಹಾಗೂ ಆಕೆಯ ತಂದೆಯ ನಡುವೆ ಆಸ್ತಿಗಾಗಿ ಕಾನೂನು ಸಮರ ನಡೆಯುತ್ತಿದೆ. ಗಮನ ಸೆಳೆಯುತ್ತಿರುವ ಅಂಶವೆಂದರೆ ಈ ಕಾನೂನು ಹೋರಾಟ ನಡೆಯುತ್ತಿರುವುದು ಬ್ರಿಟ್ನಿ ಸ್ಪಿಯರ್‌ ಳ ಆಸ್ತಿಯ ಮೇಲೆ ತಂದೆ ಅಧಿಕಾರ ಉಳಿಸಿಕೊಳ್ಳಲು.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ, ಶತಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಬ್ರಿಟ್ನಿ ಸ್ಪಿಯರ್ಸ್‌ ತನ್ನ ಆಸ್ತಿಯನ್ನು ಅನುಭವಿಸಲು ಅಪ್ಪನ ಒಪ್ಪಿಗೆ ಪಡೆಯಬೇಕಾದ ಸ್ಥಿತಿ ಇದೆ. ಇದರಿಂದ ಬಿಡುಗಡೆ ಪಡೆಯಲು ಬ್ರಿಟ್ನಿ ಸ್ಪಿಯರ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಆದರೆ ನ್ಯಾಯಾಲಯದಲ್ಲಿ ಒಮ್ಮೆ ಬ್ರಿಟ್ನಿ ಸ್ಪಿಯರ್‌ಗೆ ಹಿನ್ನಡೆ ಆಗಿದೆ. ಬ್ರಿಟ್ನಿ ಸ್ಪಿಯರ್ ಆಸ್ತಿಯ ಮೇಲೆ ಆಕೆಯ ತಂದೆಗೆ ಇರುವ ಹಿಡಿತವನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ ಬ್ರಿಟ್ನಿ ಸ್ಪಿಯರ್ ಮತ್ತೆ ಪ್ರಯತ್ನ ಮಾಡಿದ್ದು, ಈಗ ಬ್ರಿಟ್ನಿ ಸ್ಪಿಯರ್ ಳ ಕೆಲವು ಆದರೆ ದೊಡ್ಡ ಮೊತ್ತದ ಆಸ್ತಿಯ ಮೇಲೆ ಮಾತ್ರವೇ ಅಪ್ಪನ ಹಿಡಿತ ಉಳಿದಿದೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟ್ನಿ

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬ್ರಿಟ್ನಿ

ಬ್ರಿಟ್ನಿ ಸ್ಪಿಯರ್ ಕೆಲ ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಆಗ ಆಕೆಯ ತಂದೆ ಜೇಮ್ಸ್ ಅನ್ನು ಅವರೇ ತಮ್ಮ ಆಸ್ತಿಯ ಮೇಲುಸ್ತಾವಾರಿಗೆ ನೇಮಿಸಿಕೊಂಡಿದ್ದರು. ಆದರೆ ಇದು ಅವರಿಗೆ ಮುಳುವಾಗಿದ್ದು, ಈಗ ತಂದೆಯನ್ನು ಮೇಲುಸ್ತುವಾರಿ ಹುದ್ದೆಯಿಂದ ತೆಗೆದು ಹಾಕಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ ಆದರೆ ಅದು ಸಾಧ್ಯವಾಗುತ್ತಿಲ್ಲ.

ಬ್ರಿಟ್ನಿ ಸ್ಪಿಯರ್ಸ್ ಆಸ್ತಿಗೆ ಇಬ್ಬರು ಮೇಲುಸ್ತುವಾರಿ

ಬ್ರಿಟ್ನಿ ಸ್ಪಿಯರ್ಸ್ ಆಸ್ತಿಗೆ ಇಬ್ಬರು ಮೇಲುಸ್ತುವಾರಿ

ಹೊಸ ಆದೇಶದಂತೆ ಬ್ರಿಟ್ನಿ ಸ್ಪಿಯರ್‌ರ ಆಸ್ತಿಯನ್ನು ಬ್ರಿಟ್ನಿ ಸ್ಪಿಯರ್ ನೇಮಿಸಿರುವ ಹಣಕಾಸು ಸಂಸ್ಥೆ ಹಾಗೂ ಬ್ರಿಟ್ನಿ ಸ್ಪಿಯರ್ ತಂದೆ ಒಟ್ಟಿಗೆ ನಿರ್ವಹಣೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಬೆಸ್ಸೀಮರ್ ವೆಂಚರ್ಸ್ ಸಂಸ್ಥೆ ಹಾಗೂ ಬ್ರಿಟ್ನಿ ಸ್ಪಿಯರ್ಸ್ ತಂದೆ ಒಟ್ಟಿಗೆ ಕೂತು ಬ್ರಿಟ್ನಿ ಸ್ಪಿಯರ್ಸ್ ಆಸ್ತಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದೆ ನ್ಯಾಯಾಲಯ.

ನ್ಯಾಯಾಲಯದ ಮುಂದೆ ಅಭಿಮಾನಿಗಳ ಪ್ರತಿಭಟನೆ

ನ್ಯಾಯಾಲಯದ ಮುಂದೆ ಅಭಿಮಾನಿಗಳ ಪ್ರತಿಭಟನೆ

ಬ್ರಿಟ್ನಿ ಸ್ಪಿಯರ್ಸ್ ಹಾಗೂ ಆಕೆಯ ತಂದೆ ಜೇಮ್ಸ್ ನಡುವಿನ ಈ ನ್ಯಾಯಾಲಯ ವಿವಾದ ಹಾಲಿವುಡ್ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಬ್ರಿಟ್ನಿ ಅಭಿಮಾನಿಗಳು ನ್ಯಾಯಾಲಯದ ಹೊರಗೆ 'ಫ್ರೀ ಬ್ರಿಟ್ನಿ' ಬೋರ್ಡ್‌ಗಳನ್ನು ಹಿಡಿದು ಪ್ರತಿಭಟನೆ ಸಹ ನಡೆಸಿದ್ದಾರೆ.

Recommended Video

ಪುನೀತ್, ಯಶ್ ಅಭಿಮಾನಿ ಈ ರಿವರ್ಸ್ ಟ್ಯಾಲೆಂಟ್ ಅನುಷ | Filmibeat Kannada
ಹಲವು ಹಾಡುಗಳು ಜಗದ್‌ವಿಖ್ಯಾತ

ಹಲವು ಹಾಡುಗಳು ಜಗದ್‌ವಿಖ್ಯಾತ

ಬ್ರಿಟ್ನಿ ಸ್ಪಿಯರ್ಸ್ ಅವರ 'ಟಾಕ್ಸಿಕ್', 'ಹಿಟ್ ಮಿ ಬೇಬಿ ಒನ್ ಮೋರ್ ಟೈಮ್', 'ವಿಮೆನೈಜರ್', 'ಗಿಮಿ ಮೋರ್', 'ಹೋಲ್ಡ್ ಇಟ್ ಅಗೇನ್ಸ್ ಮೀ' ಇನ್ನೂ ಹಲವಾರು ಹಾಡುಗಳು ಬಹು ಪ್ರಸಿದ್ಧ. ಇದರ ಜೊತೆಗೆ, 'ಲಾಂಗ್ ಶಾಟ್', 'ಕ್ರಾಸ್ ರೋಡ್ಸ್', 'ಜಾಕ್‌ಆಸ್ 3ಡಿ', 'ಕಾರ್ಪೊರೇಟ್ ಅನಿಮಲ್ಸ್' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Legal battle happening between Britney Spears and her father James regarding ownership of Britney Spears property and Investments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X