ವ್ಹೀಲ್‌ಚೇರ್‌ನಲ್ಲಿ ಮೈಕ್ ಟೈಸನ್; ಇಂದೆಂಥ ಸ್ಥಿತಿ ಬಂತು?

ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್ ವ್ಹೀಲ್‌ಚೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾದಲ್ಲಿ ನಟಿಸಿದ್ದ ಟೈಸನ್‌ಗೆ ದಿಢೀರನೇ ಏನಾಯ್ತು ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಬಾಕ್ಸಿಂಗ್ ದಿಗ್ಗಜ ಈ ರೀತಿ ವ್ಹೀಲ್‌ಚೇರ್‌ನಲ್ಲಿ ಓಡಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೈಸನ್ ಹೊರ ಬರುವಾಗ ಈ ಫೋಟೊಗಳನ್ನು ಕ್ಲಿಕ್ಕಿಸಿರುವುದು ಗೊತ್ತಾಗುತ್ತಿದೆ. ಇನ್ನು ಇಂತಹ ಹೊತ್ತಲ್ಲೂ ಕೆಲ ಅಭಿಮಾನಿಗಳು ಬಾಕ್ಸಿಂಗ್ ಚಾಂಪಿಯನ್ ಜೊತೆ ಫೋಟೊಗೆ ಮುಗಿ ಬಿದ್ದಿರುವುದು ಬೇಸರ ತರಿಸಿದೆ.

ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ ಮೈಕ್ ಟೈಸನ್ 'ಸಿಯಾಟಿಕಾ' ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಅಂದರೆ ಬೆನ್ನು ನೋವು ಮತ್ತು ಸೊಂಟದ ನರಗಳ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಹೆಚ್ಚು ಓಡಾಡದೇ, ಆಯಾಸ ಮಾಡಿಕೊಳ್ಳದೇ ಇರಲು ವ್ಹೀಲ್‌ಚೇರ್‌ ಬಳಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಟೈಸನ್ ವಾಕಿಂಗ್ ಸ್ಟಿಕ್ ಹಿಡಿದು ಓಡಾಡುತ್ತಿದ್ದ ಫೋಟೊಗಳು ಸಹ ಹೊರ ಬಂದಿತ್ತು. ಆರೋಗ್ಯದಲ್ಲಿ ಏನು ಸಮಸ್ಯೆ ಇಲ್ಲ. ಮುಂಜಾಗ್ರತೆ ಕ್ರಮವಾಗಿ ಸ್ಟಿಕ್ ಬಳಸುತ್ತಿದ್ದೇನೆ ಎಂದು ಹೇಳಿದ್ದರು.

Legendary Boxer Mike Tyson Spotted On Wheelchair Photos Goes Viral

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಟೈಸನ್ ತಮ್ಮ ಆರೋಗ್ಯದ ಬಗ್ಗೆ ಪರೋಕ್ಷವಾಗಿ ಕೆಲ ಆಘಾತಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದರು. "ಒಂದು ದಿನ ನಾವೆಲ್ಲರೂ ಸಾಯುತ್ತೇವೆ. ಕನ್ನಡಿಯಲ್ಲಿ ನನ್ನ ಮುಖದ ಮೇಲಿನ ಸಣ್ಣ ಮಚ್ಚೆಗಳನ್ನು ನೋಡಿದಾಗ ಅಂತಿಮ ಹಂತ ಹತ್ತಿರದಲ್ಲಿದೆ ಎನಿಸುತ್ತಿದೆ. ನಿಜವಾಗಿಯೂ ಬಹಳ ಬೇಗ ಅನ್ನಿಸುತ್ತಿದೆ. ಅನೇಕ ಪ್ರಸಿದ್ಧ ವ್ಯಕ್ತಿಗಳು ಕೊನೆಯ ಹಂತದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಇಹಲೋಕ ತ್ಯಜಿಸಿದ್ದಾರೆ. ನಾನು ಅ ರೀತಿ ಸಾಯಲು ಬಯಸುವುದಿಲ್ಲ" ಎಂದು ಹೇಳಿದರು. ಮೈಕ್ ಟೈಸನ್ ಅವರ ಈ ವೈರಾಗ್ಯದ ಮಾತುಗಳಿಗೆ ಆರೋಗ್ಯ ಸಮಸ್ಯೆಗಳೇ ಕಾರಣನಾ ಅನ್ನುವ ಅನುಮಾನ ಮೂಡುತ್ತಿದೆ.

Legendary Boxer Mike Tyson Spotted On Wheelchair Photos Goes Viral

ಬಾಕ್ಸಿಂಗ್‌ನಲ್ಲಿ ಪ್ರಪಂಚಕ್ಕೆ ದೊಡ್ಡ ಹೆಸರು ಮೈಕ್ ಟೈಸನ್. ಬಾಕ್ಸಿಂಗ್ ಮಾತ್ರವಲ್ಲದೇ ವಿವಾದಗಳಿಂದಲೂ ಟೈಸನ್ ಬಹಳ ಚರ್ಚೆ ಹುಟ್ಟಾಕ್ಕಿದ್ದರು. ಈತನಿಗೆ 'ಪುಟಾಣಿ ಡೈನಮೈಟ್', 'ಉಕ್ಕಿನ ಮೈಕ್', 'ಭೂಮಿಯ ಮೇಲಿನ ಅತ್ಯಂತ ದುಷ್ಟವ್ಯಕ್ತಿ' ಎನ್ನುವ ಅಡ್ಡ ಹೆಸರುಗಳು ಇವರಿಗಿದೆ. 'ಲೈಗರ್' ಚಿತ್ರದಲ್ಲಿ ನಟಿಸಲು ಬರೋಬ್ಬರಿ 40 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಟೈಸನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

More from Filmibeat

English summary
Legendary Boxer Mike Tyson Spotted On Wheelchair Photos Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X