For Quick Alerts
  ALLOW NOTIFICATIONS  
  For Daily Alerts

  ಅಮೆರಿಕದ ಖ್ಯಾತ ಟಿವಿ ನಿರೂಪಕ ಟಾಮ್ ಕೆನಡಿ ನಿಧನ

  |

  ಅಮೆರಿಕದ ಖ್ಯಾತ ಟವಿ ನಿರೂಪಕ ಟಾಮ್ ಕೆನಡಿ (93 ವರ್ಷ) ಅಕ್ಟೋಬರ್ 7 ರಂದು ಕ್ಯಾಲಿಫೋರ್ನಿಯಾದ ಆಕ್ಸ್‌ನಾರ್ಡ್‌ನಲ್ಲಿ ನಿಧನರಾಗಿದ್ದಾರೆ. ಟಾಮ್ ಕೆನಡಿ ಸಾವಿಗೆ ಅಮೆರಿಕ ಟಿವಿ ಪ್ರೇಕ್ಷಕರು ಸಂತಾಪ ಸೂಚಿಸಿದ್ದಾರೆ.

  'ಯು ಡೋಂಟ್ ಸೇ' ಎಂಬ ಸೂಪರ್ ಹಿಟ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಟಾಮ್ ಕೆನಡಿ ಜೊತೆ ಟೆಲಿವಿಷನ್ ಗೇಮ್ ಶೋಗಳನ್ನು ನಿರೂಪಣೆ ಮಾಡುವಲ್ಲಿ ಖ್ಯಾತಿ ಗಳಿಸಿಕೊಂಡಿದ್ದರು.

  ಖ್ಯಾತ ಸಂಗೀತ ನಿರ್ದೇಶಕ ರಾಜನ್ (ರಾಜನ್-ನಾಗೇಂದ್ರ) ವಿಧಿವಶ

  ಟಾಮ್ ಕೆನಡಿ ಅವರ ಸಾವಿನ ಸುದ್ದಿಯನ್ನು ಆಪ್ತ ಸ್ನೇಹಿತ ಸ್ಟೀವ್ ಬೆವರ್ಲಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

  ಯು ಡೋಂಟ್ ಸೇ, ಬ್ರೇಕ್ ದಿ ಬ್ಯಾಂಕ್, ನೇಮ್ ದಟ್ ಟ್ಯೂನ್, ಸ್ಪ್ಲಿಟ್ ಸೆಕೆಂಡ್, ದಿ ಪ್ರೈಸ್ ಈಸ್ ರೈಟ್, ಪಾಸ್‌ವರ್ಡ್, ಮತ್ತು ಇನ್ನೂ ಅನೇಕ ಕ್ಲಾಸಿಕ್ ಗೇಮ್ ಶೋಗಳನ್ನು ಟಾಮ್ ಕೆನಡಿ ನಿರೂಪಣೆ ಮಾಡಿದ್ದರು.

  ಫೆಬ್ರವರಿ 26, 1927 ರಂದು ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿ ಜನಿಸಿದ ಟಾಮ್ ಕೆನಡಿ 1947 ರಲ್ಲಿ ಲಾಸ್ ಏಂಜಲೀಸ್‌ಗೆ ತೆರಳಿ ಪ್ರಸಾರ ಮಾಧ್ಯಮದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 10 ವರ್ಷಗಳ ಕಾಲ ರೇಡಿಯೊದಲ್ಲಿ ಕೆಲಸ ಮಾಡಿದ್ದರು. ನಂತರ ತನ್ನ ಹೈಸ್ಕೂಲ್ ಗೆಳತಿ ಬೆಟ್ಟಿ ಗೆವೆಡನ್‌ನನ್ನು ಮದುವೆಯಾದರು.

  ನಾನು ತುಂಬಾ ಸಿಂಪಲ್ ಅಂತ ಮತ್ತೆ ಪ್ರೂವ್ ಮಾಡಿದ Shivanna | Filmibeat Kannada

  ಕೆನಡಿ ಅವರಿಗೆ ಲಿಂಡಾ ಆನ್ ನಾರ್ಜ್, ಜೇಮ್ಸ್ ನಾರ್ಜ್ ಜೂನಿಯರ್ ಮತ್ತು ಕರ್ಟ್ನಿ ಎಲ್ಲೆನ್ ನಾರ್ಜ್ ಎಂಬ ಮೂವರು ಮಕ್ಕಳಿದ್ದಾರೆ. ಸೊಸೆ ಲಿಂಡಾ ಪಾಪುಲಿಸ್ ನಾರ್ಜ್, ಮೊಮ್ಮಗಳು ಅಬಿಗೈಲ್ ನೋರಾ ನಾರ್ಜ್ ಮತ್ತು ಅವರ ಸಹೋದರಿ ಮೇರಿ ಲೊವೆಟ್ ಸ್ಕಲ್ಲಿ ಅವರನ್ನು ಅಗಲಿದ್ದಾರೆ.

  English summary
  Tom Kennedy, host of 14 game shows on network and syndicated television from 1958 to 1987, has left us at 93.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X