For Quick Alerts
  ALLOW NOTIFICATIONS  
  For Daily Alerts

  ನಾಲ್ಕು ವರ್ಷದ ಪ್ರೀತಿಗೆ ಬ್ರೇಕ್ ಹಾಕಿದ 'ಟೈಟಾನಿಕ್' ಚೆಲುವೆ ಡಿ ಕ್ಯಾಪ್ರಿಯೊ

  |

  'ಟೈಟ್ಯಾನಿಕ್' ಸಿನಿಮಾದಲ್ಲಿ 'ಐ ಜಂಪ್, ಯೂ ಜಂಪ್' ಡೈಲಾಗ್ ಮರೆಯಲು ಸಾಧ್ಯವಿಲ್ಲ. ಏನೇ ಆದರೂ ಇಬ್ಬರೂ ಒಟ್ಟಿಗೆ ಇರೋಣ ಎಂದು ಸಿನಿಮಾದ ನಾಯಕ ನಾಯಕಿಯೊಟ್ಟಿಗೆ ಮಾಡುವ ಪ್ರಮಾಣ ಕೋಟ್ಯಂತರ ಹೃದಯವನ್ನು ಕರಗಿಸಿತ್ತು. ಹೀಗೆ 'ಟೈಟ್ಯಾನಿಕ್' ಸಿನಿಮಾದಲ್ಲಿ ನಾಯಕಿಗೆ ಪ್ರಮಾಣ ಮಾಡುವ ನಾಯಕ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ನಿಜ ಜೀವನದಲ್ಲಿ ನಾಲ್ಕನೇ ಬಾರಿ ಸಂಗಾತಿಯೊಂದಿಗೆ ಪ್ರೀತಿ ಮುರಿದುಕೊಂಡಿದ್ದಾರೆ.

  ಲಿಯೋನಾರ್ಡೊ ಡಿ ಕ್ಯಾಪ್ರಿಯೊ ಹಾಗೂ ಕ್ಯಾಮಿಲಾ ಮೋರೆನ್ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ ಇದೀಗ ಅವರು ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ.

  ತಮ್ಮ ಸಂಬಂಧವನ್ನು ಬಹುತೇಕವಾಗಿ ಗೌಪ್ಯವಾಗಿಯೇ ಇಟ್ಟಿದ್ದ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ಹಾಗೂ ಕ್ಯಾಮಿಲಾ ಮೋರೆನ್ 2020ರಲ್ಲಿ ಒಟ್ಟಿಗೆ ಆಸ್ಕರ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಆಗಲಷ್ಟೆ ಇವರು ಲಿವಿನ್ ರಿಲೇಶನ್‌ಷಿಪ್ ವಿಷಯ ಬಹಿರಂಗವಾಗಿತ್ತು.

  2017 ರಿಂದಲೂ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ಹಾಗೂ ಕ್ಯಾಮಿಲಾ ಮೋರೆನ್ ಸಂಬಂಧದಲ್ಲಿದ್ದರು. ಆದರೆ ಈಗ ಇವರಿಬ್ಬರೂ ತಮ್ಮ ಸಂಬಂಧವನ್ನು ಅಂತ್ಯಗೊಳಿಸಿದ್ದಾರೆ. ಆ ಮೂಲಕ ಲಿಯೋನಾರ್ಡೊ ಮತ್ತೆ ಸಿಂಗಲ್ ಆಗಿದ್ದಾರೆ.

  ಹಾಲಿವುಡ್‌ನ ಮೋಸ್ಟ್ ಹ್ಯಾಂಡ್ಸಮ್‌ ನಟನಾಗಿ ದಶಕಗಳಿಂದಲೂ ಗುರುತಿಸಿಕೊಂಡಿರುವ ಲಿಯೋನಾರ್ಡೊ ಡಿ ಕ್ಯಾಪ್ರಿಯೊ ಈ ಮೊದಲು ಕೆಲವು ಮಾಡೆಲ್‌ಗಳ ಜೊತೆ ಪ್ರೀತಿಯಲ್ಲಿದ್ದರು, ಆದರೆ ಇದೀಗ ಮತ್ತೆ ಸಿಂಗಲ್ ಆಗಿದ್ದಾರೆ. ಲಿಯೋನಾರ್ಡೊ ಇದೀಗ 47 ವರ್ಷ ವಯಸ್ಸಿನವರಾಗಿದ್ದು, ಅವರು ಮುಂದೆ ಯಾರೊಟ್ಟಿಗೆ ಪ್ರೀತಿಗೆ ಬೀಳಲಿದ್ದಾರೆ ಎಂದು ನೋಡಬೇಕಿದೆ.

  'ಟೈಟ್ಯಾನಿಕ್' , 'ದಿ ಡಿಪಾರ್ಟೆಡ್', 'ಕ್ಯಾಚ್ ಮಿ ಇಫ್‌ ಯು ಕ್ಯಾನ್', 'ಬ್ಲಡ್ ಡೈಮೆಂಡ್', 'ಬಾಡಿ ಆಫ್ ಲೈಸ್', 'ಶಟರ್ ಐಸ್‌ಲೆಂಡ್', 'ಇನ್ಸೆಪ್ಶನ್', 'ಡಿಜ್ಯಾಂಗೊ ಅನ್‌ಚೈನ್ಡ್', 'ಗ್ರೇಟ್ ಗ್ಯಾಟ್ಸ್ಬಿ', 'ದಿ ವುಲ್ಫ್‌ ಆಫ್ ವಾಲ್‌ ಸ್ಟ್ರೀಟ್', 'ದಿ ರೆವೆನೆಂಟ್', ಇನ್ನೂ ಕೆಲವು ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳಲ್ಲಿ ಲಿಯೊನಾರ್ಡೊ ನಟಿಸಿದ್ದಾರೆ.

  ಇನ್ನು ಕ್ಯಾಮಿಲಾ ಮೋರೆನ್ ನಟಿಗಿಂತಲೂ ಮಾಡೆಲ್ ಆಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈವರೆಗೆ ನಾಲ್ಕು ಸಿನಿಮಾಗಳಲ್ಲಿಯಷ್ಟೆ ಕ್ಯಾಮಿಲಾ ನಟಿಸಿದ್ದಾರೆ. ಎರಡು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Oscar award winner Leonardo Dicaprio break up with model Camila Morrone after four years of their relationship.
  Wednesday, August 31, 2022, 18:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X