For Quick Alerts
  ALLOW NOTIFICATIONS  
  For Daily Alerts

  ಕೊರಿಯನ್ ವೆಬ್ ಸರಣಿ 'ಸ್ಕ್ವಿಡ್ ಗೇಮ್ಸ್'ನಲ್ಲಿ 'ಟೈಟ್ಯಾನಿಕ್' ಸ್ಟಾರ್!

  |

  ಭಾರತದಲ್ಲಿ ಬಾಲಿವುಡ್ ಹೇಗೆ ಮೌಲ್ಯ ಕಳೆದುಕೊಂಡು ದಕ್ಷಿಣ ಭಾರತ ಚಿತ್ರರಂಗ ಮುನ್ನೆಲೆಗೆ ಬರುತ್ತಿದೆಯೋ ಅಂತೆಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಲಿವುಡ್‌ ಸಹ ಹಿನ್ನೆಡೆ ಅನುಭವಿಸುತ್ತಿದೆ. ಕೊರಿಯನ್ ಚಿತ್ರರಂಗ ಹಾಲಿವುಡ್‌ ಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಿದೆ.

  ಕೊರಿಯನ್ ಸಿನಿಮಾ ಹಾಗೂ ವೆಬ್ ಸರಣಿಗಳು ಅದ್ಯಾವ ಮಟ್ಟಿಗೆ ವಿಶ್ವ ಪ್ರೇಕ್ಷಕರನ್ನು ಆಕರ್ಷಿಸಿವೆಯೆಂದರೆ ಹಾಲಿವುಡ್‌ನ ಸ್ಟಾರ್ ನಟ-ನಟಿಯರು ಸಹ ಕೊರಿಯನ್ ಸಿನಿಮಾಗಳಲ್ಲಿ, ವೆಬ್ ಸರಣಿಗಳ ಭಾಗವಾಗಲು ಮುಂದಾಗಿದ್ದಾರೆ. ಹಾಲಿವುಡ್‌ನ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು, ಒಟಿಟಿಗಳು ಸಹ ಕೊರಿಯನ್ ಚಿತ್ರರಂಗದ ಮೇಲೆ ಬಂಡವಾಳ ಹೂಡುತ್ತಿವೆ.

  ಕೆಲವು ದಿನಗಳ ಹಿಂದಷ್ಟೆ ನಡೆದ ಟಿವಿ ಶೋ, ವೆಬ್ ಸರಣಿ, ಅಂಥಾಲಜಿ ಸಿನಿಮಾಗಳಿಗೆ ನೀಡಲಾಗುವ ಅತ್ಯುತ್ತಮ ಎಮ್ಮಿ ಪ್ರಶಸ್ತಿ ಸಮಾರಂಭದಲ್ಲಿ ಗಮನ ಸೆಳೆದ ಕೊರಿಯನ್ ವೆಬ್ ಸರಣಿ 'ಸ್ಕ್ವಿಡ್ ಗೇಮ್ಸ್' ಮುಂದಿನ ಸರಣಿಯಲ್ಲಿ ಖ್ಯಾತ ಹಾಲಿವುಡ್ ನಟ 'ಟೈಟ್ಯಾನಿಕ್' ಖ್ಯಾತಿಯ ಲಿಯೊನಾರ್ಡೊ ಡಿ ಕ್ಯಾಪ್ರಿಯೊ ನಟಿಸಲಿದ್ದಾರೆ ಎನ್ನಲಾಗಿದೆ.

  ಎಮ್ಮಿ ಪ್ರಶಸ್ತಿ ವಿತರಣೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಕ್ವಿಡ್ ಗೇಮ್ಸ್'ನ ನಿರ್ದೇಶಕ ಹ್ವಾಂಗ್ ಡಾಂಗ್ ಯುಕ್‌ಗೆ 'ಲಿಯೊನಾರ್ಡೊ ಡಿ ಕ್ಯಾಪ್ರಿಯೊ 'ಸ್ಕ್ವಿಡ್ ಗೇಮ್ಸ್ 2' ನಲ್ಲಿ ನಟಿಸುತ್ತಾರಾ?' ಎಂಬ ಪ್ರಶ್ನೆ ಎದುರಾಯಿತು. ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಹ್ವಾಂಗ್ ಡಾಂಗ್ ಯುಕ್‌, 'ಸ್ಕ್ವಿಡ್ ಗೇಮ್ಸ್ 2' ಇದೀಗ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ಲಿಯಾನೋರ್ಡೊ ನಟಿಸಲು ಸಾಧ್ಯವಿಲ್ಲ. ಆದರೆ 'ಸ್ಕ್ವಿಡ್ ಗೇಮ್ಸ್ 3'ಯಲ್ಲಿ ನಟಿಸುವಂತೆ ನಾವು ಲಿಯೋನಾರ್ಡೊ ಅನ್ನು ಕೇಳುತ್ತೇವೆ'' ಎಂದಿದ್ದಾರೆ.

  ಮುಂದುವರೆದು, 'ಲಿಯೋನಾರ್ಡೊ ಒಬ್ಬ ಅದ್ಭುತವಾದ ನಟ, ಅವರು ಸಹ 'ಸ್ಕ್ವಿಡ್ ಗೇಮ್ಸ್'ನ ಅಭಿಮಾನಿಯಂತೆ ಈ ಬಗ್ಗೆ ಅವರೇ ಹೇಳಿದ್ದಾರೆ. ಅವರು ನಮ್ಮ ಸರಣಿಯಲ್ಲಿ ನಟಿಸಿದರೆ ಅದರ ಘನತೆ ಹೆಚ್ಚಾಗುತ್ತದೆ'' ಎಂದಿದ್ದಾರೆ.

  ಕಾರ್ಯಕ್ರಮವೊಂದರಲ್ಲಿ 'ಸ್ಕ್ವಿಡ್ ಗೇಮ್ಸ್'ನ ನಿರ್ದೇಶಕ ಹ್ವಾಂಗ್ ಡಾಂಗ್ ಯುಕ್ ಹಾಗೂ ಲಿಯೋನಾರ್ಡೊ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಿನಿಂದಲೂ ಲಿಯೋನಾರ್ಡೊ, 'ಸ್ಕ್ವಿಡ್ ಗೇಮ್ಸ್'ನಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

  ಆಸ್ಕರ್ ವಿಜೇತ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಈ ಹಿಂದೆ 'ಡೋಂಟ್ ಲುಕ್ ಅಪ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗಮನ ಸೆಳೆಯಲು ವಿಫಲವಾಯಿತು. ಇದೀಗ 'ಕಿಲ್ಲರ್ಸ್ ಆಫ್‌ ದಿ ಫ್ಲವರ್ ಮೂನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅತ್ಯುತ್ತಮ ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಮಾರ್ಟಿನ್ ನಿರ್ದೇಶಿಸಿದ್ದ ಐದು ಸಿನಿಮಾಗಳಲ್ಲಿ ಲಿಯೋನಾರ್ಡೊ ನಟಿಸಿದ್ದರು ಆ ಐದೂ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ಲಿಯೋನಾರ್ಡೊ ನಟಿಸಿರುವ 'ಗ್ಯಾಂಗ್ಸ್ ಆಫ್ ನ್ಯೂಯಾರ್ಕ್', 'ದಿ ಡಿಪಾರ್ಟೆಡ್', 'ದಿ ಏವಿಯೇಟರ್', 'ವೂಲ್ಫ್ ಆಫ್ ವಾಲ್‌ ಸ್ಟ್ರೀಟ್', 'ಶಟರ್ ಐಸ್‌ಲೆಂಡ್' ಸಿನಿಮಾಗಳನ್ನು ಮಾರ್ಟಿಕ್ ಸ್ಕೋರ್ಸೆಸಿ ನಿರ್ದೇಶೀಸಿದ್ದಾರೆ.

  English summary
  Famous actor Leonardo Dicaprio may act in Korean famous web series Squid Games 3. Now he is acting in Killers of the flower Moon.
  Saturday, September 17, 2022, 12:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X