ಮಾದಕ ವ್ಯಸನಕ್ಕೆ ಬಲಿಯಾದ ವಿಶ್ವವಿಖ್ಯಾತ ಗಾಯಕ, ಒನ್ ಡೈರೆಕ್ಷನ್ ಬ್ಯಾಂಡ್ ಖ್ಯಾತಿಯ ಲಿಯಾಮ್ ಪೇನ್ ಇನ್ನಿಲ್ಲ..!
ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ. ಮಾದಕ ಮಾಯಾಜಾಲದಲ್ಲಿ ಸಿಲುಕಿ ಮಾನಸಿಕವಾಗಿ ದೈಹಿಕವಾಗಿ ನೊಂದು ಬೆಂದು ಹೋಗುವುದಲ್ಲದೇ ಅನೇಕರು ತಮ್ಮ ಬದುಕಿಗೆ ತಾವೇ ತಮ್ಮ ಕೈಯಾರೆ ಕೊಳ್ಳಿ ಇಡುತ್ತಿದ್ದಾರೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಜೀವನವನ್ನೇ ದುರಂತಕ್ಕೆ ತಳ್ಳುತ್ತಿದ್ದಾರೆ. ಇದಕ್ಕೆ ಲಿಯಾಮ್ ಪೇನ್ ಸದ್ಯದ ಉದಾಹರಣೆ.
ಹೌದು, ಲಿಯಾನ್ ಪೇನ್.. ಇಂಗ್ಲೀಷ್ ಹಾಡುಗಳನ್ನು ಕೇಳುವವರಿಗೆ ಚಿರಪರಿಚಿತ ವ್ಯಕ್ತಿ. ಒನ್ ಡೈರೆಕ್ಷನ್ ಬ್ಯಾಂಡ್‌ನ ಬ್ರ್ಯಾಂಡ್ ಅಂಬಾಸಿಡರ್. ಗಾಯಕ ಮತ್ತು ಗೀತರಚನೆಕಾರನಾಗಿ ತಮ್ಮದೇ ಆದ ಒನ್ ಡೈರೆಕ್ಷನ್ ಬ್ಯಾಂಡ್‌ನ ಹುಟ್ಟು ಹಾಕಿ ಜನ ಮನ ಗೆದ್ದ ಲಿಯಾನ್ ಪೇನ್ ಬರೆದು ಹಾಡಿದ ಕಿಸ್ ಯು, ಮ್ಯಾಜಿಕ್, ಪರ್ಫೆಕ್ಟ್ ಮತ್ತು ಫಾರ್ ಯೂ ಹಾಡುಗಳು ಇವತ್ತು ಕೂಡ ಜನಪ್ರಿಯ. ಇಂಥಾ ಲಿಯಾನ್ ಪೇನ್ ಮಾದಕ ಮಾಯಾಜಾಲದಲ್ಲಿ ಸಿಲುಕಿ ಅದರಿಂದ ಹೊರ ಬರಲಾರದೇ ತಮ್ಮ ಮೂವತ್ತೊಂದನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಟೇಲ್‌ನ ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ.

ಇನ್ನೂ ಹೊಟೇಲ್‌ನ ಬಾಲ್ಕನಿಯಿಂದ ಜಿಗಿಯುವ ಮುನ್ನ ಲಿಯಾನ್ ಪೇನ್, ಹೊಟೇಲ್‌ನ ಲಾಬಿಯಲ್ಲಿ ವಿಲಕ್ಷಣವಾಗಿ ವರ್ತಿಸಿದ್ದರು. ತಮ್ಮ ಲ್ಯಾಪ್ ಟಾಪ್ ಒಡೆದು ಹಾಕಿದ್ದರು. ಲಿಯಾನ್ ಪೇನ್ ಅವರ ಈ ವರ್ತನೆಯಿಂದ ಆಶ್ಚರ್ಯಚಕಿತಗೊಂಡಿದ್ದ ಹೊಟೇಲ್‌ನ ಸಿಬ್ಬಂದಿ ಆ ನಂತರ ಅವರನ್ನು ಸಮಾಧಾನ ಪಡಿಸಿ ಕರೆದೊಯ್ದು ಬಿಟ್ಟು ಬಂದಿದ್ದರು. ಆದರೆ ಅದಾಗಲೇ ಮಾದಕ ವಸ್ತು ಸೇವಿಸಿದ್ದ ಲಿಯಾನ್ ಪೇನ್ ಆ ನಂತರ ತಮ್ಮ ಹೊಟೇಲ್ ರೂಮ್‌ನ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಲಿಯಾನ್ ಪೇನ್ ಆತ್ಮಹತ್ಯೆಯ ನಂತರ ಅಲ್ಲಿಗೆ ಆಗಮಿಸಿದ ತನಿಖಾಧಿಕಾರಿಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಾಯದ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಫೋಟೋಗಳನ್ನು ಕೂಡ ಫಿಲ್ಮಿಬೀಟ್ ಕನ್ನಡ ಜೊತೆ AFP ಹಂಚಿಕೊಂಡಿದೆ.
ಅಂದ್ಹಾಗೇ ಲಿಯಾಮ್ ಪೇನ್ ತಮ್ಮ ಒಂದ್ಕಾಲದ ಸ್ನೇಹಿತ ನಿಯಾಲ್ ಹೊರನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಜೆಂಟೆನಾದಲ್ಲಿದ್ದರು. ಇನ್ನೂ ಲಿಯಾನ್ ಪೇನ್ ಒನ್ ಡೈರೆಕ್ಷನ್ ತಂಡದ ಪ್ರಮುಖ ಸದಸ್ಯರಾಗಿದ್ದರು. ಈ ಬ್ಯಾಂಡ್‌ನಲ್ಲಿ ಹಾಡುವುದಲ್ಲದೇ ಸಾಹಿತ್ಯವನ್ನೂ ಕೂಡ ಲಿಯಾಮ್ ಪೇನ್ ಬರೆಯುತ್ತಿದ್ದರು. ಈ ಬ್ಯಾಂಡ್ ಮೂಲಕವೇ ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಯನ್ನು ಲಿಯಾಮ್ ಪೇನ್ ತಲುಪಿದ್ದರೂ ಕೂಡ ಕೇವಲ ಆರು ವರ್ಷದಲ್ಲಿ ಅವರ ಅವರ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು.
ಈ ಕಾರಣಕ್ಕೆ 2010ರಲ್ಲಿ ಆರಂಭವಾಗಿದ್ದ ಒನ್ ಡೈರೆಕ್ಷನ್ ಬ್ಯಾಂಡ್ 2016ರ ಹೊತ್ತಿಗೆ ಒಡೆದ ಮನೆಯಾಗಿತ್ತು. ಇಲ್ಲಿಂದಾಚೆ ಸ್ವತಂತ್ರ್ಯವಾಗಿ ಹಾಡು ಹಾಡಲು ಶುರು ಮಾಡಿದ್ದ ಲಿಯಾಮ್ ಪೇನ್ 2021ರಲ್ಲಿ ಮಾದಕ ಮಾಯಾಜಾಲದಲ್ಲಿ ಸಿಲುಕಿದರು. ಡ್ರಗ್ ಅಡಿಕ್ಟ್ ಆದರು. ಅನೇಕ ಬಾರಿ ಇದೆಲ್ಲದರಿಂದ ಹೊರ ಬರುವ ಪ್ರಯತ್ನವನ್ನು ಮಾಡಿದ್ದರು. ಆದರೆ ಅಂತಿಮವಾಗಿ ಹೊರ ಬರಲಾಗದೇ ಅನೇಕ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿದ್ದರು ಅದ್ರಂತೆ ಆತ್ಮಹತ್ಯೆಗೆ ಶರಣಾದರು ಎನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಉಳಿದಂತೆ ಲಿಯಾಮ್ ತನಮ್ಮ ಮಾಜಿ ಗೆಳತಿ ಮಾಯಾ ಹೆನ್ರಿ ಜೊತೆ ಕೂಡ ಗರ್ಭಪಾತಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಜಗಳ ಮಾಡಿಕೊಂಡಿದ್ದರು ಎನ್ನುವ ಸುದ್ದಿ ಕೂಡ ಸದ್ಯಕ್ಕೆ ಕೇಳಿ ಬರುತ್ತಿದೆ.


Click it and Unblock the Notifications











