twitter
    For Quick Alerts
    ALLOW NOTIFICATIONS  
    For Daily Alerts

    ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ 5 ಹಾಲಿವುಡ್ ಚಿತ್ರಗಳು; ಅವತಾರ್ 2 ಈ ಪಟ್ಟಿ ಸೇರುತ್ತಾ?

    |

    ವಿಶ್ವದಾದ್ಯಂತ ತನ್ನ ಮಾರ್ಕೆಟ್ ಹೊಂದಿರುವ ಚಿತ್ರರಂಗವೆಂದರೆ ಅದು ಹಾಲಿವುಡ್. ಪ್ರಪಂಚದ ಬಹುತೇಕ ಕಡೆ ಜನರು ಇಂಗ್ಲಿಷ್ ಬಲ್ಲ ಕಾರಣ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರ ಸಂಖ್ಯೆ ಹೆಚ್ಚಿದೆ. ಇನ್ನು ಹಲವಾರು ಭಾಷೆಯ ಚಿತ್ರರಂಗಗಳನ್ನು ಹೊಂದಿರುವ ಭಾರತದಲ್ಲಿಯೂ ಸಹ ಹಾಲಿವುಡ್ ಪ್ರಭಾವ ದೊಡ್ಡ ಮಟ್ಟದಲ್ಲಿಯೇ ಇದೆ.

    ಇನ್ನು ದೇಶದ ವಿವಿಧೆಡೆ ಹಾಲಿವುಡ್ ಚಿತ್ರಗಳಿಗೆ ವಿಶೇಷ ಕ್ರೇಜ್ ಇದ್ದು ಮೆಟ್ರೋ ನಗರಗಳಲ್ಲಿ ಇಂಗ್ಲಿಷ್ ಸಿನಿಮಾಗಳ ಅಬ್ಬರ ಹೆಚ್ಚೇ ಇದೆ. ಇನ್ನು ಹಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಭಾರತದಲ್ಲಿ ಬೃಹತ್ ಮಾರುಕಟ್ಟೆ ಇದ್ದು ಚಿತ್ರ ಹಂಚಿಕೆ ಮಾಡುವ ವಿತರಕರು ಒಳ್ಳೆಯ ಲಾಭವನ್ನೇ ಗಳಿಸಿದ್ದಾರೆ. ಅದರಲ್ಲಿಯೂ ಡಬ್ಬಿಂಗ್ ಬಂದ ಮೇಲಂತೂ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿಯೇ ಎಂದು ಹೇಳಬಹುದು.

    ಇದಕ್ಕೆ ತಾಜಾ ಉದಾಹರಣೆ ಇದೇ ಶುಕ್ರವಾರ ಬಿಡುಗಡೆಯಾಗಲಿರುವ ಅವತಾರ್ ದ ವೇ ಆಫ್ ವಾಟರ್. ಹೌದು, ಅವತಾರ್ 2 ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಜನರು ಈ ಭಾಷೆಯ ಅವತರಣಿಕೆಗಳ ಟಿಕೆಟ್‌ಗಳನ್ನೂ ಸಹ ಖರೀದಿಸುತ್ತಿದ್ದಾರೆ. ಹೀಗಾಗಿ ಅವತಾರ್ ದ ವೇ ಆಫ್ ವಾಟರ್ ಚಿತ್ರ ಕ್ಲಿಕ್ ಆದರೆ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಐದು ಹಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿ ನಂಬರ್ ಒನ್ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹಾಗಿದ್ದರೆ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಆ ಐದು ಚಿತ್ರಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

    ಭಾರತದಲ್ಲಿ ಅತಿಹೆಚ್ಚು ಗಳಿಸಿದ ಹಾಲಿವುಡ್ ಸಿನಿಮಾಗಳು

    ಭಾರತದಲ್ಲಿ ಅತಿಹೆಚ್ಚು ಗಳಿಸಿದ ಹಾಲಿವುಡ್ ಸಿನಿಮಾಗಳು

    ಭಾರತದ ದೇಶದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಹಾಲಿವುಡ್‌ನ ಟಾಪ್ 5 ಚಿತ್ರಗಳ ಪಟ್ಟಿ ಇಲ್ಲಿದೆ..

    1. ಅವೆಂಜರ್ಸ್; ಎಂಡ್‌ಗೇಮ್ - 445 ಕೋಟಿ ಗ್ರಾಸ್

    2. ಅವೆಂಜರ್ಸ್ ಇನ್ಫಿನಿಟಿ ವಾರ್ - 297 ಕೋಟಿ ಗ್ರಾಸ್

    3. ಸ್ಪೈಡರ್ ಮ್ಯಾನ್ ನೋ ವೇ ಹೋಮ್ - 262 ಕೋಟಿ ಗ್ರಾಸ್

    4. ದ ಜಂಗಲ್ ಬುಕ್ - 260 ಕೋಟಿ ಗ್ರಾಸ್

    5. ದ ಲಯನ್ ಕಿಂಗ್ 185 ಕೋಟಿ ಗ್ರಾಸ್

    ಅವತಾರ್ ಎಷ್ಟು ಗಳಿಸಿತ್ತು?

    ಅವತಾರ್ ಎಷ್ಟು ಗಳಿಸಿತ್ತು?

    ಇನ್ನು ಡಿಸೆಂಬರ್ 16ರಂದು ಬಿಡುಗಡೆಯಾಗಲಿರುವ ಅವತಾರ್ ದ ವೇ ಆಫ್ ವಾಟರ್ ಈ ಮೇಲಿನ ಚಿತ್ರಗಳಿಗಿಂತ ಹೆಚ್ಚು ಗಳಿಸಬಹುದಾ ಎಂಬ ಚರ್ಚೆ ಶುರುವಾಗಿದ್ದು, ಚಿತ್ರ ಚೆನ್ನಾಗಿದ್ದರೆ ಸಾಕು ಈ ದಾಖಲೆಗಳನ್ನು ಅವತಾರ್ 2 ಹೊಡೆದುರುಳಿಸಲಿದೆ ಎಂಬ ಅಭಿಪ್ರಾಯಗಳನ್ನು ಸಿನಿ ಪಂಡಿತರು ವ್ಯಕ್ತಪಡಿಸಿದ್ದಾರೆ. ಅವತಾರ್ 2009ರಲ್ಲಿ ಬಿಡುಗಡೆಗೊಂಡು ಅಂದಿನ ಟಿಕೆಟ್ ದರಕ್ಕೆ ಭಾರತದಲ್ಲಿ ಬರೋಬ್ಬರಿ 145 ಕೋಟಿ ಗ್ರಾಸ್ ಗಳಿಸಿತ್ತು. ಹೀಗಾಗಿ ಅಂದು ಕಡಿಮೆ ಟಿಕೆಟ್ ದರದಲ್ಲೇ ನೂರು ಕೋಟಿ ಕ್ಲಬ್ ಸೇರಿದ್ದ ಅವತಾರ್ ಚಿತ್ರದ ಸೀಕ್ವೆಲ್ ಈಗಿನ ಟಿಕೆಟ್ ದರ ಹಾಗೂ ಕ್ರೇಜ್‌ಗೆ ಭರ್ಜರಿ ಗಳಿಕೆ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.

    2019ರಲ್ಲಿ ಎಂಡ್ ಗೇಮ್ ದಾಖಲೆ

    2019ರಲ್ಲಿ ಎಂಡ್ ಗೇಮ್ ದಾಖಲೆ

    2019ರಲ್ಲಿ ಬಿಡುಗಡೆಗೊಂಡಿದ್ದ ಅವೆಂಜರ್ಸ್ ಎಂಡ್ ಗೇಮ್ ಚಿತ್ರ ಭಾರತದಲ್ಲಿ ಬರೋಬ್ಬರಿ 445 ಕೋಟಿ ಗಳಿಸಿ ದೇಶದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರ ಎನಿಸಿಕೊಳ್ಳುವುದು ಮಾತ್ರವಲ್ಲದೇ ಆ ವರ್ಷ ಭಾರತದಲ್ಲಿ ಬಿಡುಗಡೆಗೊಂಡಿದ್ದ ದೇಶದ ಎಲ್ಲಾ ಚಿತ್ರಗಳನ್ನೂ ಕಲೆಕ್ಷನ್ ವಿಚಾರದಲ್ಲಿ ಹಿಂದಿಕ್ಕಿ ವರ್ಷದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿತ್ತು. ಹೌದು, ಆ ವರ್ಷ ಸಾಹೋ ಹಾಗೂ ವಾರ್ ಚಿತ್ರದ ಕಲೆಕ್ಷನ್‌ಗಳನ್ನು ಹಿಂದಿಕ್ಕಿದ್ದ ಅವೆಂಜರ್ಸ್ ಎಂಡ್‌ಗೇಮ್ 2019ರಲ್ಲಿ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ವಿಶೇಷ ದಾಖಲೆ ಬರೆದಿತ್ತು.

    English summary
    List of top 5 highest grossing hollywood movies in India; These are targets for Avatar 2. Take a look
    Thursday, December 15, 2022, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X