Just In
Don't Miss!
- News
20 ವರ್ಷಗಳ ಉಗ್ರರ ಜೊತೆಗಿನ ಫೈಟ್ ಎಂಡ್..! ಅಫ್ಘಾನ್ ಬಿಟ್ಟು ಅಮೆರಿಕ ಎಸ್ಕೇಪ್..!
- Sports
ಐಪಿಎಲ್ 2021: ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ರೋಚಕ ಜಯ
- Automobiles
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚೀನಾ ಮಾರುಕಟ್ಟೆ ಮೇಲೆ ಹಾಲಿವುಡ್ ಕಣ್ಣು: ಹಿಟ್ ಸಿನಿಮಾಗಳ ಮರುಬಿಡುಗಡೆ
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮಾರುಕಟ್ಟೆ ಚಿನ್ನದ ಗಣಿ ಆದರೆ ಅದರ ಮೇಲೆ ಹಿಡಿತ ಸಾಧಿಸುವುದು ಸುಲಭಕ್ಕೆ ಸಾಧ್ಯವಿಲ್ಲ.
ಆದರೆ ಚೀನಾದ ಮನೊರಂಜನಾ ಮಾರುಕಟ್ಟೆ ಕೆಲ ವರ್ಷಗಳಲ್ಲಿ ವಿಶ್ವ ಸಿನಿಮಾಕ್ಕೆ ತೆರೆದು ಕೊಂಡಿದೆ. ಭಾರತದ ಹಲವು ಸಿನಿಮಾಗಳು ಸೇರಿದಂತೆ ವಿಶ್ವದ ಬೇರೆ-ಬೇರೆ ಭಾಷೆಯ ಸಿನಿಮಾಗಳು ಚೀನಾದಲ್ಲಿ ಬಿಡುಗಡೆ ಆಗಿ ಭಾರಿ ಲಾಭವನ್ನೇ ಗಳಿಸುತ್ತಿವೆ.
ಈ ವರ್ಷ ನೋಡಬೇಕಾದ ಹತ್ತು ಹಾಲಿವುಡ್ ಸಿನಿಮಾಗಳು
ಕೊರೊನಾದಿಂದ ತತ್ತರಿಸಿದ್ದ ಚೀನಾದ ಮನೊರಂಜನಾ ಮಾರುಕಟ್ಟೆ ಇದೀಗ ಚೇತರಿಕೆಯ ಹಾದಿಯಲ್ಲಿದ್ದು, ಇತ್ತೀಚೆಗಷ್ಟೆ ಹಾಲಿವುಡ್‌ನ 'ಅವತಾರ್' ಸಿನಿಮಾವನ್ನು ಚೀನಾದಲ್ಲಿ ಮರುಬಿಡುಗಡೆ ಮಾಡಲಾಯಿತು. ಅಚ್ಚರಿ ಎಂಬಂತೆ ಈ ಸಿನಿಮಾವು ಕೆಲವೇ ದಿನಗಳಲ್ಲಿ 362 ಕೋಟಿ ಕಲೆಕ್ಷನ್ ಮಾಡಿ ಇನ್ನೂ ಮುನ್ನಡೆಯುತ್ತಿದೆ.
'ಅವತಾರ್'ಗೆ ಸಿಕ್ಕ ಭಾರಿ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಹಾಲಿವುಡ್ ಮಂದಿ ಈಗ 'ಲಾರ್ಡ್ ಆಫ್ ದಿ ರಿಂಗ್ಸ್' ಸರಣಿಯನ್ನು ಚೀನಾದಲ್ಲಿ ಮರುಬಿಡುಗಡೆ ಮಾಡುವ ಯೋಜನೆ ಹಾಕಿದೆ. 2004 ರಲ್ಲಿ ಮೊದಲ ಬಾರಿಗೆ ಬಿಡುಗಡೆ ಆಗಿದ್ದ 'ಲಾರ್ಡ್ ಆಫ್ ದಿ ರಿಂಗ್ಸ್; ದಿ ಫೆಲೋಶಿಪ್ ಆಫ್ ದಿ ರಿಂಗ್' ಸಿನಿಮಾವು ಈಗ ಮತ್ತೆ ಚೀನಾದಲ್ಲಿ ಏಪ್ರಿಲ್ 4 ರಂದು ಮರುಬಿಡುಗಡೆ ಆಗಲಿದೆ.
'ಲಾರ್ಡ್ ಆಫ್ ದಿ ರಿಂಗ್ಸ್' ಸರಣಿಯ ಎರಡನೇ ಸಿನಿಮಾ 'ಲಾರ್ಡ್ ಆಫ್ ದಿ ರಿಂಗ್ಸ್; ದಿ ಟೂ ಟವರ್ಸ್' ಸಿನಿಮಾವು ಏಪ್ರಿಲ್ 16 ರಂದು ಬಿಡುಗಡೆ ಆಗಲಿದೆ. ಇದೇ ಸರಣಿಯ ಕೊನೆಯ ಸಿನಿಮಾ 'ಲಾರ್ಡ್ ಆಫ್ ದಿ ರಿಂಗ್ಸ್; ರಿಟರ್ನ್ ಆಫ್ ದಿ ಕಿಂಗ್' ಸಿನಿಮಾವು ಏಪ್ರಿಲ್ 23 ರಂದು ಬಿಡುಗಡೆ ಆಗಲಿದೆ.
ಅರ್ಹತೆ ಪ್ರಶ್ನಿಸಿದ ಪತ್ರಕರ್ತನಿಗೆ ಪ್ರಿಯಾಂಕಾ ಚೋಪ್ರಾ ದಿಟ್ಟ ಉತ್ತರ
'ಲಾರ್ಡ್ ಆಫ್ ದಿ ರಿಂಗ್ಸ್' ಸಿನಿಮಾ ಸರಣಿಯು ಜಗತ್ತಿನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. 'ಲಾರ್ಡ್ ಆಫ್ ದಿ ರಿಂಗ್ಸ್' ಸರಣಿಯ ಮೂರು ಸಿನಿಮಾಗಳು ಬರೋಬ್ಬರಿ 17 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಚೀನಾದಲ್ಲಿ ಭಾರತದ 'ದಬಂಗ್', 'ಬಾಹುಬಲಿ' ಇನ್ನಿತರೆ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಭಾರಿ ಕಲೆಕ್ಷನ್ ಅನ್ನೇ ಈ ಸಿನಿಮಾಗಳು ಮಾಡಿಕೊಟ್ಟಿದ್ದವು.