twitter
    For Quick Alerts
    ALLOW NOTIFICATIONS  
    For Daily Alerts

    ಭಾರತೀಯನ ಹಾಲಿವುಡ್ ಸಿನಿಮಾ 'ಓಲ್ಡ್' ಟ್ರೇಲರ್: ಭಯಾನಕ ಬೀಚ್‌ನ ಕತೆ

    |

    ಭಾರತೀಯ ಮೂಲದ ಹಾಲಿವುಡ್ ಸಿನಿಮಾ ನಿರ್ದೇಶಕ ಎಂ.ನೈಟ್ ಶ್ಯಾಮಲನ್ ನಿರ್ದೇಶಿಸಿರುವ ಥ್ರಿಲ್ಲರ್ ಸಿನಿಮಾ 'ಓಲ್ಡ್'ನ ಟ್ರೇಲರ್ ಬಿಡುಗಡೆ ಆಗಿದೆ.

    ಕುಟುಂಬವೊಂದು ಬೀಚ್‌ಗೆ ಹೋಗಿ ಅಲ್ಲಿ ಜೀವಕ್ಕೆ ಕುತ್ತು ತಂದುಕೊಳ್ಳುವ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವ ಕತೆಯನ್ನು ಸಿನಿಮಾ ಹೊಂದಿರುವುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

    ಕುಟುಂಬವೊಂದು ಮಕ್ಕಳೊಂದಿಗೆ ರಜೆ ಕಳೆಯಲು ಸುಂದರವಾದ ಬೀಚ್‌ಗೆ ಹೋಗುತ್ತದೆ. ಆದರೆ ಆ ಬೀಚ್‌ನಲ್ಲಿ ಅವರಿಗೆ ವೇಗವಾಗಿ ವಯಸ್ಸಾಗಲು ಆರಂಭವಾಗುತ್ತದೆ. ಮಕ್ಕಳು ಹಠಾತ್ತನೆ ಬೆಳೆದು ದೊಡ್ಡವರಾಗುತ್ತಾರೆ. ಯುವ ದಂಪತಿಗಳಿಗೆ ಮುಪ್ಪು ಆವರಿಸಲು ಆರಂಭವಾಗುತ್ತದೆ. ಕುಟುಂಬ ಹಾಗೂ ಆ ಬೀಚ್‌ನಲ್ಲಿ ಸಿಲುಕಿಕೊಂಡಿರುವ ಇತರರು ಹೇಗೆ ಅಲ್ಲಿಂದ ಪಾರಾಗುತ್ತಾರೆ ಎಂಬುದು ಸಿನಿಮಾದ ಕತೆ.

    M Night Shyamalan Directed Old Movie Trailer Released

    2 ನಿಮಿಷಕ್ಕೂ ಉದ್ದದ ಟ್ರೇಲರ್‌ ಸಪ್ಪೆಯಾಗಿ ಆರಂಭವಾಗಿ ನಂತರ ಹಲವು ಥ್ರಿಲ್ಲರ್ ಅಂಶಗಳನ್ನು ವೀಕ್ಷಿಕನ ಎದುರಿಗಿಡುತ್ತದೆ. ಸಿನಿಮಾ ನೋಡುವ ಕುತೂಹಲವನ್ನು ಉಂಟು ಮಾಡುತ್ತದೆ. 'ಓಲ್ಡ್' ಸಿನಿಮಾವು ಜುಲೈ 23 ಕ್ಕೆ ಬಿಡುಗಡೆ ಆಗಲಿದೆ.

    'ಓಲ್ಡ್' ಸಿನಿಮಾ ನಿರ್ದೇಶಿಸಿರುವ ಎಂ.ನೈಟ್ ಶ್ಯಾಮಲನ್ ಜನಿಸಿದ್ದು ಪುದುಚೆರಿಯ ಮಾಹೆ ಅಥವಾ ಮಯ್ಯಾಳಿಯಲ್ಲಿ. ಆರು ವರ್ಷವಿದ್ದಾಗ ಅಮೆರಿಕಕ್ಕೆ ವಲಸೆ ಹೋದ ಶ್ಯಾಮಲನ್ ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಶ್ಯಾಮಲನ್ ಹಲವು ಅತ್ಯುತ್ತಮ ಹಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

    Recommended Video

    Yash ಮಾಡಿದ ಒಳ್ಳೆ ಕೆಲಸಕ್ಕೆ Upendra ಫಿದಾ | Filmibeat Kannada

    'ಡೈ ಹಾರ್ಡ್' ಖ್ಯಾತಿಯ ಬ್ರೂಸ್ ವಿಲ್ಸ್ ನಟಿಸಿರುವ 'ದಿ ಸಿಕ್ಸ್ತ್ ಸೆನ್ಸ್', 'ಅನ್‌ಬ್ರೇಕೆಬಲ್', 'ದಿ ವಿಲೇಜ್', 'ಲೇಡಿ ಇನ್‌ ದಿ ವಾಟರ್', 'ದಿ ಲಾಸ್ಟ್ ಏರ್‌ಬೆಂಡರ್', ವಿಲ್ ಸ್ಮಿತ್ ಮತ್ತು ಜೇಡ್ ಸ್ಮಿತ್ ನಟಿಸಿರುವ 'ಆಫ್ಟರ್ ಅರ್ತ್', ಸ್ಯಾಮ್ಯುಲೆ ಜಾಕ್ಸನ್‌ ನಟಿಸಿರುವ 'ಗ್ಲಾಸ್' ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

    English summary
    Indian origin Hollywood director M Night Shyamalan's directed movie 'old' movie trailer released. Movie will hit theater on July 23.
    Tuesday, June 1, 2021, 20:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X