For Quick Alerts
  ALLOW NOTIFICATIONS  
  For Daily Alerts

  ಕಮಲಾ ಹಾರಿಸ್ ಬಗ್ಗೆ 11 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಮಲ್ಲಿಕಾ ಶೆರಾವತ್

  |

  ಕಮಲಾ ಹ್ಯಾರಿಸ್ ಅಮೆರಿಕದ ಮೊತ್ತಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಮಹಿಳಾ ಉಪಾಧ್ಯಕ್ಷೆ ಮಾತ್ರವಲ್ಲದೆ, ಮೊದಲ ಆಫ್ರಿಕನ್-ಇಂಡಿಯನ್-ಅಮೆರಿಕನ್ ಮಹಿಳೆ ಎಂದೂ ಸಹ ಗುರುತಿಸಿಕೊಂಡಿದ್ದಾರೆ ಕಮಲಾ ಹ್ಯಾರಿಸ್.

  ಕಮಲಾ ಹ್ಯಾರಿಸ್ ಗೆಲುವನ್ನು ನಮ್ಮದೇ ಗೆಲುವು ಎಂಬ ರೀತಿಯಲ್ಲಿ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ವಿಶ್ವದ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದ ದೊಡ್ಡ ಹುದ್ದೆಯೊಂದನ್ನು ಏರಿರುವುದು ಖಂಡಿತವಾಗಿಯೂ ಸಣ್ಣ ಸಾಧನೆಯಲ್ಲ.

  ಜೋ ಬೈಡನ್ 'ಗಜಿನಿ' ಇದ್ದಂತೆ ಎಂದ ಬಾಲಿವುಡ್ ನಟಿ ಕಂಗನಾ ರಣಾವತ್ಜೋ ಬೈಡನ್ 'ಗಜಿನಿ' ಇದ್ದಂತೆ ಎಂದ ಬಾಲಿವುಡ್ ನಟಿ ಕಂಗನಾ ರಣಾವತ್

  ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಆಗುತ್ತಿರುವುದಕ್ಕೆ ಭಾರತದ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ಕಮಲಾ ಹ್ಯಾರಿಸ್ ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು 11 ವರ್ಷಗಳ ಹಿಂದೆಯೇ ನಟಿ ಮಲ್ಲಿಕಾ ಶೆರಾವತ್ ಭವಿಷ್ಯ ನುಡಿದಿದ್ದರು.

  2009 ರಲ್ಲಿ ಕಮಲಾ ಹ್ಯಾರಿಸ್-ಮಲ್ಲಿಕಾ ಭೇಟಿ

  2009 ರಲ್ಲಿ ಕಮಲಾ ಹ್ಯಾರಿಸ್-ಮಲ್ಲಿಕಾ ಭೇಟಿ

  ನಟಿ ಮಲ್ಲಿಕಾ ಶೆರಾವತ್ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಅಂದರೆ 2009 ರ ವೇಳೆಗೆ ಕಾರ್ಯಕ್ರಮವೊಂದರಲ್ಲಿ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ್ದರು. ಆಗ ಕಮಲಾ ಹ್ಯಾರಿಸ್ ಸ್ಯಾನ್‌ ಫ್ರಾನಿಸಿಸ್ಕೋ ಜಿಲ್ಲಾ ಅಟರ್ನಿ ಆಗಿದ್ದರು.

  ಅಂದೇ ಭವಿಷ್ಯ ನುಡಿದಿದ್ದ ಮಲ್ಲಿಕಾ ಶೆರಾವತ್

  ಅಂದೇ ಭವಿಷ್ಯ ನುಡಿದಿದ್ದ ಮಲ್ಲಿಕಾ ಶೆರಾವತ್

  ಕಮಲಾ ಹ್ಯಾರಿಸ್ ಜೊತೆಯಾಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಮಲ್ಲಿಕಾ ಶೆರಾವತ್, 'ಅದ್ಭುತವಾದ ಮಹಿಳೆ ಕಮಲಾ ಹ್ಯಾರಿಸ್, ಇವರು ಮುಂದೊಂದು ದಿನ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗಿತ್ತಿದೆ' ಎಂದು ಹೇಳಿದ್ದರು. ಈಗ ಬಹುತೇಕ ಹಾಗೆಯೇ ಆಗಿದೆ.

  ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್‌ಗೆ ಶುಭಕೋರಿದ ಪ್ರಿಯಾಂಕಾ ಚೋಪ್ರಾಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್‌ಗೆ ಶುಭಕೋರಿದ ಪ್ರಿಯಾಂಕಾ ಚೋಪ್ರಾ

  'ಮಹಿಳೆಯರು ಆಳುತ್ತಾರೆ' ಎಂದಿದ್ದ ಮಲ್ಲಿಕಾ

  'ಮಹಿಳೆಯರು ಆಳುತ್ತಾರೆ' ಎಂದಿದ್ದ ಮಲ್ಲಿಕಾ

  2009 ರ ಜೂನ್ 23 ರಂದು ಮಲ್ಲಿಕಾ ಶೆರಾವತ್ ಈ ಫೋಸ್ಟ್ ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. 'ಮಹಿಳೆಯರು ಆಳುತ್ತಾರೆ' ಎಂದು ಸಹ ಮಲ್ಲಿಕಾ ಶೆರಾವತ್ ಅದೇ ಪೋಸ್ಟ್‌ನಲ್ಲಿ ಹೇಳಿದ್ದರು. ಪ್ರಸ್ತುತ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್, ಮುಂದೆ ಅಮೆರಿಕದ ಅಧ್ಯಕ್ಷೆ ಆಗುವ ಸಾಧ್ಯತೆ ದಟ್ಟವಾಗಿದೆ.

  ಚೈನೀಸ್-ಹಾಲಿವುಡ್ ಸಿನಿಮಾಗಳಲ್ಲಿ ನಟನೆ

  ಚೈನೀಸ್-ಹಾಲಿವುಡ್ ಸಿನಿಮಾಗಳಲ್ಲಿ ನಟನೆ

  ಆಗೊಮ್ಮೆ ಈಗೊಮ್ಮೆ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಲ್ಲಿಕಾ ಶೆರಾವತ್ ಚೈನೀಸ್, ಹಾಲಿವುಡ್ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಕನ್ನಡದ 'ಪ್ರೀತಿ ಏಕೆ ಭೂಮಿ ಮೇಲಿದೆ' ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟು ಕುಣಿಸಿದ್ದರು ಮಲ್ಲಿಕಾ.

  ಗಂಡನ ಜತೆ ಹೊಲಕ್ಕೆ ತೆರಳಿದ ಸನ್ನಿ ಲಿಯೋನ್: ಭೂತಾಯಿಯಿಂದ ತರಕಾರಿ ಪಡೆದ ಖುಷಿ ಹಂಚಿಕೊಂಡ ನಟಿಗಂಡನ ಜತೆ ಹೊಲಕ್ಕೆ ತೆರಳಿದ ಸನ್ನಿ ಲಿಯೋನ್: ಭೂತಾಯಿಯಿಂದ ತರಕಾರಿ ಪಡೆದ ಖುಷಿ ಹಂಚಿಕೊಂಡ ನಟಿ

  English summary
  Mallika Sherawat said in social media 11 years ago that Kamala Harris will be President of US one day. Now Kamala is first woman vice president of US.
  Monday, November 9, 2020, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X