ಕೊರೊನಾ ಭಯ: ಬಿಡುಗಡೆ ಮುಂದೂಡಿದ ಪ್ರಮುಖ ಹಾಲಿವುಡ್ ಸಿನಿಮಾಗಳು

ಕೊರೊನಾ ಭಯದಿಂದಾಗಿ ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್‌ ಇನ್ನುಳಿದ ಸಿನಿಉದ್ಯಮಗಳಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದೂಡಿಕೊಂಡಿದ್ದಾರೆ. ಅಲ್ಲೊಂದು-ಇಲ್ಲೊಂದು ಸಿನಿಮಾಗಳಷ್ಟೆ ಈಗ ಬಿಡುಗಡೆ ಆಗುತ್ತಿವೆ.

ಹಾಲಿವುಡ್ ಮಂದಿ ಸಹ ಕೊರೊನಾ ಭಯಕ್ಕೆ ತಮ್ಮ ಭಾರಿ ಬಿಗ್‌ಬಜೆಟ್‌ನ ಸಿನಿಮಾಗಳನ್ನು 2021 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಿಡುಗಡೆಗೆ ತಯಾರಾಗಿರುವ ಹಲವು ಪ್ರಮುಖ ಸಿನಿಮಾಗಳು 2021 ಕ್ಕೆ ಬಿಡುಗಡೆ ಆಗಲಿವೆ.

ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಜುಲೈ 21, 2021 ಕ್ಕೆ ಬಿಡುಗಡೆ ಆಗಲಿದೆ. ಆಕ್ಷನ್ ಭರಿತ ಈ ಸಿನಿಮಾದ ಟ್ರೇಲರ್ ಈಗಾಗಲೇ ಭಾರಿ ವೈರಲ್ ಆಗಿದೆ.

Many Hollywood Movies Postponed Their Release Date

ಸ್ಕಾರ್ಲೆಟ್ ಜಾನ್ಸನ್ ಅಭಿನಯದ 'ಬ್ಲ್ಯಾಕ್ ವಿಡೊ' ಸಿನಿಮಾವು ನವೆಂಬರ್ 6, 2020 ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಭಯದಿಂದಾಗಿ ಸಿನಿಮಾ ಬಿಡುಗಡೆಯನ್ನು ಮೇ 7, 2021 ಕ್ಕೆ ಮುಂದೂಡಲಾಗಿದೆ.

ದೆವ್ವದ ಸಿನಿಮಾ 'ಕಾಂಜರಿಂಗ್‌; ದಿ ಡೆವಿಲ್ ಮೇಡ್ ಮೀ ಟು ಡೂ ಇಟ್' ಸಿನಿಮಾ ಸೆಪ್ಟೆಂಬರ್ 11 ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಈಗ 2021 , ಜೂನ್ 4 ಕ್ಕೆ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಎ ಕ್ವೈಟ್ ಪ್ಲೇಸ್ 2 ಸಿನಿಮಾ ಸಹ ಇದೇ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು, ಅದರ ಬಿಡುಗಡೆ ದಿನಾಂಕ ಏಪ್ರಿಲ್ 23, 2021 ಕ್ಕೆ ಮುಂದೂಡಲಾಗಿದೆ. ಗಾಡ್ಜಿಲ್ಲಾ v/s ಕಾಂಗ್ ಇದೇ ಡಿಸೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು, ಈ ಸಿನಿಮಾ ಬಿಡುಗಡೆಯ ಹೊಸ ದಿನಾಂಕ ಮೇ 21, 2021.

ಮಿಷನ್ ಇಂಪಾಸಿಬಲ್; ನವೆಂಬರ್ 19, 2021, ಮ್ಯಾಟ್ರಿಕ್ಸ್ 4; ಡಿಸೆಂಬರ್ 22, 2021, ದಿ ಎಟರ್ನಲ್ಸ್ ಸಿನಿಮಾ ನವೆಂಬರ್ 5, 2021 ಕ್ಕೆ ಬಿಡುಗಡೆ ಆಗಲಿದೆ. ಇನ್ನೂ ಹಲವು ಪ್ರಮುಖ ಸಿನಿಮಾಗಳು 2021 ರಲ್ಲಿ ಬಿಡುಗಡೆ ಆಗಲಿವೆ.

More from Filmibeat

English summary
Many hollywood movie postponed their release dates due to COVID 19 fear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X