twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಭಯ: ಬಿಡುಗಡೆ ಮುಂದೂಡಿದ ಪ್ರಮುಖ ಹಾಲಿವುಡ್ ಸಿನಿಮಾಗಳು

    |

    ಕೊರೊನಾ ಭಯದಿಂದಾಗಿ ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್‌ ಇನ್ನುಳಿದ ಸಿನಿಉದ್ಯಮಗಳಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದೂಡಿಕೊಂಡಿದ್ದಾರೆ. ಅಲ್ಲೊಂದು-ಇಲ್ಲೊಂದು ಸಿನಿಮಾಗಳಷ್ಟೆ ಈಗ ಬಿಡುಗಡೆ ಆಗುತ್ತಿವೆ.

    ಹಾಲಿವುಡ್ ಮಂದಿ ಸಹ ಕೊರೊನಾ ಭಯಕ್ಕೆ ತಮ್ಮ ಭಾರಿ ಬಿಗ್‌ಬಜೆಟ್‌ನ ಸಿನಿಮಾಗಳನ್ನು 2021 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಿಡುಗಡೆಗೆ ತಯಾರಾಗಿರುವ ಹಲವು ಪ್ರಮುಖ ಸಿನಿಮಾಗಳು 2021 ಕ್ಕೆ ಬಿಡುಗಡೆ ಆಗಲಿವೆ.

    ಪೀಪಲ್ ಚಾಯ್ಸ್ ಪ್ರಶಸ್ತಿ: ಈ ವರ್ಷದ ಜನಮೆಚ್ಚಿದ ಸಿನಿಮಾ, ನಟ-ನಟಿಯರ ಪಟ್ಟಿಪೀಪಲ್ ಚಾಯ್ಸ್ ಪ್ರಶಸ್ತಿ: ಈ ವರ್ಷದ ಜನಮೆಚ್ಚಿದ ಸಿನಿಮಾ, ನಟ-ನಟಿಯರ ಪಟ್ಟಿ

    ಬಾಂಡ್ ಸಿನಿಮಾ 'ನೋ ಟೈಮ್ ಟು ಡೈ' ಜುಲೈ 21, 2021 ಕ್ಕೆ ಬಿಡುಗಡೆ ಆಗಲಿದೆ. ಆಕ್ಷನ್ ಭರಿತ ಈ ಸಿನಿಮಾದ ಟ್ರೇಲರ್ ಈಗಾಗಲೇ ಭಾರಿ ವೈರಲ್ ಆಗಿದೆ.

    Many Hollywood Movies Postponed Their Release Date

    ಸ್ಕಾರ್ಲೆಟ್ ಜಾನ್ಸನ್ ಅಭಿನಯದ 'ಬ್ಲ್ಯಾಕ್ ವಿಡೊ' ಸಿನಿಮಾವು ನವೆಂಬರ್ 6, 2020 ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಭಯದಿಂದಾಗಿ ಸಿನಿಮಾ ಬಿಡುಗಡೆಯನ್ನು ಮೇ 7, 2021 ಕ್ಕೆ ಮುಂದೂಡಲಾಗಿದೆ.

    ದೆವ್ವದ ಸಿನಿಮಾ 'ಕಾಂಜರಿಂಗ್‌; ದಿ ಡೆವಿಲ್ ಮೇಡ್ ಮೀ ಟು ಡೂ ಇಟ್' ಸಿನಿಮಾ ಸೆಪ್ಟೆಂಬರ್ 11 ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಈಗ 2021 , ಜೂನ್ 4 ಕ್ಕೆ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

    ಕಮಲಾ ಹಾರಿಸ್ ಬಗ್ಗೆ 11 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಮಲ್ಲಿಕಾ ಶೆರಾವತ್ಕಮಲಾ ಹಾರಿಸ್ ಬಗ್ಗೆ 11 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ಮಲ್ಲಿಕಾ ಶೆರಾವತ್

    ಎ ಕ್ವೈಟ್ ಪ್ಲೇಸ್ 2 ಸಿನಿಮಾ ಸಹ ಇದೇ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು, ಅದರ ಬಿಡುಗಡೆ ದಿನಾಂಕ ಏಪ್ರಿಲ್ 23, 2021 ಕ್ಕೆ ಮುಂದೂಡಲಾಗಿದೆ. ಗಾಡ್ಜಿಲ್ಲಾ v/s ಕಾಂಗ್ ಇದೇ ಡಿಸೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು, ಈ ಸಿನಿಮಾ ಬಿಡುಗಡೆಯ ಹೊಸ ದಿನಾಂಕ ಮೇ 21, 2021.

    Recommended Video

    ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada

    ಮಿಷನ್ ಇಂಪಾಸಿಬಲ್; ನವೆಂಬರ್ 19, 2021, ಮ್ಯಾಟ್ರಿಕ್ಸ್ 4; ಡಿಸೆಂಬರ್ 22, 2021, ದಿ ಎಟರ್ನಲ್ಸ್ ಸಿನಿಮಾ ನವೆಂಬರ್ 5, 2021 ಕ್ಕೆ ಬಿಡುಗಡೆ ಆಗಲಿದೆ. ಇನ್ನೂ ಹಲವು ಪ್ರಮುಖ ಸಿನಿಮಾಗಳು 2021 ರಲ್ಲಿ ಬಿಡುಗಡೆ ಆಗಲಿವೆ.

    English summary
    Many hollywood movie postponed their release dates due to COVID 19 fear.
    Tuesday, November 24, 2020, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X