twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ಬಾರಿ 14 ಹೊಸ ಪ್ರಾಜೆಕ್ಟ್ ಘೋಷಿಸಿದ ಮಾರ್ವೆಲ್: ಒಂದೇ ವರ್ಷದಲ್ಲಿ ಬಿಡುಗಡೆ!

    |

    ಹಾಲಿವುಡ್‌ ನಲ್ಲಿ ಮಾರ್ವೆಲ್ ಹಾಗೂ ಡಿಸಿ ನಡುವೆ ಒಂದು ರೀತಿ ಸಿನಿಮಾ ಯುದ್ಧವೇ ನಡೆಯುತ್ತಿದೆ. ಕಲೆಕ್ಷನ್, ಹೆಚ್ಚು ಕಂಟೆಂಟ್ ಅನ್ನು ಗಣನೆಗೆ ತೆಗೆದುಕೊಂಡರೆ ಗೆಲುವು ಮಾರ್ವೆಲ್‌ನದ್ದು. ಆದರೆ ಗುಣಮಟ್ಟದಲ್ಲಿ ಗೆಲುವು ಡಿಸಿಯದ್ದು.

    ಸೂಪರ್‌ಹೀರೋ ಸಿನಿಮಾಗಳಿಗೆ ಅಥವಾ ಅತಿಮಾನುಷ ಕತೆಯುಳ್ಳ ಸಿನಿಮಾಗಳಿಗೆ ಇರುವ ಮಾರುಕಟ್ಟೆ ಶಕ್ತಿಯನ್ನು ತೋರಿಸಿದ್ದು ಮಾರ್ವೆಲ್. 'ಅವೇಂಜರ್ಸ್', 'ಥಾರ್', 'ಐರನ್ ಮ್ಯಾನ್', 'ಕ್ಯಾಪ್ಟನ್ ಅಮೆರಿಕ', 'ಕ್ಯಾಪ್ಟನ್ ಮಾರ್ವೆಲ್', 'ಫೆಂಟಾಸ್ಟಿಕ್ ಫೋರ್', 'ಬ್ಲಾಕ್ ಪ್ಯಾಂತರ್', 'ಗಾರ್ಡಿಯನ್ಸ್ ಆಫ್‌ ದಿ ಗ್ಯಾಲೆಕ್ಸಿ' ಹೀಗೆ ಸಾಗುತ್ತದೆ ಮಾರ್ವೆಲ್‌ನ ಸೂಪರ್ ಹೀರೋ ಸಿನಿಮಾಗಳ ಪಟ್ಟಿ.

    ಇದೀಗ ಮಾರ್ವೆಲ್ ಒಂದೇ ಬಾರಿ ಹದಿನಾಲ್ಕು ಹೊಸ ಪ್ರಾಜೆಕ್ಟ್‌ಗಳನ್ನು ಘೋಷಿಸಿದೆ. ಜೊತೆಗೆ ಕೆಲವು ಸಿನಿಮಾಗಳ ಟ್ರೈಲರ್ ಅನ್ನೂ ಬಿಡುಗಡೆ ಮಾಡಿದೆ. ಮತ್ತೊಂದು ವಿಶೇಷತೆ ಎಂದರೆ ಘೋಷಣೆ ಆಗಿರುವ ಹದಿಮೂರು ಹೊಸ ಪ್ರಾಜೆಕ್ಟ್‌ಗಳಲ್ಲಿ ಬಹುತೇಕ ಸಿನಿಮಾ, ವೆಬ್ ಸರಣಿಗಳು ಒಂದು ವರ್ಷದ ಒಳಗಾಗಿಯೇ ಬಿಡುಗಡೆ ಆಗಲಿವೆ!

    Marvel Announce 14 New Projects In D23 Expo 2022

    ಡಿ23 ಎಕ್ಸ್‌ಪೊ 2022 ನಲ್ಲಿ ಮಾರ್ವೆಲ್ ತನ್ನ ಹೊಸ ಪ್ರಾಜೆಕ್ಟ್‌ಗಳನ್ನು ಘೋಷಿಸಿದ್ದು, ಪಟ್ಟಿ ಇಂತಿದೆ. ಹಾರರ್ ಕತೆಯುಳ್ಳ 'ವೇರ್‌ವೂಲ್ಫ್ ಅಟ್ ನೈಟ್' ಸಿನಿಮಾ. ಇದು ಅಕ್ಟೋಬರ್ 7 ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿನಿಮಾವು ಬಣ್ಣದ ಬದಲು ಬ್ಲಾಕ್ ಆಂಡ್ ವೈಟ್‌ನಲ್ಲಿರಲಿದೆ.

    ಅವೇಂಜರ್ಸ್‌ನ ಜನಪ್ರಿಯ ಪಾತ್ರ ನಿಕ್‌ ಫ್ಯೂರಿಯನ್ನು ಪ್ರಧಾನವಾಗಿರಿಸಿ ನಿರ್ಮಿಸಲಾಗಿರುವ 'ಸೀಕ್ರೆಟ್ ಇನ್‌ವೇಶನ್' ಸಿನಿಮಾದ ಟ್ರೈಲರ್ ಅನ್ನು ಮಾರ್ವೆಲ್ ಬಿಡುಗಡೆ ಮಾಡಿದೆ. ಈ ಹಿಂದಿನ ಸಿನಿಮಾಗಳಂತೆಯೇ ಸ್ಯಾಮ್ಯುಲ್ ಜಾಕ್‌ಸನ್ ನಿಕ್ ಫ್ಯೂರಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅನ್ಯಗ್ರಹ ಜೀವಿಗಳೂ ಸಹ ಇದ್ದಾರೆ.

    'ಆರ್ಮರ್ ವಾರ್ಸ್‌' ಹೆಸರಿನ ಸಿನಿಮಾವನ್ನು ಮಾರ್ವೆಲ್ ಘೋಷಿಸಿದೆ. ರೂಡಿ ಅಥವಾ ವಾರ್ ಮಷಿನ್‌ ಪಾತ್ರವನ್ನು ಪ್ರಧಾನವಾಗಿರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಜನಪ್ರಿಯಗೊಂಡಿರುವ 'ಫೆಂಟಾಸ್ಟಿಕ್ ಫೋರ್' ಸಿನಿಮಾದ ಮತ್ತೊಂದು ಸಿನಿಮಾವನ್ನು ಮಾರ್ವೆಲ್ ಡಿ23 ಎಕ್ಸ್‌ಪೋ 2022 ನಲ್ಲಿ ಘೋಷಿಸಿದೆ.

    'ಕ್ಯಾಪ್ಟನ್ ಅಮೆರಿಕ: ನ್ಯೂ ವರ್ಡ್‌ ಆರ್ಡರ್' ಹೆಸರಿನ ಹೊಸ ಕ್ಯಾಪ್ಟನ್ ಅಮೆರಿಕ ಸಿನಿಮಾವನ್ನು ಘೋಷಿಸಲಾಗಿದೆ. ಕ್ರಿಸ್ ಇವಾನ್ಸ್‌ ಅವರೇ ಕ್ಯಾಪ್ಟನ್ ಅಮೆರಿಕ ಪಾತ್ರದಲ್ಲಿ ನಟಿಸಲಿದ್ದಾರಾ ಕಾದು ನೋಡಬೇಕಿದೆ.

    'ಲೋಕಿ; ಸೀಸನ್ 2' ವೆಬ್ ಸರಣಿ ಸಹ ಶೀಘ್ರದಲ್ಲಿಯೇ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. 'ಲೋಕಿ' ವೆಬ್ ಸರಣಿಯ ಮೊದಲ ಸೀಸನ್ ಹಿಟ್ ಆದ ಬೆನ್ನಲ್ಲೆ ಸೀಸನ್ 2 ನಿರ್ಮಾಣ ಆರಂಭಗೊಂಡಿತ್ತು. 'ಐರನ್ ಹಾರ್ಟ್' ಸಿನಿಮಾ ಸರಣಿ ಹೊಸದಾಗಿ ಆರಂಭ ಮಾಡುತ್ತಿದೆ ಮಾರ್ವೆಲ್. 'ಐರನ್ ಮ್ಯಾನ್' ಸಿನಿಮಾ ಸರಣಿಗೆ ರಿಪ್ಲೇಸ್‌ಮೆಂಟ್ ರೀತಿಯಲ್ಲಿ ಈ ಸಿನಿಮಾ ಸರಣಿ ಆರಂಭ ಮಾಡುತ್ತಿದೆ.

    'ಬ್ಲಾಕ್‌ ಪ್ಯಾಂಥರ್: ವಕಾಂಡಾ ಫಾರ್‌ ಎವರ್' ಸಿನಿಮಾ ಸಹ ಶೀಘ್ರದಲ್ಲಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಬ್ಲಾಕ್‌ ಪ್ಯಾಂಥರ್ ಸಿನಿಮಾದ ನಾಯಕ ಚಾಡಿಕ್ ಬೋಸ್‌ಮನ್ ನಿಧನವಾದ ಬಳಿಕ ಇದೀಗ ಹೊಸ ಬ್ಲಾಕ್ ಪ್ಯಾಂಥರ್ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. 'ಆಂಟ್‌ಮನ್; ಕ್ವಾಂಟಮೇನಿಯಾ' ಸಿನಿಮಾ ಸಹ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಇದು 'ಆಂಟ್‌ಮನ್' ಸರಣಿಯ ಮುಂದಿನ ಭಾಗ ಆಗಿರಲಿದೆ.

    'ಇಕೊ', 'ಡೇರ್‌ ಡೆವಿಲ್; ಬಾರ್ನ್ ಅಗೇನ್', ಅವೇಂಜರ್ಸ್‌ ಮಾದರಿಯಲ್ಲಿಯೇ ಸೂಪರ್ ವಿಲನ್‌ಗಳ ಸಾಮ್ರಾಜ್ಯ 'ಥಂಡರ್‌ಬೋಲ್ಟ್ಸ್', 'ಗಾರ್ಡಿಯನ್ಸ್ ಆಫ್‌ ದಿ ಗ್ಯಾಲೆಕ್ಸಿ' ಸರಣಿಯ ಹೊಸ ಸಿನಿಮಾಗಳನ್ನು ಸಹ ಮಾರ್ವೆಲ್ ಘೋಷಿಸಿದೆ. ಘೋಷಣೆಯಾಗಿರುವ ಬಹುತೇಕ ಸಿನಿಮಾಗಳು ಈಗಿನಿಂದ ಒಂದು ವರ್ಷದ ಒಳಗಾಗಿಯೇ ಬಿಡುಗಡೆ ಆಗಲಿವೆ.

    English summary
    Marvel announce 14 new projects in D23 Expo 2022. Many new super hero and Super villain movies and web series coming soon.
    Tuesday, September 13, 2022, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X