ವಿಕ್ಷಿಪ್ತ ವಿಲನ್ ಲೋಕಿ ಗಂಡೊ? ಹೆಣ್ಣೊ?
ಹಾಲಿವುಡ್ ಸಿನಿಮಾಗಳ ಬಗ್ಗೆ ತುಸು ಪರಿಚಯವಿದ್ದರೂ 'ಅವೇಂಜರ್ಸ್' ಸಿನಿಮಾ ಸರಣಿ ಬಗ್ಗೆ ಹಾಗೂ ಮಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ (ಎಂಸಿಯು) ಬಗ್ಗೆ ಗೊತ್ತೇ ಇರುತ್ತದೆ.
ಅತಿಮಾನುಷ ಶಕ್ತಿಯ ಸೂಪರ್ ಹೀರೋಗಳು ವಿಶ್ವಕ್ಕೆ ಎದುರಾಗುವ ಆಪತ್ತುಗಳನ್ನು ಶಕ್ತಿ, ಕುಶಲತೆ, ಒಗ್ಗಟ್ಟಿನಿಂದ ತಪ್ಪಿಸುತ್ತಾರೆ. ಅದ್ಭುತ ಗ್ರಾಫಿಕ್ಸ್, ಅತ್ಯದ್ಭುತ ಪಾತ್ರಗಳಿಂದ ತುಂಬಿರುವ ಈ 'ಅವೇಂಜರ್ಸ್' ಸರಣಿ ಸಿನಿಮಾಗಳಿಗೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.
ಮಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಅತ್ಯುದ್ಭುತ ಸೃಷ್ಟಿಗಳಲ್ಲಿ ಒಂದು 'ಲೋಕಿ' ಪಾತ್ರ. 'ಲೋಕಿ' ವಿಲನ್ ಆಗಿದ್ದರೂ ಆ ಪಾತ್ರಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಲೋಕಿ ವಿಲನ್ ಆದರೂ ಪೂರ್ಣ ವಿಲನ್ ಅಲ್ಲ. ಆತನದ್ದು ವಿಚಿತ್ರ ವ್ಯಕ್ತಿತ್ವ ಆ ವ್ಯಕ್ತಿತ್ವವೇ ಆತನನ್ನು ಮಾರ್ವಲ್‌ನ ಇತರ ಪಾತ್ರಗಳಿಗಿಂತಲೂ ಬಹಳ ಭಿನ್ನವಾಗಿಸಿದೆ.

ಆದರೆ ಈ ಲೋಕಿ ಗಂಡೊ-ಹೆಣ್ಣೊ? 'ಅವೇಂಜರ್ಸ್' ಸಿನಿಮಾ ನೋಡಿದವರು ಸುಲಭವಾಗಿ ಹೇಳುತ್ತಾರೆ ಲೋಕಿ ಗಂಡು ಎಂದು ಆದರೆ ಅದು ಸುಳ್ಳು. 'ಲೋಕಿ' ದ್ವಿಲಿಂಗಿ ಅಥವಾ ಗಂಡು, ಹೆಣ್ಣು ಎರಡೂ ಆಗಿರುವ ವ್ಯಕ್ತಿ. ಹೀಗೆಂದು ಸ್ವತಃ ಎಂಸಿಯು ಹೇಳುತ್ತಿದೆ.
'ಲೋಕಿ'ಯನ್ನೇ ಮುಖ್ಯ ಪಾತ್ರವಾಗಿಸಿ ಅದೇ ಹೆಸರಿನ ವೆಬ್ ಸರಣಿಯನ್ನು ಮಾರ್ವಲ್ ನಿರ್ಮಿಸಿದ್ದು, ಅದರ ಟ್ರೇಲರ್‌ನಲ್ಲಿ ಲೋಕಿಯ ಲಿಂಗದ ಉಲ್ಲೇಖವಿದೆ. ಟ್ರೇಲರ್‌ನಲ್ಲಿ ಲೋಕಿಯನ್ನು ಜೈಲಿಗೆ ಹಾಕಿರುತ್ತಾರೆ. ಅಲ್ಲಿ ಲೋಕಿಯ ವೈಯಕ್ತಿಕ ಮಾಹಿತಿಯುಳ್ಳ ದಾಖಲೆ ತೋರಿಸಲಾಗುತ್ತದೆ. ಆ ದಾಖಲೆಯಲ್ಲಿ ಲೋಕಿ ಗಂಡು-ಹೆಣ್ಣು ಎರಡೂ ಆಗಿರುವ ವ್ಯಕ್ತಿ ಎಂದಿದೆ.
ಲೋಕಿ ಲಿಂಗದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗಳೇ ನಡೆಯುತ್ತಿದೆ. ಲೋಕಿ ದ್ವಿಲಿಂಗಿ ಆಗಿದ್ದರೆ ಅವನ ಸಹೋದರ ಥೊರ್ ಕೂಡ ದ್ವಿಲಿಂಗಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಿನಿಮಾದಲ್ಲಿ ಲೋಕಿ, ವೇಷಗಳನ್ನು ಬದಲಾಯಿಸುವಲ್ಲಿ ಸಿದ್ಧಹಸ್ತ. ತನ್ನ ಎದುರು ನಿಂತ ಯಾರಂತಾದರೂ ಲೋಕಿ ಆಗಬಲ್ಲ. ಹಾಗಾಗಿ ಆತನನ್ನು ನಿರ್ದಿಷ್ಟ ಲಿಂಗಕ್ಕೆ ಸೇರಿದವನು ಎಂದು ಹೇಳಲಾಗದು ಹಾಗಾಗಿಯೇ ಎಂಸಿಯು ಹಾಗೆ ಮಾಡಿದೆ ಎಂದು ಕೆಲವರು ವಾದಿಸಿದ್ದಾರೆ.
ಲೋಕಿ ಪಾತ್ರ ನಿರ್ವಹಿಸುವ ನಟ ಟಾಮ್ ಹಿಡ್ಲ್‌ಸ್ಟನ್ ಸಹ ಸಂದರ್ಶನವೊಂದರಲ್ಲಿ 'ಲೋಕಿ ಯಾರು ಬೇಕಾದರೂ ಆಗಿರಬಹುದು. ಆತ ಗಂಡೂ ಆಗಿರಬಹುದು ಹೆಣ್ಣೂ ಆಗಿರಬಹುದು' ಎಂದಿದ್ದರು ಆ ವಿಡಿಯೋ ಈಗ ವೈರಲ್ ಆಗಿದೆ.
Recommended Video
'ಲೋಕಿ' ವೆಬ್ ಸರಣಿಯು ಜೂನ್ 9 ರಿಂದ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.


Click it and Unblock the Notifications











