For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿಗೆ ಹಾಲಿವುಡ್‌ ಖ್ಯಾತ ನಿರ್ಮಾಣ ಸಂಸ್ಥೆಯಿಂದ ಅವಕಾಶ! ಸ್ವೀಕರಿಸುತ್ತಾರೆಯೇ?

  |

  'RRR' ಸಿನಿಮಾದ ಮೂಲಕ ನಿರ್ದೇಶಕ ರಾಜಮೌಳಿ ವಿಶ್ವದರ್ಜೆಯ ಸಿನಿಮಾ ನಿರ್ದೇಶಕ ಎಂಬ ಖ್ಯಾತಿ ಗಳಿಸಿದ್ದಾರೆ. ಅವರ ಸಿನಿಮಾವನ್ನು ಹಾಲಿವುಡ್ ಪ್ರೇಕ್ಷಕರು ಮಾತ್ರವಲ್ಲ, ಜನಪ್ರಿಯ ಸಿನಿಮಾ ಕರ್ಮಿಗಳು ಸಹ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

  ಇದೀಗ ಭಾರತದ ಅದರಲ್ಲಿಯೂ ದಕ್ಷಿಣ ಭಾರತದ ಅಪರೂಪದ ಪ್ರತಿಭೆ ರಾಜಮೌಳಿಯನ್ನು ಹಾಲಿವುಡ್‌ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನೋಡುತ್ತಿದೆ.

  ಜಪಾನಿಯರ ಮನಗೆದ್ದ ರಾಮ್‌-ಭೀಮ್ ಬ್ರೊಮ್ಯಾನ್ಸ್: ಹಳೇ ದಾಖಲೆ ಮುರಿದು ನಂಬರ್ ವನ್ ಸ್ಥಾನದತ್ತ RRR ಓಟ!ಜಪಾನಿಯರ ಮನಗೆದ್ದ ರಾಮ್‌-ಭೀಮ್ ಬ್ರೊಮ್ಯಾನ್ಸ್: ಹಳೇ ದಾಖಲೆ ಮುರಿದು ನಂಬರ್ ವನ್ ಸ್ಥಾನದತ್ತ RRR ಓಟ!

  ಹಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಮಾರ್ವೆಲ್ ರಾಜಮೌಳಿಗೆ ಆಫರ್ ಒಂದನ್ನು ನೀಡಿದೆ. ಭಾರಿ ಅದ್ಧೂರಿ ಸಿನಿಮಾಗಳಿಗೆ ಜನಪ್ರಿಯವಾಗಿರುವ ಮಾರ್ವೆಲ್ ಸಂಸ್ಥೆಯು, ರಾಜಮೌಳಿಯನ್ನು ಸಂಪರ್ಕಿಸಿದ್ದು, ತಮಗಾಗಿ ಸಿನಿಮಾ ಮಾಡಿಕೊಡುವಂತೆ ಮನವಿ ಮಾಡಿದೆ. ಈ ವಿಷಯವನ್ನು ಸ್ವತಃ ರಾಜಮೌಳಿ ಬಹಿರಂಗಪಡಿಸಿದ್ದಾರೆ.

  ಮಾರ್ವೆಲ್ ಸಂಸ್ಥೆಯ ಸದ್ಯದ ಬಾಸ್ ಕೆವಿನ್ ಫ್ರಿಜೆ ರಾಜಮೌಳಿಯನ್ನು ಸಂಪರ್ಕ ಮಾಡಿರುವ ಬಗ್ಗೆ ಹಾಲಿವುಡ್‌ ಪತ್ರಿಕೆಗಳಲ್ಲಿಯೂ ದೊಡ್ಡದಾಗಿ ವರದಿಯಾಗಿದ್ದು, ಈ ಬಗ್ಗೆ ಮಾತನಾಡಿರುವ ನಿರ್ದೇಶಕ ರಾಜಮೌಳಿ, ''ಹಾಲಿವುಡ್‌ನಿಂದ ಈ ಬಗ್ಗೆ ಸಾಕಷ್ಟು ಮನವಿಗಳು, ವಿಚಾರಣೆಗಳು ಬಂದಿವೆ. ಆದರೆ ನಾನು ಮಹೇಶ್ ಬಾಬು ಅವರೊಟ್ಟಿಗೆ ಸಿನಿಮಾ ಮಾಡುವುದು ಖಾತ್ರಿಯಾಗಿದೆ. ಅವರು ತೆಲುಗಿನ ಸೂಪರ್ ಸ್ಟಾರ್ ನಟ. ಅವರೊಟ್ಟಿಗೆ ಸಿನಿಮಾ ಮಾಡಲು ನಾನು ಕಮಿಟ್ ಆಗಿದ್ದೇನೆ'' ಎಂದಿದ್ದಾರೆ.

  ಮುಂದುವರೆದು, ''ಆದರೆ ನನಗೆ ಹಾಲಿವುಡ್‌ ಬಗ್ಗೆ ಆಸಕ್ತಿ ಇದೆ. ಅವರು ಸಿನಿಮಾ ಮಾಡುವ ರೀತಿ. ಅವರ ಮೆಥೆಡಾಲಜಿಗಳು, ಚಿತ್ರೀಕರಣ ಮಾಡುವ ರೀತಿ ಹೀಗೆ ಹಲವು ವಿಷಯಗಳನ್ನು ಕಲಿಯುವ ಆಸಕ್ತಿ ಇದೆ. ಅವರೊಟ್ಟಿಗೆ ಸಹಯೋಗ ಸಾಧಿಸಿ ಇನ್ನಷ್ಟು ಅದ್ಭುತವಾದ ಸಿನಿಮಾಗಳನ್ನು ಹೊರತರುವ ಯೋಜನೆ ಇದೆ ಎಂದಿದ್ದಾರೆ.

  ಈ ಸಂದರ್ಭದಲ್ಲಿ ತಾವು ಮೆಚ್ಚುವ ಹಾಲಿವುಡ್ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ರಾಜಮೌಳಿ, 'ಬೆನ್ ಹರ್', 'ಇಂಡಿಯಾನಾ ಜೋನ್ಸ್‌' ತಮಗೆ ಇಷ್ಟವೆಂದು, ಎಂದಾದರೂ 'ಪ್ರಿನ್ಸ್ ಆಫ್ ಪರ್ಷಿಯಾ' ಸಿನಿಮಾವನ್ನು ತೆಲುಗಿಗೆ ಬದಲಾಯಿಸಿ ನಿರ್ಮಿಸುವ ಆಸೆಯನ್ನೂ ಸಹ ಅವರು ವ್ಯಕ್ತಪಡಿಸಿದ್ದಾರೆ.

  English summary
  Famous Hollywood production house Marvel contacted SS Rajamouli and request to make movie for them.
  Sunday, November 27, 2022, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X