For Quick Alerts
  ALLOW NOTIFICATIONS  
  For Daily Alerts

  'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು

  |

  'ಮೀ ಟೂ' ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಾಲಿವುಡ್‌ನ ಖ್ಯಾತ ನಿರ್ಮಾಪಕ ಹಾರ್ವಿ ವೀನ್‌ಸ್ಟೀನ್ ಅವರಿಗೆ 23 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

  ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ | DEEPIKA PADUKONE | NITHYA MENEN | FILMIBEAT KANNADA

  ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ನ್ಯಾಯಾಲಯವೊಂದು 67 ವರ್ಷದ ವೀನ್‌ಸ್ಟೀನ್ ಅವರಿಗೆ ಕಾರಾಗೃಹ ಶಿಕ್ಷೆ ವಿಧಿಸಿತು. ವೀನ್‌ಸ್ಟೀನ್ ವಿರುದ್ಧದ ಆರೋಪಗಳು ದೃಢಪಟ್ಟಿದ್ದರಿಂದ ಫೆಬ್ರವರಿಯಲ್ಲಿ ಶಿಕ್ಷೆ ನಿಗದಿಗೊಳಿಸಲಾಗಿತ್ತು. ಬುದವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.

  ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!ಡ್ಯಾನ್ಸ್ ಪ್ರ್ಯಾಕ್ಟೀಸ್ ಅಂತ ಕರೆದು ಹಾಸಿಗೆ ಮೇಲೆ ಎಸೆದ: ಗಣೇಶ್ ಆಚಾರ್ಯ ವಿರುದ್ಧ ಸಿಡಿದ ನೃತ್ಯಗಾರ್ತಿ.!

  ವೀನ್‌ಸ್ಟೀನ್ ವಿರುದ್ಧ ಫಸ್ಟ್ ಡಿಗ್ರಿ ಲೈಂಗಿಕ ಅಪರಾಧ ಕೃತ್ಯ ಮತ್ತು ಥರ್ಡ್ ಡಿಗ್ರಿ ಅತ್ಯಾಚಾರ ಪ್ರಕರಣಗಳು ನಿಗದಿಯಾಗಿದ್ದವು. ಅವರ ಲೈಂಗಿಕ ಅಪರಾಧ ಕೃತ್ಯಗಳಿಗೆ 20 ವರ್ಷ ಮತ್ತು ಅತ್ಯಾಚಾರ ಪ್ರಕರಣಕ್ಕೆ ಮೂರು ವರ್ಷ ಶಿಕ್ಷೆ ವಿಧಿಸಿ ನ್ಯಾಯಾಧೀಶ ಜೇಮ್ಸ್ ಬುರ್ಕ್ ತೀರ್ಪು ನೀಡಿದರು.

  ಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವ ಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವ

  ಮಹಿಳೆಯರ ಮೇಲೆ ಅನೇಕ ಬಾರಿ ದೌರ್ಜನ್ಯ ಎಸೆದ ಆರೋಪ ವೀನ್‌ಸ್ಟೀನ್ ಮೇಲಿದೆ. 2013ರಲ್ಲಿ ನ್ಯೂಯಾರ್ಕ್ ಸಿಟಿ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಮತ್ತು 2006ರಲ್ಲಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಬಲವಂತವಾಗಿ ಮೌಖಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪವಿದೆ. ಈ ಪ್ರಕರಣಗಳು 'ಮೀ ಟೂ' ಆಂದೋಲನ ಆರಂಭವಾದಾಗ ಬೆಳಕಿಗೆ ಬಂದಿದ್ದವು. 2018ರ ಮೇ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು.

  ಮೀಟೂ ಎಫೆಕ್ಟ್: 'ಇವರ' ಸಮ್ಮುಖದಲ್ಲೇ ನಡೆಯಬೇಕು 'ಆ' ದೃಶ್ಯಗಳ ಚಿತ್ರೀಕರಣ.!ಮೀಟೂ ಎಫೆಕ್ಟ್: 'ಇವರ' ಸಮ್ಮುಖದಲ್ಲೇ ನಡೆಯಬೇಕು 'ಆ' ದೃಶ್ಯಗಳ ಚಿತ್ರೀಕರಣ.!

  ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ವೀನ್‌ಸ್ಟೀನ್, ಇವು ಸಹಮತದಿಂದ ನಡೆದಿದ್ದ ಲೈಂಗಿಕ ಕ್ರಿಯೆಗಳಾಗಿದ್ದವು ಎಂದು ಸಮರ್ಥಿಸಿಕೊಂಡಿದ್ದರು. ಅವರ ಮೇಲೆ 2013ರ ಫೆಬ್ರವರಿಯಲ್ಲಿ ಲಾಸ್ ಏಂಜಲಿಸ್‌ನ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು ಸೇರಿದಂತೆ ಇನ್ನೂ ನಾಲ್ಕು ಪ್ರಕರಣಗಳಿದ್ದು, ಅವುಗಳ ವಿಚಾರಣೆ ಪೂರ್ಣಗೊಂಡರೆ ಮತ್ತಷ್ಟು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. 80ಕ್ಕೂ ಹೆಚ್ಚು ಮಹಿಳೆಯರು ವೀನ್‌ಸ್ಟೀನ್‌ ಅವರಿಂದ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.

  English summary
  Hollywood producer Harvey Weinstein who was in news during Me Too movement was sentenced to 23 years of prison in rape and sexual harassment cases.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X