twitter
    For Quick Alerts
    ALLOW NOTIFICATIONS  
    For Daily Alerts

    ಮೀಟೂ ಎಫೆಕ್ಟ್: 'ಇವರ' ಸಮ್ಮುಖದಲ್ಲೇ ನಡೆಯಬೇಕು 'ಆ' ದೃಶ್ಯಗಳ ಚಿತ್ರೀಕರಣ.!

    By ಫಿಲ್ಮಿಬೀಟ್ ಡೆಸ್ಕ್
    |

    #ಮೀಟೂ ಚಳುವಳಿ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.?! 2018 ರಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಇದೇ ಮೀಟೂ ಅಭಿಯಾನದಿಂದ.!

    #ಮೀಟೂ ಅಭಿಯಾನದಿಂದಾಗಿ ನಟಿಯರು ತಮಗಾದ ಕರಾಳ ಅನುಭವವನ್ನು ಹಂಚಿಕೊಳ್ಳಲು ಆರಂಭಿಸಿದ ಮೇಲೆ ಹಲವು ನಿರ್ದೇಶಕ, ನಿರ್ಮಾಪಕರ ಮುಖವಾಡ ಕಳಚಿ ಬಿತ್ತು. ಕಾಮುಕರ ಬಂಡವಾಳ ಬಯಲಾಯಿತು. ಅವಕಾಶದ ಹೆಸರಿನಲ್ಲಿ ನಟಿಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಬೆಳಕಿಗೆ ಬಂತು.

    ಅಸಲಿಗೆ, ಈ #MeTooMovement ಶುರುವಾಗಿದ್ದು ಹಾಲಿವುಡ್ ನಲ್ಲಿ. ಅಮೇರಿಕಾದ ಫಿಲ್ಮ್ ಪ್ರೊಡ್ಯೂಸರ್ ಹಾರ್ವಿ ವೈನ್ ಸ್ಟೀನ್ ವಿರುದ್ಧ ಡಜನ್ ಗಟ್ಟಲೆ ನಟಿಮಣಿಯರು ಲೈಂಗಿಕ ಕಿರುಕುಳದ ಆರೋಪ ಮಾಡಲು ಆರಂಭಿಸಿದ ಮೇಲೆ 2017 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ #MeToo ವೈರಲ್ ಆಯ್ತು.

    ಕಾಸ್ಟಿಂಗ್ ಕೌಚ್ (ಸಿನಿಮಾದಲ್ಲಿ ಅವಕಾಶ ಕೊಡುವ ನೆಪದಲ್ಲಿ ನಟಿಯರನ್ನು ಲೈಂಗಿಕ ಉದ್ದೇಶಕ್ಕೆ ಬಳಸಿಕೊಳ್ಳುವುದು) ಜೊತೆಗೆ ಲೈಂಗಿಕ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ತಮಗಾದ ಕೆಟ್ಟ ಅನುಭವಗಳನ್ನು ನಟಿಯರು ಹೊರಗೆ ಹಾಕುತ್ತಿದ್ದ ಹಾಗೆ ಹಾಲಿವುಡ್ ನಲ್ಲಿ ಹೊಸ ಬೆಳವಣಿಗೆ ಆಗಿದೆ.

    ಎಂಟರ್ ಟೇನ್ಮೆಂಟ್ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಾಗೆ, ಚಿತ್ರೀಕರಣದ ಸೆಟ್ ನಲ್ಲಿ ವೃತ್ತಿಪರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ನಟಿಯರಿಂದ ವ್ಯಾಪಕವಾಗಿ ಕೇಳಿ ಬಂದ ಮೇಲೆ 'ಇನ್ಟಿಮಸಿ ಡೈರೆಕ್ಟರ್ಸ್ ಇಂಟರ್ ನ್ಯಾಷನಲ್' ಸಂಸ್ಥೆ ಪ್ರಾರಂಭವಾಗಿದೆ.

    ಮಾದಕ, ಲೈಂಗಿಕ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ 'ಅಸಭ್ಯ' ವರ್ತನೆಯನ್ನು ತಡೆಯಲು ಪ್ರತ್ಯೇಕ ಹುದ್ದೆ ಸೃಷ್ಟಿಸಲಾಗಿದೆ. 'ಆ' ದೃಶ್ಯಗಳನ್ನು ಪರ್ಫೆಕ್ಟ್ ಆಗಿ ಪ್ಲಾನ್ ಮಾಡಲು ಮತ್ತು ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲು 'ಇನ್ಟಿಮಸಿ ಕೋ-ಆರ್ಡಿನೇಟರ್' (Intimacy Co-ordinator) ಹಾಗೂ 'ಲೈಂಗಿಕ ದೃಶ್ಯಗಳ ಸಂಯೋಜಕ'ರನ್ನು (Intimacy Choreographer) ನೇಮಿಸಿಕೊಳ್ಳಲಾಗುತ್ತಿದೆ.

    me-too-effect-growing-importance-of-intimacy-co-ordinators

    ಲೈಂಗಿಕ ದೃಶ್ಯಗಳನ್ನು ಸಂಯೋಜಿಸುವ ಜವಾಬ್ದಾರಿ ಲೈಂಗಿಕ ದೃಶ್ಯಗಳ ಸಂಯೋಜಕರದ್ದಾಗಿದ್ದರೆ (Intimacy Choreographer), ಇನ್ಟಿಮಸಿ ಕೋ-ಆರ್ಡಿನೇಟರ್ ಗಳ ಕೆಲಸ ಇಂತಿದೆ..

    * ಕಥೆ ಮತ್ತು ಚಿತ್ರಕಥೆ ಪ್ರಕಾರ, ಲೈಂಗಿಕ ದೃಶ್ಯಗಳ ಬಗ್ಗೆ ಅದರಲ್ಲಿ ಪಾಲ್ಗೊಳ್ಳುವ ನಟ-ನಟಿಯರಿಗೆ ವಿವರಿಸುವುದು.
    * ಲೈಂಗಿಕ ದೃಶ್ಯಗಳು ಹೇಗೆ ಮೂಡಿಬರುತ್ತದೆ ಎಂದು ವಿವರಣೆ ನೀಡುವುದು. ಅದಕ್ಕೆ ಬೇಕಾದ ತಯಾರಿ ಮಾಡುವುದು.
    * ಲೈಂಗಿಕ ದೃಶ್ಯಗಳಲ್ಲಿ ಪಾಲ್ಗೊಳ್ಳಲು ನಟ-ನಟಿಯರಿಂದ ಒಪ್ಪಿಗೆ ಪಡೆಯುವುದು. ಚಿತ್ರೀಕರಣ ನಡೆಯುವಾಗ ಮುಜುಗರ ಆಗದಂತೆ ನೋಡಿಕೊಳ್ಳುವುದು.
    * ಲೈಂಗಿಕ ದೃಶ್ಯಗಳಲ್ಲಿ ಪಾಲ್ಗೊಳ್ಳುವಾಗ ಅಗತ್ಯ ವಸ್ತುಗಳನ್ನು ನಟ-ನಟಿಯರಿಗೆ ನೀಡುವುದು.
    * ಲೈಂಗಿಕ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಅನುಚಿತ ವರ್ತನೆಯಾಗದಂತೆ ನೋಡಿಕೊಳ್ಳುವುದು.

    ಅಂದ್ಹಾಗೆ, 2018 ರಿಂದ ಲೈಂಗಿಕ ದೃಶ್ಯಗಳಿರುವ ತನ್ನ ಎಲ್ಲಾ ಸೀರೀಸ್ ಗಳಲ್ಲಿ 'ಇನ್ಟಿಮಸಿ ಕೋ-ಆರ್ಡಿನೇಟರ್' ಗಳನ್ನು ಬಳಸಿಕೊಳ್ಳುವ ನಿಯಮವನ್ನು HBO ಟೆಲಿವಿಷನ್ ನೆಟ್ ವರ್ಕ್ ಜಾರಿಗೆ ತಂದಿದೆ. ಇನ್ನೂ, 'ಇನ್ಟಿಮಸಿ ಕೋ-ಆರ್ಡಿನೇಟರ್'ಗಳನ್ನು ಬಳಸಿಕೊಂಡು ನೆಟ್ ಫ್ಲಿಕ್ಸ್ ನಿರ್ಮಿಸಿದ ಮೊದಲ ವೆಬ್ ಸೀರೀಸ್ 'ಸೆಕ್ಸ್ ಎಜುಕೇಷನ್' ಜನವರಿ 2019 ರಲ್ಲಿ ಬಿಡುಗಡೆ ಆಗಿತ್ತು.

    ಸದ್ಯ ಅಲಿಷಾ ರೋಡಿಸ್ ನೇತೃತ್ವದಲ್ಲಿ 'ಇನ್ಟಿಮಸಿ ಕೋ-ಆರ್ಡಿನೇಟರ್'ಗಳು ಕಾರ್ಯ ನಿರ್ವಹಿಸುತ್ತಿದ್ದು, ಎರಡು ಡಜನ್ ಗಿಂತಲೂ ಅಧಿಕ 'ಇನ್ಟಿಮಸಿ ಕೋ-ಆರ್ಡಿನೇಟರ್'ಗಳು HBOದಲ್ಲಿದ್ದಾರೆ.

    English summary
    Me Too effect: Growing importance of Intimacy Co-ordinators in Hollywood.
    Friday, January 17, 2020, 10:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X