twitter
    For Quick Alerts
    ALLOW NOTIFICATIONS  
    For Daily Alerts

    'ಕಂಟೇಜಿಯನ್' ಸಿನಿಮಾದ ವೈದ್ಯಕೀಯ ಸಲಹೆಗಾರ, ಖ್ಯಾತ ವೈರಾಲಜಿಸ್ಟ್‌ಗೆ ಕೊರೊನಾವೈರಸ್

    |

    ಜಗತ್ತಿನ ಪ್ರಸಿದ್ಧ ವೈರಾಲಜಿಸ್ಟ್‌ಗಳಲ್ಲಿ ಒಬ್ಬರಾದ ಡಾ. ಇಯಾನ್ ಲಿಪ್‌ಕಿನ್ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. 2020ರಲ್ಲಿ ವೈರಸ್‌ ಒಂದು ಜಗತ್ತನ್ನು ತಲ್ಲಣಗೊಳಿಸಲಿದೆ ಎಂಬ ಭವಿಷ್ಯದ ಪರಿಕಲ್ಪನೆಯೊಂದಿಗೆ 2011ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್‌ನ ಜನಪ್ರಿಯ ಸಿನಿಮಾ 'ಕಂಟೇಜಿಯನ್'ಗೆ ಅವರು ವೈದ್ಯಕೀಯ ಸಲಹೆಗಾರರಾಗಿದ್ದರು.

    ಕೊಲಂಬಿಯಾ ವಿಶ್ವವಿದ್ಯಾಲಯದ ಇನ್‌ಫೆಕ್ಷನ್ ಆಂಡ್ ಇಮ್ಯುನಿಟಿ ಕೇಂದ್ರದ ಮುಖ್ಯಸ್ಥರಾಗಿರುವ ಲಿಪ್‌ಕಿನ್, ವೈರಸ್‌ಗಳಿಗೆ ಸಂಬಂಧಿಸಿದಂತೆ ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಿದ್ದರು. ತಮಗೆ ಕೊರೊನಾ ವೈರಸ್ ತಗುಲಿರುವುದನ್ನು ಅವರೇ ಬಹಿರಂಗಪಡಿಸಿದ್ದಾರೆ.

    2020ರ ವೈರಸ್ ಅನಾಹುತದ ಬಗ್ಗೆ ಮೊದಲೇ ಭವಿಷ್ಯ ನುಡಿದಿತ್ತು ಈ ಸಿನಿಮಾ2020ರ ವೈರಸ್ ಅನಾಹುತದ ಬಗ್ಗೆ ಮೊದಲೇ ಭವಿಷ್ಯ ನುಡಿದಿತ್ತು ಈ ಸಿನಿಮಾ

    'ಅದು ನನಗೇ ತಗುಲುವಂತಿದ್ದರೆ, ಇನ್ನು ಯಾರಿಗೆ ಬೇಕಾದರೂ ತಗುಲಬಹುದು' ಎಂದಿರುವ ಲಿಪ್‌ಕಿನ್, ತಮ್ಮ ಪರಿಸ್ಥಿತಿ ಹೀನಾಯವಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಎಲ್ಲಿಂದ ವೈರಸ್ ತಗುಲಿತು ಎನ್ನುವುದು ಮುಖ್ಯವಲ್ಲ. ಏಕೆಂದರೆ ಅಮೆರಿಕದಾದ್ಯಂತ ವೈರಸ್ ಹರಡಿದೆ. ಅದು ಎಲ್ಲಿಂದ ಬೇಕಾದರೂ ನಿಮಗೆ ತಗುಲಬಹುದು' ಎಂದಿದ್ದಾರೆ.

    Medial Consultant Of Contagion Movie Virologist Ian Lipkin Tests Coronavirus Positive

    ವೈರಸ್‌ಗಳ ಕುರಿತು ನೀವು ನೋಡಲೇಬೇಕಾದ 20 ಕುತೂಹಲಕಾರಿ ಸಿನಿಮಾಗಳಿವು...ವೈರಸ್‌ಗಳ ಕುರಿತು ನೀವು ನೋಡಲೇಬೇಕಾದ 20 ಕುತೂಹಲಕಾರಿ ಸಿನಿಮಾಗಳಿವು...

    2011ರಲ್ಲಿ ಬಿಡುಗಡೆಯಾಗಿದ್ದ ಸ್ಟೀವನ್ ಸೊಡರ್‌ಬರ್ಗ್ ನಿರ್ದೇಶನದ 'ಕಂಟೇಜಿಯನ್' ಸಿನಿಮಾ 2020ರಲ್ಲಿ ವೈರಸ್‌ಒಂದು ಹೇಗೆ ಜಗತ್ತಿನಲ್ಲಿ ದಾಳಿ ನಡೆಸುತ್ತದೆ ಎಂಬ ಕಥಾವಸ್ತುವನ್ನು ಹೊಂದಿತ್ತು. ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಈ ಸಲಹೆಗಾರರಲ್ಲಿ ಲಿಪ್‌ಕಿನ್ ಒಬ್ಬರು.

    English summary
    The medical consultant of Steven Soderbergh's Contagion movie and well known virologist Dr Ian Lipkin tested positive with coronavirus.
    Thursday, March 26, 2020, 8:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X