Avatar 3 Fire and Ash : ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ರೆಡಿಯಾದ ಹೊಸ ವಿಲನ್ ವರಂಗ್

ಹಾಲಿವುಡ್ ನವರ ಹಾವಳಿನೇ ಹಾಗೇ. ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಮೊದಲಿಂದಲೂ ನಿಬ್ಬೇರಗಾಗಿಸುವ ಗುಣ ಇವರದ್ದು. ವರ್ಷಕ್ಕೂ ಮುಂಚೆಯೇ ತಮ್ಮ ಚಿತ್ರಕ್ಕೆ ಎಲ್ಲರನ್ನೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ಇವರಿಗೆ ಭಾರತ ಮೊದಲಿಂದಲೂ ಕೋಟಿ ಕೋಟಿ ಹಣವನ್ನು ನೀಡುತ್ತಲೇ ಬಂದಿದೆ. ನಿರ್ಮಾಪಕರ ಖಜಾನೆಯನ್ನು ತುಂಬಿಸುತ್ತಲೇ ಇದೆ. ಇದಕ್ಕೆ ಭಾರತದಲ್ಲಿ ಬ್ಲಾಕ್ ಬಸ್ಟರ್ ಆದ ಹಲವು ಚಿತ್ರಗಳು ಉದಾಹರಣೆಗಳಾಗಿ ಇವೆ.

ಈ ಸಾಲಿಗೆ ''ಅವತಾರ್ :ಫೈರ್ ಆಂಡ್ ಆಶ್'' ಸೇರಿಕೊಳ್ಳುವ ಎಲ್ಲಾ ಲಕ್ಷಣ ಸದ್ಯ ದಟ್ಟವಾಗಿ ಕಾಣುತ್ತಿವೆ. ಹೌದು.. ''ಅವತಾರ್''.. ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳಲ್ಲೊಂದು. 2009ರಲ್ಲಿಯೇ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದ 'ಜೇಮ್ಸ್ ಕ್ಯಾಮರೂನ್‌' ನಿರ್ದೇಶನದ ಈ ಚಿತ್ರದ ಎರಡನೇ ಭಾಗ 2022ರಲ್ಲಿ ತೆರೆಗೆ ಬಂದಿತ್ತು.

Meet Varang Avatar Fire and Ash Reveals Fiery Villain Trailer Drops with Fantastic Four

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ''ಅವತಾರ್ ದಿ ವೇ ಆಫ್ ವಾಟರ್‌'' ₹484.36 ಕೋಟಿಯನ್ನು ಗಳಿಸಿತ್ತು.

ಇದೀಗ ''ಅವತಾರ್ 3'' ಸರದಿ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಜೇಮ್ಸ್ ಕ್ಯಾಮರೂನ್ ಮತ್ತು ಅವರ ತಂಡ ಸದ್ಯ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ ಮಾಡಿದ್ದು, ಈ ಫಸ್ಟ್ ಲುಕ್‌ ಗೆ ಅಖಂಡ ಭಾರತದ ಅನೇಕ ಸಿನಿಮಾಸ್ತಕರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಅವತಾರ್ 3'ಗೆ ಉಘೇ ಉಘೇ ಎನ್ನುತ್ತಿದ್ದಾರೆ. ಇದರ ಪರಿಣಾಮ 'ಅವತಾರ್‌ 3' ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿದೆ.

'ಅವತಾರ್'ನ 'ಪ್ಯಾಂಡೋರಾ' ಪ್ರಪಂಚದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆ ಇರುವ ಈ ಪೋಸ್ಟರ್‌ ಮೂಲಕ ಜೇಮ್ಸ್ ಕ್ಯಾಮರೂನ್ ತಮ್ಮ ಮಹತ್ವಕಾಂಕ್ಷೆಯ ಚಿತ್ರದ ಪ್ರಮುಖ ವಿಲನ್ ''ವರಂಗ್‌''ನ ಪರಿಚಯಿಸಿದ್ದಾರೆ. ಸದ್ಯ ಈ ಲುಕ್ ಹಲವರಿಗೆ ಕಿಕ್ ಕೊಡಲು ಶುರು ಮಾಡಿದ್ದು ಈ ಬಾರಿ ಬೆಂಕಿ ಮತ್ತು ಬೂದಿ ಚಿತ್ರದಲ್ಲಿರುವ ಸುಳಿವನ್ನು ನೀಡಿದ್ದಾರೆ. ಚಿತ್ರದ ಟ್ರೇಲರ್‌ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ.

ಆ ಪ್ರಕಾರ ''ಅವತಾರ್ 3'' ಚಿತ್ರದ ಟ್ರೇಲರ್ ಇದೇ ಜುಲೈ 25ರಂದು ತೆರೆಗೆ ಬರಲಿರುವ ಪ್ರಖ್ಯಾತ ಮಾರ್ವಲ್ ಸ್ಟುಡಿಯೋದ ''ದಿ ಫೆಂಟಾಸ್ಟಿಕ್ ಫೋರ್ ಫಸ್ಟ್ ಸ್ಟೆಪ್ಸ್'' ಚಿತ್ರದ ಜೊತೆ ಬಿಡುಗಡೆಯಾಗುತ್ತಿರುವುದಾಗಿ ಹೇಳಿದ್ದರೆ. ''ಅವತಾರ್ :ಫೈರ್ ಆಂಡ್ ಆಶ್''ನ ಟ್ರೇಲರ್‌ನ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳುವುದರಿಂದ ವಂಚಿತರಾಗಬೇಡಿ ಎಂದು ಕೂಡ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

meet-varang-avatar-fire-and-ash-reveals-fiery-villain-trailer-drops-with-fantastic-four

''ವರಂಗ್‌''ನ ಪಾತ್ರವನ್ನು ಪ್ರಖ್ಯಾತ ನಟಿ 'ಊನಾ ಚಾಪ್ಲಿನ್' ಜೀವ ತುಂಬಿದ್ದಾರೆ. ಇವರ ಪಾತ್ರ ನಾವಿ ಜನಾಂಗದವರದ್ದಲ್ಲ ಬದಲಿಗೆ ಇವರು ಬೇರೆ ಗ್ರಹದಿಂದ ಬಂದಿರಲೂಬಹುದು ಎಂಬ ಮಾತು ಮತ್ತು ಚರ್ಚೆ ಈಗಾಗಲೇ ಶುರುವಾಗಿದೆ. ಈ ಪಾತ್ರದ ಮೂಲಕ ಕಥೆ ಮತ್ತೊಂದು ತಿರುವು ಪಡೆಯುತ್ತೆ ಎನ್ನುವ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ.

ಇದೆಲ್ಲದಕ್ಕೆ ಪೂರಕವಾಗಿ ''ನ್ಯೂಯಾರ್ಕ್ ಟೈಮ್ಸ್'' ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ಡಿಸ್ನಿಯ ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್ ಕಚೇರಿಗಳಲ್ಲಿ ಕೆಲವರು ನೋಡಿದ್ದು, ಟ್ರೇಲರ್ ನೋಡಿ ವ್ಹಾ ಎಂಬ ಉದ್ಘಾರವನ್ನು ತೆಗೆದಿದ್ದಾರೆ ಎಂದು ವರದಿಯನ್ನು ಮಾಡಿದೆ.

ಸದ್ಯ ಹೊಚ್ಚ ಹೊಸ ಪೋಸ್ಟರ್ ಮೂಲಕ ವಿಶ್ವದೆಲ್ಲೆಡೆ ಸಂಚಲನವನ್ನು ಸೃಷ್ಟಿಸಿರುವ ''ಅವತಾರ್ :ಫೈರ್ ಆಂಡ್ ಆಶ್'' ಚಿತ್ರ ಈ ಡಿಸೆಂಬರ್ 19ರಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ. ಈ ಚಿತ್ರದ ನಂತರ ಇನ್ನು ಎರಡು ಭಾಗಗಳು ತೆರೆಗೆ ಬರುವುದು ಬಾಕಿ ಇದ್ದು ''ಅವತಾರ್ 4'' 2029ರಲ್ಲಿ ಮತ್ತು ''ಅವತಾರ್ 5'' 2031ರಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Get ready for Avatar 3! James Cameron unveils new antagonist Varang, plus the first trailer drops in theaters with Fantastic Four: First Steps this Friday.
Read more about: avatar trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X