ಮುಂದಿನ ವರ್ಷ ನಡೆಯಲಿರುವ 'ಕೋಲ್ಡ್ ಪ್ಲೇ' ಸಂಗೀತ ಕಾರ್ಯಕ್ರಮಕ್ಕೆ ನೂಕುನುಗ್ಗಲು, ಕ್ರ್ಯಾಶ್ ಆದ ಬುಕ್ ಮೈ ಶೋ...!

ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಕೋಲ್ಡ್ ಪ್ಲೇ ತಂಡದ ಸಂಗೀತ ಸುಧೆಯಲ್ಲಿ ತೇಲಲು ನೂಕು ನುಗ್ಗಲು ಭಾರತದಲ್ಲಿ ನಡೆಯುತ್ತಿದೆ. ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಟಿಕೆಟ್ ನ ನೀಡಲು ಸಾಧ್ಯವಾಗದೇ ಬುಕ್ ಮೈ ಶೋ ಅಪ್ಲಿಕೇಶನ್ ಕ್ರ್ಯಾಶ್ ಆಗಿದೆ.

ಹೌದು, ಕೋಲ್ಡ್ ಪ್ಲೇ.. ಬ್ರಿಟನ್‌ನ ರಾಕ್ ಬ್ಯಾಂಡ್. ತಮ್ಮ ಸಂಗೀತದಿಂದನೇ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ವಿಶ್ವದೆಲ್ಲೆಡೆ ಸಂಪಾದನೆ ಮಾಡಿರುವ ಈ ತಂಡಕ್ಕೆ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿಗಳಿದ್ದಾರೆ. ಇವರ ಹಾಡನ್ನು ಕೇಳುತ್ತಾ ಮೈ ಮರೆಯುತ್ತಾರೆ. ಕುಂತಲ್ಲಿಯೇ ಕುಣಿಯುತ್ತಾರೆ.

Meme frenzy as BookMyShow crashes during Coldplay India ticket sale Didn t sell a single ticket

ಇಂತಹ ಕೋಲ್ಡ್ ಪ್ಲೇ ತಂಡ ಒಂಬತ್ತು ವರ್ಷದ ನಂತರ ಭಾರತಕ್ಕೆ ಮರಳಿ ಬರುತ್ತಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಜನವರಿ 18 ಮತ್ತು 19ರಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಹಜವಾಗಿ ಈ ಸುದ್ದಿ ಕೇಳಿದ ಅಭಿಮಾನಿ ವರ್ಗ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದೆ.

ಆದರೆ.. ಈ ಸಂಗೀತ ಪ್ರಿಯರ ಉತ್ಸಾಹ ಮತ್ತು ಉತ್ಸುಕತೆಯ ಅರಿವು ಬುಕ್ ಮೈ ಶೋನವರಿಗೆ ಇರಲಿಲ್ಲ. ಕೋಲ್ಡ್ ಪ್ಲೇ ತಂಡದ ಹಾಡು ಕೇಳಲು ಭಾರತದಲ್ಲಿ ಒಂದು ದೊಡ್ಡ ಯುವ ಸಮೂಹ ತುದಿಗಾಲಿನಲ್ಲಿ ನಿಂತಿದೆ ಎನ್ನುವ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿಯೇ ಇಂದು ಟಿಕೆಟ್ ವಿತರಣೆ ಮಾಡುವ ಜವಾಬ್ಧಾರಿಯನ್ನು ನಿರ್ವಹಿಸಲು ಸಾಧ್ಯವಾಗದೇ ಬುಕ್ ಮೈ ಶೋ ಹೈರಾಣಾಗಿದೆ. ಜನಜಂಗುಳಿಯಿಂದ ವೆಬ್ ಸೈಟ್ ಕ್ರ್ಯಾಶ್ ಆಗಿದೆ.

Meme frenzy as BookMyShow crashes during Coldplay India ticket sale Didn t sell a single ticket

ಇನ್ನೂ ಅತ್ತ ವೆಬ್ ಸೈಟ್ ನೆಲಕಚ್ಚಿದ ನಂತರ ಇತ್ತ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರಿಗೆ ಈ ವಿಚಾರ ಆಹಾರವಾಗಿದೆ. ಬುಕ್ ಮೈ ಶೋನ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಕನಸು ಮನಸಿನಲ್ಲಿ ಕೂಡ ಬುಕ್ ಮೈ ಶೋ ಈ ತರಹದ ಪ್ರತಿಕ್ರಿಯೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂದರೆ, ಯಾರಿಗಾದರೂ ಒಂದಾದರೂ ಟಿಕೆಟ್ ಸಿಕ್ಕಿದೆಯಾ ಎಂದು ಇನ್ನೊಬ್ಬರು ಬುಕ್ ಮೈ ಶೋ ಕಾಲೆಳೆಯುತ್ತಿದ್ದಾರೆ. ತರ ತರಹದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ಕೋಲ್ಡ್ ಪ್ಲೇ ಸಂಗೀತ ಕಾರ್ಯಕ್ರಮದ ಟಿಕೆಟ್‌ಗಳು ₹2,500 ರಿಂದ ಪ್ರಾರಂಭವಾಗುತ್ತಿದ್ದು, ₹3,000, ₹3,500, ₹4,000, ₹4,500, ₹9000, ₹9500 ಮತ್ತು ₹12,500 ವರೆಗೆ ದರ ನಿಗದಿ ಮಾಡಲಾಗಿದೆ. ಇಷ್ಟೇ ಅಲ್ಲ ಆರಾಮಾಗಿ ಕುಳಿತು ನೋಡಲು ಬಯಸುವವರು ₹35000 ರೂಪಾಯಿಯನ್ನು ನೀಡಬಹುದು.

ಇನ್ನೂ 08 ಟಿಕೆಟ್‌ಗಳನ್ನು ಒಂದು ಬಾರಿ ಖರೀದಿಸುವ ಅವಕಾಶವನ್ನು ಕೂಡ ನೀಡಲಾಗಿದೆ. ಇನ್ನೂ ಇಂದು ಬುಕ್ ಮೈ ಶೋ ಮೂಲಕ ಟಿಕೆಟ್ ಮಧ್ಯಾಹ್ನದ ನಂತರ ಮತ್ತೊಮ್ಮೆ ಹಂಚಿಕೆಯಾಗಲಿದ್ದು ಕೋಲ್ಡ್‌ ಪ್ಲೇ ತಂಡ ನವೆಂಬರ್ 22, 2024 ರಂದು "ಇನ್‌ಫಿನಿಟಿ ಟಿಕೆಟ್‌ಗಳನ್ನು" ಮಾರಾಟ ಮಾಡಲು ಶುರುಮಾಡಲಿದೆ. ಪ್ರತಿ ಟಿಕೆಟ್‌ನ ಬೆಲೆಯನ್ನು ₹2,000ಕ್ಕೆ ಇಳಿಸುವ ಮೂಲಕ ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್ ಅನ್ನು ಹೆಚ್ಚೆಚ್ಚು ಜನ ಬಂದು ಕಣ್ತುಂಬಿಕೊಳ್ಳಲಿ ಎಂಬ ಇರಾದೆಯಿಂದ ಈ ಪ್ರಯತ್ನವನ್ನು ಈ ತಂಡ ಮಾಡುತ್ತಿದೆ.

ಒಟ್ನಲ್ಲಿ ಸದ್ಯಕ್ಕೆ ಕೋಲ್ಡ್ ಪ್ಲೇ ತಂಡಕ್ಕೆ ಭಾರತದಲ್ಲಿ ಭರ್ಜರಿ ಸ್ವಾಗತ ಸಿಗುವ ಸೂಚನೆ ಸಿಕ್ಕಿದೆ. ಟಿಕೆಟ್‌ಗಳು ಬಿಸಿ ಬಿಸಿ ಬೋಂಡಾದಂತೆ ಬಿಕರಿಯಾಗುವುದು ಖಚಿತವೆಂಬ ಸುಳಿವು ಕೂಡ ಸಿಕ್ಕಿದೆ. ಅದ್ದೂರಿಯಾದ ಸಂಗೀತ ಸಂಜೆಗೆ ಮುಂದಿನ ವರ್ಷದ ಆರಂಭದಲ್ಲಿ ಮಾಯಾನಗರಿ ಮುಂಬೈ ಸಾಕ್ಷಿಯಾಗಲಿದೆ.

More from Filmibeat

Read more about: concert music hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X