Met Gala 2023: ಜಗತ್ತಿನ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ನಲ್ಲಿ ಆಲಿಯಾ, ಪ್ರಿಯಾಂಕಾ ಮಿಂಚಿಂಗ್!
ಮೆಟ್ ಗಾಲಾ ಜಗತ್ತಿನ ಪ್ರತಿಷ್ಠಿತ ಹಾಗೂ ಮನೋರಂಜನೆಯ ಫ್ಯಾಷನ್ ಈವೆಂಟ್. ಒಂದು ರಾತ್ರಿ ನಡೆಯುವ ಫ್ಯಾಷನ್ ಲೋಕದ ಅತೀ ದೊಡ್ಡ ಈವೆಂಟ್‌ಗಳಲ್ಲಿ ಇದೂ ಒಂದು. ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವುದೇ ಪ್ರತಿಷ್ಠೆ ಎಂದು ಪರಿಗಣಿಸಲಾಗಿದೆ.
ಈ ಪ್ರತಿಷ್ಠಿತ ಮೆಟ್‌ಗಾಲಾ 2023 ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅನ್ನು ಪ್ರತಿನಿಧಿಸಿದ್ದಾರೆ.
ಮೆಟ್ ಗಾಲಾದಲ್ಲಿ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ತಮ್ಮ ಕಾಸ್ಟ್ಯೂಮ್ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಆಲಿಯಾ ಭಟ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ರೆ, ಪ್ರಿಯಾಂಕಾ ಪತಿಯೊಂದಿಗೆ ಕಪ್ಪು ಬಣ್ಣದ ಗೌನ್‌ನಲ್ಲಿ ಪಾಪರಾಜಿಗಳನ್ನ ಕಣ್ಣಿಗೆ ಬಿದ್ದಿದ್ದಾರೆ.

ಮೆಟ್‌ಗಾಲಾಗೆ ಆಲಿಯಾ ಮೊದಲ ಎಂಟ್ರಿ
ಬಾಲಿವುಡ್ ಬ್ಯೂಟೊ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಮೆಗ್‌ಗಾಲಾ ಫ್ಯಾಷನ್ ಈವೆಂಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಫ್ಯಾಷನ್ ಈವೆಂಟ್‌ನಲ್ಲಿ ದುಬಾರಿ ಬೆಲೆಯ ಗೌನ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಹಾಲಿವುಡ್ ಹಾಗೂ ಫ್ಯಾಷನ್ ಲೋಕದ ದಿಗ್ಗಜರ ಗಮನ ಸೆಳೆದಿದ್ದಾರೆ.
RRR ಸಿನಿಮಾದ ಮೂಲಕ ಆಲಿಯಾ ಭಟ್ ವಿಶ್ವದ ಗಮನ ಸೆಳೆದಿದ್ದರು. ಈಗ ಮೆಟ್ ಗಾಲಾದಲ್ಲಿ ಪ್ರಬಲ್ ಗುರುಂಗ್ ಗೌನ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ತನ್ನ ಕಾಸ್ಟ್ಯೂಮ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಜೊತೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
ಆಲಿಯಾ ಧರಿಸಿದ ಡ್ರೆಸ್ ಬೆಲೆ ಎಷ್ಟು?
ಫ್ಯಾಷನ್ ಈವೆಂಟ್ ಆಗಿರುವುದರಿಂದ ಇಲ್ಲಿಗೆ ಬರುವ ಸೆಲೆಬ್ರೆಟಿಗಳು ದುಬಾರಿ ಬೆಲೆ ಬಾಳುವ ಕಾಸ್ಟ್ಯೂಮ್ ಅನ್ನು ಧರಿಸಿ ಬರುತ್ತಾರೆ. ಆಲಿಯಾ ಭಟ್ ಮೊದಲ ಎಂಟ್ರಿ ಆಗಿರುವುದರಿಂದ ದುಬಾರಿ ಬೆಲೆಯ ಕಾಸ್ಟ್ಯೂಮ್ ಅನ್ನು ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ನೋಡಲು ಸಿಂಪಲ್ ಕಾಸ್ಟ್ಯೂಮ್ ಎನಿಸಿದ್ದರು. ಆಲಿಯಾ ಧರಿಸಿದ ಗೌನ್ ಬೆಲೆ ಬಲು ದುಬಾರಿ.
ಆಲಿಯಾ ಪ್ರತಿಷ್ಠಿತ ಫ್ಯಾಷನ್ ಬ್ರ್ಯಾಂಡ್ ಪ್ರಬಲ್ ಗುರುಂಗ್ ಗೌನ್ ಧರಿಸಿದ್ದರು. ಇದರ ಬೆಲೆ ಭಾರತದಲ್ಲೇ ಸುಮಾರು 3 ಲಕ್ಷದ 38 ಸಾವಿರದಿಂದ ಆರಂಭ ಆಗಲಿದೆ. ಹೀಗಾಗಿ ಆಲಿಯಾ ಧರಿಸಿದ ಕಾಸ್ಟ್ಯೂಮ್ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ಈ ನಟಿಯನ್ನು ಕಂಡು ನೆಟ್ಟಿಗರು ಡಿಸ್ನಿ ಪ್ರಿನ್ಸೆಸ್ ಎಂದು ಕರೆಯುತ್ತಿದ್ದಾರೆ.
ಪತಿ ಜೊತೆ ಪ್ರಿಯಾಂಕಾ ಮಿಂಚಿಂಗ್
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಕೂಡ ಮೆಟ್ ಗಾಲಾ 2023ಯಲ್ಲಿ ಭಾಗವಹಿಸುತ್ತಿದ್ದಾರೆ. ಜೋಡಿಯಾಗಿ ಜಗತ್ತಿನ ಪ್ರತಿಷ್ಠಿತ ಫ್ಯಾಷನ್ ಈವೆಂಟ್ ಮೆಟ್ ಗಾಲಾಗೆ ಆಗಮಿಸಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಮೂರನೇ ಬಾರಿ ಮೆಟ್‌ಗಾಲಾಗೆ ಆಗಮಿಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬ್ಲಾಕ್ ಅಂಡ್ ವೈಟ್ ಥೀಮ್ ಕಾಸ್ಟ್ಯೂಮ್ ತೊಟ್ಟು ಬಂದಿದ್ದರು. ವಾಲೆಂಟಿನೋ ಬ್ರ್ಯಾಂಡ್‌ನ ಡಿಸೈನರ್ ವೇರ್ ಧರಿಸಿ ಬಂದಿದ್ದರು. ಈ ತಾರಾ ಜೋಡಿಯ ಎಂಟ್ರಿಗೆ ಸಖತ್ ಸ್ಟೈಲಿಶ್ ಆಗಿತ್ತು. ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ಮೆಟ್‌ಗಾಲಾ 2023ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.


Click it and Unblock the Notifications











