ಲೈವ್ ವೀಡಿಯೋ ಮಾಡುತ್ತಿದ್ದಾಗಲೇ ಯುವತಿಗೆ ಗುಂಡೇಟು; ವೀಡಿಯೋ ವೈರಲ್

ಸಾವು ಯಾವಾಗ? ಹೇಗೆ? ಬರುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವೊಂದು ಸಾವು ಬಹಳ ಭಯಾನಕವಾಗಿರುತ್ತದೆ. ಸದ್ಯ ಮೆಕ್ಸಿಕನ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಲೇರಿಯಾ ಮಾರ್ಕ್ಯೂಜ್ ಶೂಟೌಟ್ ಪ್ರಕರಣದ ಬಹಳ ಚರ್ಚೆ ಹುಟ್ಟಾಕ್ಕಿದೆ. ಆಕೆ ಟಿಕ್‌ ಟಾಕ್ ಲೈವ್ ವೀಡಿಯೋ ಮಾಡುತ್ತಿದ್ದಾಗಲೇ ಗುಂಡೇಟು ಬಿದ್ದಿದೆ.

ಮೆಕ್ಸಿಕನ್ ದೇಶದ ಪಶ್ಚಿಮ ರಾಜ್ಯ ಜಲಿಸ್ಕೊದಲ್ಲಿರುವ ತನ್ನ ಬ್ಯೂಟಿ ಸಲೂನ್‌ನಿಂದ ವಲೇರಿಯಾ ಮಾರ್ಕ್ಯೂಜ್ ಟಿಕ್‌ ಟಾಕ್ ಲೈವ್ ವೀಡಿಯೋ ಸ್ಟ್ರೀಮಿಂಗ್ ಮಾಡುತ್ತಿದ್ದಳು. ಈ ವೇಳೆ ಆಕೆಯ ಮೇಲೆ 3 ಸುತ್ತಿನ ಗುಂಡಿನ ದಾಳಿ ನಡೆದಿದೆ. ಅದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. 23 ವರ್ಷದ ಬ್ಯೂಟಿ ಇನ್‌ಫ್ಲುಯೆನ್ಸರ್ ಹಾಗೂ ಮಾಡೆಲ್ ವಲೇರಿಯಾ ಮಾರ್ಕ್ಯೂಜ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ್ದಳು.

Mexican influencer Valeria Marquez shot dead during TikTok livestream video goes viral

ವೀಡಿಯೋ ಮಾಡಿ ತಮ್ಮ ಫಾಲೋವರ್ಸ್ ಜೊತೆ ವಲೇರಿಯಾ ಮಾರ್ಕ್ಯೂಜ್ ಮಾತನಾಡುತ್ತಿದ್ದಳು. ಅದೇ ವೇಳೆ ಯಾರೋ(ಡೆಲಿವರಿ ಬಾಯ್ ಎನ್ನಲಾಗ್ತಿದೆ) ಕರೆದಿದ್ದು ಎಂದು ಹೋಗಿ ಆತನ ಜೊತೆ ಮಾತನಾಡಿ ಬಂದು ಮತ್ತೆ ಕ್ಯಾಮರಾ ಮುಂದೆ ಮತ್ತೆ ಕುಳಿತು ಮಾತನಾಡುತ್ತಿದ್ದಂತೆ ಆಕೆಯ ಗುಂಡು ಹಾರಿದೆ. ಎದೆಗೆ ಗುಂಡು ಬೀಳುತ್ತಿದ್ದಂತೆ ವಲೇರಿಯಾ ತನ್ನ ಎದೆ ಹಿಡಿದುಕೊಂಡಿದ್ದು ಬಳಿಕ ತಲೆಗೆ 2 ಗುಂಡು ಬಿದ್ದಿದೆ.

ಇದನ್ನು ಲಿಂಗ ಆಧಾರಿತ ಹತ್ಯೆ ಎನ್ನಲಾಗುತ್ತಿದ್ದು, ಅಲ್ಲಿ ಮಹಿಳೆಯರನ್ನು ಅವರ ಲಿಂಗದ ಕಾರಣದಿಂದಾಗಿ ಗುರಿಯಾಗಿಸಲಾಗುತ್ತದೆ ಎಂದು ವರದಿಯಾಗಿದೆ. ವಲೇರಿಯಾ ಬೀಳುತ್ತಿದ್ದಂತೆ ಆಕೆಯನ್ನು ಬದುಕಿಸುವ ಪ್ರಯತ್ನ ನಡೀತು. ಆದರೆ ಅಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಗುಂಡು ಬಿದ್ದ ಕೂಡಲೇ ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ವಲೇರಿಯಾ ಬ್ಯೂಟಿ ಹಾಗೂ ಮೇಕಪ್ ಕಂಟೆಂಟ್ ಕ್ರಿಯೇಟರ್ ಆಗಿದ್ದಳು. ಅದಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಮಾಡುತ್ತಿದ್ದಳು.

ಇನ್‌ಸ್ಟಾಗ್ರಾಮ್‌ನಲ್ಲಿ 149,000 ಫಾಲೋವರ್ಸ್ ಹೊಂದಿದ್ದ ವಲೇರಿಯಾ ಮಾರ್ಕ್ಯೂಜ್ ಸಾಕಷ್ಟು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಳು. ಆಕೆಯ ಅಗಲಿಗೆ ಫಾಲೋವರ್ಸ್ ಕಾಮೆಂಟ್ ಮಾಡಿ ಸಂತಾಪ ಸೂಚಿಸುತ್ತಿದ್ದಾರೆ. ಈಗಾಗಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ವಲೇರಿಯಾ ಶೂಟೌಟ್‌ಗೆ ಕಾರಣ ಏನು ಎಂದು ತಿಳಿದುಕೊಳ್ಳಲು ಮುಂದಾಗಿದ್ದಾರೆ. ಈ ಹತ್ಯೆ ಮೆಕ್ಸಿಕನ್ ಜನರಿಗೆ ಭಾರೀ ಆಘಾತ ಹಾಗೂ ಭೀತಿ ತಂದಿದೆ.

More from Filmibeat

English summary
In a shocking incident, TikTok influencer Valeria Márquez was shot dead during a live broadcast from her salon
Read more about: actress social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X