»   » ಮಲ್ಲು ಚಿತ್ರದಲ್ಲಿ ನೀಲಿ ಚಿತ್ರಗಳ ರಾಣಿ ಮಿಯಾ ?

ಮಲ್ಲು ಚಿತ್ರದಲ್ಲಿ ನೀಲಿ ಚಿತ್ರಗಳ ರಾಣಿ ಮಿಯಾ ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಾಜಿ ಪೋರ್ನ್ ತಾರೆ ಸನ್ನಿ ಲಿಯೋನ್ ನಂತರ ಮತ್ತೊಬ್ಬ ಪೋರ್ನ್ ಸ್ಟಾರ್ ಭಾರತೀಯ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿ ಪುಳಕಿತಗೊಂಡಿದ್ದ ಪಡ್ಡೆಗಳಿಗೆ ನಿರಾಶೆಯಾಗಿದೆ.

ಮಿಯಾ ಖಲೀಫಾ- ಹೆಸರು ಕೇಳಿದರೆ ಸಾಕು ಯುವ ಸಮುದಾಯದ ಕಣ್ಣು, ಕಿವಿ ನೆಟ್ಟಗಾಗುತ್ತದೆ. ಸನ್ನಿ ನಂತರ ಪಡ್ಡೆಗಳ ನಿದ್ದೆಗೆಡಿಸಿರುವ ನೀಲಿ ಚಿತ್ರಗಳ ತಾರೆ ಮಿಯಾ ಮಲಯಾಳಂ ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು.

Mia Khalifa is not entering Mollywood or Indian Film Industry now

ಮಲಯಾಳಂ ಚಿತ್ರ Chunkzz 2: The Conclusion ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಟಂ ಸಾಂಗ್ ಗೆ ಸೊಂಟ ಬಳುಕಿಸಲಿದ್ದಾರೆ, ಮಿಯಾ ಖಲೀಫಾ ಜೊತೆ ಚಿತ್ರತಂಡ ಈಗಾಗಲೇ ಮಾತುಕತೆ ನಡೆಸಿದ್ದಾರೆ.

2018ಕ್ಕೆ ಬೆಳ್ಳಿ ತೆರೆಯ ಮೇಲೆ ಮಿಯಾ ನೋಡಿ ಆನಂದಿಸಿ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ರಿಲೀಸ್ ಆದ ಹನಿ ರೋಸ್ ನಟನೆಯ ಅಡಲ್ಟ್ ಕಾಮಿಡಿ Chunkzz ಚಿತ್ರದ ಎರಡನೇ ಭಾಗದ ಚಿತ್ರೀಕರಣ ಜಾರಿಯಲ್ಲಿದ್ದು, ಮಿಯಾ ಕರೆ ತರುವ ಯತ್ನ ನಡೆದಿತ್ತು.

ಆದರೆ, ಈ ಬಗ್ಗೆ ಬಾಲಿವುಡ್ ಲೈಫ್ ಗೆ ಸ್ಪಷ್ಟನೆ ನೀಡಿರುವ ಮಿಯಾ ಅವರ ಮ್ಯಾನೇಜರ್, ಮಿಯಾ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಭಾರತೀಯ ಚಿತ್ರರಂಗ ಪ್ರವೇಶದ ಬಗ್ಗೆ ಚಿಂತಿಸಿಲ್ಲ ಎಂದಿದ್ದಾರೆ.

ಈ ಮುಂಚೆ ಮತ್ತೊಬ್ಬ ಪೋರ್ನ್ ಸ್ಟಾರ್ ಪ್ರಿಯಾ ರೈ ಅವರು ಬಾಲಿವುಡ್ ಚಿತ್ರದಲ್ಲಿ ನಟಿಸುವ ಬಗ್ಗೆ ಗಾಳಿಸುದ್ದಿ ಗಲ್ಲಿ ಗಲ್ಲಿಯಲ್ಲಿ ಹರಡಿತ್ತು.

2012ರಲ್ಲಿ ಪೋರ್ನ್ ಇಂಡಸ್ಟ್ರೀ ತೊರೆದಿರುವ ಮಿಯಾ ಸದ್ಯ ಪತ್ರಕರ್ತೆಯಾಗಿದ್ದಾರೆ. ಇಂಡೋ-ಕೆನಡಾದ ಪೋರ್ನ್ ತಾರೆಯಾಗಿದ್ದ ಸನ್ನಿ ಲಿಯೋನ್ ಅವರು ಜಿಸ್ಮ್ 2 ಚಿತ್ರದಲ್ಲಿ ನಟಿಸಿದಂತೆ ಮಲಯಾಳಂನ ವಯಸ್ಕರ ಕಾಮಿಡಿ ಚಿತ್ರದಲ್ಲಿ ಮಿಯಾ ನಟಿಸುವ ಸುದ್ದಿ ಸದ್ಯಕ್ಕೆ ಫುಲ್ ಸ್ಟಾಪ್ ಬಿದ್ದಿದೆ.

English summary
It was reported that Mia Khalifa has been roped in to play a pivotal role in the upcoming Malayalam film Chunkzz 2: The Conclusion. Mia Khalifa's representative dismissed the baseless rumours and confirmed that the adult star is not entering the Indian film industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada