ತೂಗುಯ್ಯಾಲೆಯಲ್ಲಿ ಮಲಗಿದ್ದಾಗ ತಲೆ ಕೆಳಗಾಗಿ ಬಿದ್ದ ಖ್ಯಾತ ಸ್ಟಾರ್ ನಟಿ...!

ಮಿಯಾ ಖಲೀಫಾ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಪ್ರಮುಖವಾದ ಕಾರಣ ನೀಲಿ ನೆರಳು. ಹೀಗಾಗಿಯೇ ಫೋರ್ನ್ ಪ್ರಪಂಚದಿಂದ ದೂರವಾಗಿ ಹೆಚ್ಚು ಕಡಿಮೆ ಒಂಬತ್ತು ವರ್ಷವಾದರೂ ಮಿಯಾ ಖಲೀಫಾ ಕನವರಿಕೆಯಲ್ಲಿಯೇ ಇವತ್ತು ಕೂಡ ಅನೇಕರು ಕಾಲ ಹರಣ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಇವರನ್ನ ಹಿಂಬಾಲಿಸುತ್ತಾ ಮೈ ಮರೆಯುತ್ತಿದ್ದಾರೆ.

ಇಂಥಾ ಮಿಯಾ ಖಲೀಫಾ ಸದ್ಯಕ್ಕೆ ಮುಜುಗರಕ್ಕೀಡಾಗುವಂತ ಪ್ರಸಂಗ ನಡೆದಿದೆ. ಹೌದು, ಅಸಲಿಗೆ ಮಿಯಾ ಖಲೀಫಾ ತಮ್ಮನ್ನು ಇಷ್ಟಪಡುವ ಅಗಣಿತ ಅಭಿಮಾನಿಗಳ ಕಣ್ಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದರು. ಬೆಳ್ಳಿ ಬಿಕಿನಿಯಲ್ಲಿ ಮಿರ ಮಿರ ಮಿಂಚುತ್ತಾ ಕ್ಯಾಮರಾಗೆ ಫೋಸ್ ನೀಡುತ್ತಿದ್ದರು. ಇದೇ ಸಮಯದಲ್ಲಿ ಪಡ್ಡೆಗಳ ಹೃದಯಕ್ಕೆ ಇನ್ನೂ ಕಿಚ್ಚು ಹಚ್ಚಬೇಕೆಂಬ ಉದ್ದೇಶದಿಂದ ಅಲ್ಲಿಯೇ ಇದ್ದ ತೂಗುಯ್ಯಾಲೆಯಲ್ಲಿ ಕುಂತು ಫೋಸ್ ಕೊಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಬ್ಯಾಲೆನ್ಸ್ ತಪ್ಪಿದೆ. ಹ್ಯಾಮಕ್‌ನಲ್ಲಿ ಕುಂತ ಮಿಯಾ ಖಲೀಫಾ ಅವರ ತಲೆ ನೆಲಕ್ಕೆ ಅಪ್ಪಳಿಸಿದೆ.

Mia Khalifa s photoshoot goes wrong as actress falls from hammock photo goes viral

ಸದ್ಯ ಹ್ಯಾಮಕ್‌ನಿಂದ ಮಿಯಾ ಖಲೀಫಾ ಕೆಳಗೆ ಬೀಳುತ್ತಿರುವ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಕೆಲವರು ತಲೆಗೆ ಏನಾದರೂ ಗಂಭೀರವಾದ ಗಾಯ ಆಗಿದೆಯಾ ಹೇಗೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ತಮ್ಮ ಕಾಳಜಿಯನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನೂ ವಿಶೇಷ ಅಂದರೆ ಮಿಯಾ ಖಲೀಫಾ ಬೀಳುತ್ತಿರುವ ಫೋಟೊಗೆ ಏಳು ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ.

ಅಂದ್ಹಾಗೇ ಮಿಯಾ ಖಲೀಫಾ ಪಶ್ಚಿಮ ಏಷ್ಯಾದ ಲೆಬನಾನ್ ಇಸ್ಲಾಮಿಕ್ ದೇಶದವರು. ಇನ್ನೂ ಮೂಲತಃ ಇಸ್ಲಾಂ ಆಗಿದ್ದವರು ಮಿಯಾ ಖಲೀಫಾ, ಆದರೆ ಅವರ ಕುಟುಂಬದವರು ಈ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರು. ಈಕೆಯ ನಿಜವಾದ ಹೆಸರು ಸಾರಾಹ್‌ ಜೋಯ್‌ ಚಾಮೌನ್‌. 1999-2000ರಲ್ಲಿ ಧರ್ಮ ಸಂಘರ್ಷ ತೀವ್ರವಾದಾಗ ತಮ್ಮ ಕುಟುಂಬದೊಡನೆ ಮಿಯಾ ತನ್ನ ಏಳನೇ ವಯಸ್ಸಿಗೆ ಅಮೆರಿಕಗೆ ಹಾರಿದರು.

Mia Khalifa s photoshoot goes wrong as actress falls from hammock photo goes viral

ಸುಂದರ ಬದುಕಿನ ಹುಡುಕಾಟದಲ್ಲಿ ಅಮೆರಿಕಾಗೆ ವಲಸೆ ಹೋದ ಮಿಯಾ ಶಾಲಾ ದಿನದಿಂದಲೇ ತನ್ನ ದೇಹದ ಬಣ್ಣದಿಂದ ನಿಂದನೆಗೆ ಒಳಗಾಗಿದ್ದವರು. ಮಾನಸಿಕ ಹಿಂಸೆಯನ್ನು ಅನುಭವಿಸಿದರು. ಪ್ರೀತಿಸಿ ಮದುವೆಯಾದ ನಂತರ ಗಂಡನಿಂದ ಮೋಸಕ್ಕೊಳಗಾದವರು. ಇನ್ನೂ ನೀನು ಮಾಡೆಲ್ ಆಗಬಹುದೆಂದು ಅನೇಕರು ಹೊಗಳಿದಾಗ, ಅದನ್ನೇ ನಿಜವೆಂದುಕೊಂಡ ಮಿಯಾ ಖಲೀಫಾ ಮಾಡೆಲ್ ಆಗುವ ಭ್ರಮೆಯಲ್ಲಿಯೇ ನೀಲಿ ಪ್ರಪಂಚಕ್ಕೆ ಬಂದರು. 2014ರಲ್ಲಿ ಪೋರ್ನ್ ಪ್ರಪಂಚದಲ್ಲಿ ಸಂಚಲನ ಸೃಷ್ಟಿಸಿದರು. ಇನ್ನುಳಿದಂತೆ ನೀಲಿ ಜಗತ್ತಿಂದ ದೂರವೇ ಇರುವ ಮಿಯಾ ಖಲೀಫಾ 2019ರಲ್ಲಿ ರಾಬರ್ಟ್ ಸ್ಯಾಂಡ್‌ಬರ್ಗ್ ಎಂಬವರೊಂದಿಗೆ ಎರಡನೇ ಮದುವೆಯಾದರು. ಆದರೆ ಕೇವಲ ಒಂದೇ ವರ್ಷದಲ್ಲಿ ಈ ಮದುವೆ ಕೂಡ ಮುರಿದು ಬಿತ್ತು.

ಒಟ್ನಲ್ಲಿ ಸ್ವಾರ್ಥದ ಹಿಂದೆ ಓಡುವ ಆಧುನಿಕ ಸಮಾಜ ತನ್ನ ಲಾಭಕ್ಕಾಗಿ ಯಾರ ಜೀವನವನ್ನು ಬೇಕಾದರೂ, ಬಲಿ‌ಕೊಡಲು ಸದಾ ಸಿದ್ಧವಿರುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ಮಿಯಾ ಖಲೀಫಾ ಸದ್ಯಕ್ಕೆ ಹ್ಯಾಮಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಹೀಗೆ ಮಿಯಾ ಕೆಳಗೆ ಬಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X