ಮೈಕಲ್ ಜಾಕ್ಸನ್ ಬಯೋಪಿಕ್‌ಗೆ ಶೀಘ್ರದಲ್ಲೇ ಮುಹೂರ್ತ: 'ಮೈಕೆಲ್' ಆಗಿ ನಟಿಸೋದು ಯಾರು ಗೊತ್ತಾ?
'ಕಿಂಗ್ ಆಫ್ ಪಾಪ್' ಮೈಕಲ್ ಜಾಕ್ಸನ್ ಬಯೋಪಿಕ್ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರಪಂಚವನ್ನು ತಮ್ಮ ಗಾಯನ ಹಾಗೂ ಡ್ಯಾನ್ಸ್‌ನಿಂದ ಕುಣಿಸಿದ ಮೈಕಲ್ ಜಾಕ್ಸನ್ ಕೊನೆಯುಸಿರೆಳೆದು 14 ವರ್ಷ ಕಳೆಯುತ್ತಾ ಬಂದಿದೆ. ವಿಶ್ವದಾದ್ಯಂತ ಇರುವ ಗಾಯಕರು, ಡ್ಯಾನ್ಸರ್ಸ್, ಪಾಪ್ ಸ್ಟಾರ್ಸ್ ಒಟ್ಟಾರೆ ಮೈಕಲ್ ಜಾಕ್ಸನ್ ಮೀರಿಸುವಂತೆ ಸಾಧಕರು ಇರಬಹುದು. ಆದರೆ ಜಾಕ್ಸನ್‌ನ ಮರೆಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಪಾಪ್ ಸಂಗೀತ, ಬ್ರೇಕ್ ಡ್ಯಾನ್ಸ್ ಕ್ಷೇತ್ರದಲ್ಲಿ ಅದ್ಭುತ ಆವಿಷ್ಕಾರಗಳ ಮೂಲಕ ಸಂಚಲನ ಸೃಷ್ಟಿಸಿದ ಮಹಾನ್ ಸಾಧಕ ಜಾಕ್ಸನ್. ಚಿಕ್ಕಂದಿನಲ್ಲೇ ಬಹಳ ಪ್ರತಿಭಾನ್ವಿತರಾಗಿದ್ದ ಜಾಕ್ಸನ್ ತಮ್ಮ ಹರೆಯದ ವಯಸ್ಸಿಗೆ ಪ್ರಪಂಚವೇ ತಿರುಗಿ ನೋಡುವಂತೆ ಸಾಧಿಸಿ ತೋರಿಸಿದರು. 'ಥ್ರಿಲ್ಲರ್', 'ಡೇಂಜರಸ್', 'ಹಿಸ್ಟರಿ', 'ಇನ್ ವಿನ್ಸಿಬಲ್', 'ಬ್ಲಡ್ ಆನ್ ದ ಡಾನ್ಸ್ ಫ್ಲೋರ್' ಮ್ಯೂಸಿಕ್ ಆಲ್ಬಮ್‌ಗಳ ಮೂಲಕ ಮೋಡಿ ಮಾಡಿದ್ದರು. 50ನೇ ವಯಸ್ಸಿನಲ್ಲಿ (ಜೂನ್ 25, 2009) ಜಾಕ್ಸನ್ ಹೃದಯಾಘಾತದಿಂದ ನಿಧನರಾಗಿದ್ದರು. ಮೈಕಲ್ ಜಾಕ್ಸನ್ ಬಯೋಪಿಕ್ ಸಿನಿಮಾ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇದೆ.
ಬಯೋಪಿಕ್‌ನಲ್ಲಿ ಮೈಕಲ್ ಜಾಕ್ಸನ್ ಪಾತ್ರಕ್ಕೆ ಸಾಕಷ್ಟು ಹುಡುಕಾಟ ನಡೆಸುತ್ತಿತ್ತು ಚಿತ್ರತಂಡ. ಅಂತೂ ಇಂತು ತಂಡಕ್ಕೆ ಜಾಕ್ಸನ್ ಪಾತ್ರ ಮಾಡಬಲ್ಲ ಹುಡುಗ ಸಿಕ್ಕಿದ್ದಾನೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
ಮೈಕಲ್ ಜಾಕ್ಸನ್ ಪಾತ್ರದಲ್ಲಿ ಜಾಫರ್
ಹೌದು ಮೈಕಲ್ ಜಾಕ್ಸನ್ ಬಯೋಪಿಕ್‌ನಲ್ಲಿ ಜಾಕ್ಸನ್ ಪಾತ್ರವನ್ನು ಖುದ್ದು ಅವರ ಸಹೋದರ ಜಾಫರ್ ಜಾಕ್ಸನ್ ಮಾಡ್ತಾರೆ ಎನ್ನಲಾಗ್ತಿದೆ. ಜಾಫರ್ ಜಾಕ್ಸನ್ ಕೂಡ ಚಿಕ್ಕಪ್ಪನ ಹಾದಿಯಲ್ಲಿ ಅಡಿ ಇಟ್ಟಿದ್ದಾನೆ. ಡ್ಯಾನ್ಸ್ ಹಾಗೂ ಸಂಗೀತದ ಮೂಲಕ ಗಮನ ಸೆಳೆದಿದ್ದಾನೆ. ಇದೇ ಕಾರಣಕ್ಕೆ ಮೈಕ್ಲ ಜಾಕ್ಸನ್ ಪಾತ್ರಕ್ಕೆ ಜಾಫರ್‌ನ ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಜಾಕ್ಸನ್ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರವನ್ನು ಎಳೆ ಎಳೆಯಾಗಿ ತೆರೆದಿಡುವ ಪ್ರಯತ್ನ ನಡೀತಿದೆ.

'ಜಾಕ್ಸನ್' ಟೈಟಲ್‌ನಲ್ಲಿ ಸಿನಿಮಾ
ಮೈಕಲ್ ಜಾಕ್ಸನ್ ಬಯೋಪಿಕ್‌ಗೆ 'ಜಾಕ್ಸನ್' ಎನ್ನುವ ಟೈಟಲ್ ಫೈನಲ್ ಆಗಿದೆ. ಆಂಟೋನಿಯಾ ಫ್ಲುಕೊ ಆಕ್ಷನ್ ಕಟ್ ಹೇಳಲಿದ್ದಾರೆ. 3 ಆಸ್ಕರ್ ಪ್ರಶಸ್ತಿ ಗೆದ್ದಿರುವ ಜಾನ್ ಲೋಗನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಲಿದ್ದಾರೆ. ಜಾಫರ್ ನಿಜಕ್ಕೂ ನಮ್ಮ ತಂದೆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾನೆ ಎಂದು ಮೈಕಲ್ ಜಾಕ್ಸನ್ ಪುತ್ರ ಪ್ರಿನ್ಸ್ ಹೇಳಿದ್ದಾರೆ. ಜಾಕ್ಸನ್ ಬಯೋಪಿಕ್ ನಿರ್ಮಾಣ ಮಾಡುವುದಾಗಿ ಲಯನ್ಸ್ ಗೇಟ್ಸ್ ಸಂಸ್ಥೆ ಘೋಷಿಸಿತ್ತು. ಆಸ್ಕರ್ ಪ್ರಶಸ್ತಿ ವಿಜೇತ ಗ್ರಾಮ್ ಕಿಂಗ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಮೈಕಲ್ ಜಾಕ್ಸನ್ ರೀತಿ ಜಾಫರ್ ಡ್ಯಾನ್ಸ್ ಮಾಡುತ್ತಿರುವ ಫೋಟೊವನ್ನು ನಿರ್ಮಾಪಕರು ಶೇರ್ ಮಾಡಿದ್ದಾರೆ.

ಡಾಕ್ಯುಮೆಂಟರಿ ವಿರುದ್ಧ ಆರೋಪ
'ಲೀವಿಂಗ್ ನೆವರ್‌ಲ್ಯಾಂಡ್' ಹೆಸರಿನಲ್ಲಿ ಹಿಂದೆ ಮೈಕಲ್ ಜಾಕ್ಸನ್ ಕುರಿತು ಡಾಕ್ಯುಮೆಂಟರಿ ಕೂಡ ಬಂದಿತ್ತು. ಆದರೆ ಈ ಡಾಕ್ಯುಮೆಂಟರಿಯಲ್ಲಿ ಸತ್ಯಕ್ಕೆ ದೂರವಾದ ವಿಚಾರಗಳನ್ನು ತೋರಿಸಿದ್ದಾರೆ ಎಂದು ಸ್ವತಃ ಅವರ ಕುಟುಂಬ ಸದಸ್ಯರು ಆರೋಪಿಸಿದ್ದರು. ಮಕ್ಕಳ ಜೊತೆ ಜಾಕ್ಸನ್ ಎಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಹೇಳಿದ್ದರು. ಇದೀಗ ಜಾಕ್ಸನ್ ಬಯೋಪಿಕ್ ಬರ್ತಿದೆ. ಅವರ ಸಹೋದರನ ಮಗನೇ ನಟಿಸುತ್ತಿದ್ದಾನೆ. ಈ ಸಿನಿಮಾದಲ್ಲಿ ಜಾಕ್ಸನ್ ಜೀವನದ ಎಲ್ಲಾ ಅಂಶಗಳು ಇರುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.


Click it and Unblock the Notifications











