»   » ಖ್ಯಾತ ತಾರೆಗೆ ರೂಪದರ್ಶಿಯ ಒಳ ಉಡುಪು ಗಿಫ್ಟ್

ಖ್ಯಾತ ತಾರೆಗೆ ರೂಪದರ್ಶಿಯ ಒಳ ಉಡುಪು ಗಿಫ್ಟ್

By: ರವಿಕಿಶೋರ್
Subscribe to Filmibeat Kannada
Miranda gifts lingerie
ಈ ರೀತಿಯಲ್ಲೂ ಗಿಫ್ಟ್ ಕೊಡಬಹುದು ಎಂಬುದನ್ನು ತೋರಿಸಿದ್ದಾರೆ ಖ್ಯಾತ ರೂಪದರ್ಶಿ ಮಿರಾಂಡಾ ಕೇರ್‍. ಅವರು ತಮ್ಮ ಒಳ ಉಡುಪುಗಳನ್ನು ಹಾಲಿವುಡ್ ನ ಖ್ಯಾತ ತಾರೆ ಜೆನ್ನಿಫರ್ ಅನಿಸ್ಟನ್ ಅವರಿಗೆ ಕೊಟ್ಟಿದ್ದಾರೆ. ಇನ್ನೇನು ಮದುವೆಗೆ ಅಣಿಯಾಗುತ್ತಿರುವ ಜೆನ್ನಿಫರ್ ಗೆ ವೆಡ್ಡಿಂಗ್ ಗಿಫ್ಟ್ ಇದು.

ಮಿರಾಂಡಾ ಕೊಟ್ಟಿರುವುದು ವಿಕ್ಟೋರಿಯಾಸ್ ಸೀಕ್ರೆಟ್ ಎಂಬ ಬೆಲೆಬಾಳುವ ಬ್ರ್ಯಾಂಡ್ ನ ಒಳ ಉಡುಪುಗಳನ್ನು. ಜೆನ್ನಿಫರ್ ಈಗಾಗಲೆ ಜಸ್ಟಿನ್ ಥೆರೋಕ್ಸ್ ಎಂಬ ನಟನ ಜೊತೆ ಎಂಗೇಜ್ ಆಗಿದ್ದಾರೆ. ಶೀಘ್ರದಲ್ಲೇ ನೂತನ ದಾಂಪತ್ಯಕ್ಕೆ ಅಡಿಯಿಡುತ್ತಿದ್ದಾರೆ.

ಇನ್ನು ಮಿರಾಂಡಾ ಕೇರ್‍ ವಿಚಾರಕ್ಕೆ ಬಂದರೆ ಆಕೆಗೆ ಎರಡು ವರ್ಷದ ಮಗನಿದ್ದಾನೆ. ಈಗ ಆಕೆ ತನ್ನದೇ ಬ್ರ್ಯಾಂಡ್ ಪ್ರಾರಂಭಿಸುತ್ತಿದ್ದಾರೆ. ಆ ಹೊಸ ಬ್ರ್ಯಾಂಡ್ ನ ಒಳ ಉಡುಪುಗಳನ್ನೇ ಈಗ ಅನಿಸ್ಟನ್ ಅವರಿಗೆ ಉಡುಗೊರೆಯಾಗಿ ಕೊಟ್ಟಿರುವುದು ಎನ್ನುತ್ತವೆ ಮೂಲಗಳು.

ಶ್ವೇತ ವರ್ಣದ ಹಾಗೂ ಸೆಕ್ಸಿಯಾಗಿರುವ ಒಳ ಉಡುಪುಗಳನ್ನು ಕೈಯಲ್ಲೇ ಹೆಣೆಯಲಾಗಿದೆ ಬಹಳ ನಯವಾಗಿ, ನಾಜೂಕಾಗಿ ಇವೆ ಎಂದು contactmusic.com ಎಂಬ ಜಾಲತಾಣ ವಿವರಗಳನ್ನು ಪ್ರಕಟಿಸಿದೆ. ಮದುವೆಯ ಮೊದಲ ರಾತ್ರಿಗೆ ಆ ಒಳ ಉಡುಪುಗಳನ್ನು ಅನಿಸ್ಟನ್ ಬಳಸುತ್ತಾರೆ ಎಂಬ ಥ್ರಿಲ್ಲಿಂಗ್ ಸುದ್ದಿ ಹಾಲಿವುಡ್ ನಲ್ಲಿ ಹರಿದಾಡುತ್ತಿದೆ.

English summary
Supermodel Miranda Kerr, who used to model for luxury lingerie brand Victoria's Secret, has gifted custom-made innerwear to actress Jennifer Aniston ahead of her wedding. The Friends star is engaged to Justin Theroux. The couple is expected to walk the isle very soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada