For Quick Alerts
  ALLOW NOTIFICATIONS  
  For Daily Alerts

  ಮತ್ತೆ ನಿಂತ 'ಮಿಷನ್ ಇಂಪಾಸಿಬಲ್ 7' ಚಿತ್ರೀಕರಣ

  |

  ಟಾಮ್ ಕ್ರೂಸ್ ನಟಿಸಿ ಕ್ರಿಸ್ಟೋಫರ್ ಮೆಕ್ವೈರಿ ನಿರ್ದೇಶಿಸುತ್ತಿರುವ 'ಮಿಷನ್ ಇಂಪಾಸಿಬಲ್ 7' ಸಿನಿಮಾದ ಚಿತ್ರೀಕರಣ ಮತ್ತೆ ನಿಂತಿದೆ.

  ಕೊರೊನಾ ಕಾರಣಕ್ಕೆ ಈ ಮೊದಲು ಸಿನಿಮಾದ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಬಯೋ ಬಬಲ್‌ನಲ್ಲಿ ಚಿತ್ರೀಕರಣ ಮುಂದುವರೆಸಲಾಗಿತ್ತು. ಕೊರೊನಾ ಸುಳಿಯದಂತೆ ವಿಶ್ವದರ್ಜೆಯ ಎಚ್ಚರಿಕೆಗಳನ್ನು ವಹಿಸಲಾಗಿತ್ತು. ಆದರೂ ಸೆಟ್‌ನಲ್ಲಿರುವ ಕೆಲವರಿಗೆ ಕೊರೊನಾ ಬಂದ ಕಾರಣ ಚಿತ್ರೀಕರಣವನ್ನು ಮತ್ತೆ ಬಂದ್ ಮಾಡಲಾಗಿದೆ.

  'ಕೊರೊನಾ ಪರೀಕ್ಷೆ ಮಾಡಿದಾಗ ಚಿತ್ರತಂಡದ ಕೆಲವರಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಜೂನ್‌ 14 ರಂದು ಮತ್ತೊಮ್ಮೆ ಪರೀಕ್ಷೆ ಮಾಡಿ ನಂತರ ಚಿತ್ರೀಕರಣ ಪ್ರಾರಂಭ ಮಾಡಲಾಗುತ್ತದೆ' ಎಂದು ಚಿತ್ರತಂಡ ಹೇಳಿದೆ.

  ಈ ಹಿಂದೆ ಒಮ್ಮೆ ಚಿತ್ರತಂಡದಲ್ಲಿ ಕೆಲವರು ಕೊರೊನಾ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಟಾಮ್ ಕ್ರೂಸ್, ಚಿತ್ರತಂಡದವರ ಮೇಲೆ ಸಿಟ್ಟಾಗಿ ಮಾತನಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಕೊರೊನಾ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಟಾಮ್ ಕ್ರೂಸ್ ಬಹಳ ಶಿಸ್ತಾಗಿದ್ದು, ಈಗ ಚಿತ್ರೀಕರಣ ಸ್ಥಗಿತಗೊಳಿಸುವದರ ಹಿಂದೆ ಅವರದ್ದೇ ಒತ್ತಡವಿದೆ ಎನ್ನಲಾಗುತ್ತಿದೆ.

  'ಮಿಷನ್ ಇಂಪಾಸಿಬಲ್ 7' ಸಿನಿಮಾವು ಹಲವು ಕಾರಣಕ್ಕೆ ವಿಶೇಷವಾಗಿದೆ. ಈ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜಿಸಿದೆ.

  ಕೊಟ್ಟ ಮಾತನ್ನು ಎರಡೇ ದಿನದಲ್ಲಿ ಉಳಿಸಿಕೊಂಡ ಯಶ್ | Filmibeat Kannada

  ಇದೇ ಸಿನಿಮಾದಲ್ಲಿ ನಟ ಪ್ರಭಾಸ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನಿರ್ದೇಶಕ ಕ್ರಿಸ್ಟೋಫರ್ ಮೆಕ್ವೈರಿ ಗಾಳಿ ಸುದ್ದಿಯನ್ನು ತಳ್ಳಿ ಹಾಕಿದರು. ಮಿಷನ್ ಇಂಪಾಸಿಬಲ್ ಸಿನಿಮಾವು 2022 ರಲ್ಲಿ ಬಿಡುಗಡೆ ಆಗಲಿದೆ.

  English summary
  Mission Impossible 7 movie shooting stopped due to some of the crew tested positive for COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X