For Quick Alerts
  ALLOW NOTIFICATIONS  
  For Daily Alerts

  ಇನ್ನೊಂದು 'ಮಿಷನ್' ಸಿದ್ಧವಾಗುತ್ತಿದೆ ನೀವು ರೆಡಿಯಾಗಿ

  By ರವಿಕಿಶೋರ್
  |

  ಇದ್ಯಾವ ಮಿಷನ್ ಗುರು. ಏನ್ ಹೇಳ್ತಾ ಇದ್ದೀರಾ ಸ್ವಾಮಿ ನೀವು! ಸ್ವಲ್ಪ ತಡಕೊಳ್ಳಿ ಸ್ವಾಮಿ. ನಾವು ಮಾತನಾಡುತ್ತಿರುವುದು ಹಾಲಿವುಡ್ ಚಿತ್ರ 'ಮಿಷನ್ ಇಂಪಾಸಿಬಲ್' ಬಗ್ಗೆ. ಇದೇ ಸರಣಿಯಲ್ಲಿ ಈಗ ಭಾಗ 5 ಸಿದ್ಧವಾಗುತ್ತಿದೆ ಎಂದಿದ್ದಾರೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್.

  ಸದ್ಯಕ್ಕೆ ಕಥೆಯನ್ನು ಹೆಣೆಯುತ್ತಿದ್ದೇನೆ ಎಂದಷ್ಟೇ ಹೇಳಿದ್ದಾರೆ ಟಾಮ್ ಕ್ರೂಸ್. ಉಳಿದಂತೆ ಚಿತ್ರದ ಬಗ್ಗೆ ಅವರು ಇನ್ಯಾವ ವಿವರಗಳನ್ನು ನೀಡಿಲ್ಲ. ಮಿಷನ್ ಇಂಪಾಸಿಬಲ್ ಚಿತ್ರವನ್ನು ಆರಂಭಿಸಿದಾಗ ನಾನು ಇದೇ ರೀತಿಯ ಬಹಳಷ್ಟು ಚಿತ್ರಗಳನ್ನು ಮಾಡುತ್ತೀನಿ ಎಂದುಕೊಂಡಿದ್ದೆ. ಅದು ನಿಜವೂ ಆಯಿತು.

  ಪ್ಯಾರಾಮೌಂಟ್ ಪಿಕ್ಚರ್ಸ್ ನಿರ್ಮಿಸಿದ ಭಾರಿ ಬಜೆಟ್ ಚಿತ್ರ ಅದಾಗಿತ್ತು. ಈ ಸರಣಿಯ ಮೊದಲ ಚಿತ್ರ ಬಿಡುಗಡೆಯಾಗಿದ್ದು 1996ರಲ್ಲಿ. ಇದೊಂದು ಪತ್ತೆದಾರಿ ಸಿನಿಮಾ ಆಗಿದ್ದು ಬಳಿಕ ಭಾಗ 2, 3 ಹಾಗೂ ಗೋಸ್ಟ್ ಪ್ರೋಟೋಕಾಲ್ ಚಿತ್ರಗಳು ಬಂದವು.

  ಟಾಮ್ ಕ್ರೂಸ್ ಮುಖ್ಯಭೂಮಿಕೆಯಲ್ಲಿರುವ ಈ ಸರಣಿ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿವೆ. ವಿಶ್ವದಾದ್ಯಂತ ಈ ಚಿತ್ರಗಳು 2 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಬಾರಿಯೂ ಪ್ಯಾರಾಮೌಂಟ್ ಪಿಕ್ಚರ್ಸ್ ಬಂಡವಾಳ ಹೂಡಲಿದೆ.

  ಈ ಬಾರಿಯ ಮಿಷನ್ ಇಂಪಾಸಿಬಲ್ 5 ಚಿತ್ರಕ್ಕೆ ಮ್ಯಾಕ್ ಕ್ವೆರಿ ಆಕ್ಷನ್ ಕಟ್ ಹೇಳಲಿದ್ದಾರೆ. ಒಟ್ಟಿನಲ್ಲಿ ಹಾಲಿವುಡ್ ಆಕ್ಷನ್ ಚಿತ್ರಗಳನ್ನು ಇಷ್ಟಪಡುವವರಿಗೆ 'ಮಿಷನ್ ಇಂಪಾಸಿಬಲ್' ನಂತಹ ಚಿತ್ರಗಳು ಎಳ್ಳಷ್ಟು ನಿರಾಸೆ ಮೂಡಿಸಲ್ಲ. ಅವರ ನಿರೀಕ್ಷೆಗೆ ತಕ್ಕಂತೆ ಇರುತ್ತವೆ ಎಂಬುದು ಪದೇ ಪದೇ ಸಾಬೀತಾಗಿದೆ.

  English summary
  Hollywood superstar Tom Cruise has revealed that a fifth 'Mission: Impossible' film is in the works. Cruise confirmed the planned sequel during an appearance on The Graham Norton show, reported Digital Spy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X