ಮೈನವಿರೇಳಿಸುವ ಸಾಹಸ: ಆಕಾಶ-ಭೂಮಿಯ ನಡುವೆ ಅದ್ಭುತ ಸೃಷ್ಟಿಸಲಿರುವ ಟಾಮ್ ಕ್ರೂಸ್

ಭಯವೇ ಅರಿಯದ ನಟ ಟಾಮ್ ಕ್ರೂಸ್. 'ಮಿಷನ್ ಇಂಪಾಸಿಬಲ್' ಸಿನಿಮಾ ಸರಣಿ ಮೂಲಕ ರೋಚಕ ಸ್ಪೈ ಥ್ರಿಲ್ಲರ್ ಕತೆಗಳನ್ನು ಕೊಡುತ್ತಾ ಬಂದಿರುವ ಟಾಮ್ ಕ್ರೂಸ್, ಇದೀಗ ಮತ್ತೊಂದು ಮೈನವಿರೇಳಿಸುವ ಸಾಹಸ ಮಾಡಿ ಮುಗಿಸಿದ್ದಾರೆ.

'ಮಿಷನ್ ಇಂಪಾಸಿಬಲ್: ಡೆಡ್ ರೆಕನಿಂಗ್' ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನು ಕಳೆದ ಕೆಲ ವರ್ಷಗಳಿಂದಲೂ ಮಾಡುತ್ತಿರುವ ಟಾಮ್ ಕ್ರೂಸ್, ಇತ್ತೀಚೆಗೆ ತಾವು ಮಾಡಿರುವ ಅದ್ಭುತ ಸಾಹಸ ದೃಶ್ಯದ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.

ವಿಮಾನ ಮೇಲೆ ಹಾರಿರುವುದು, ಮಿಲಿಟರಿ ವಿಮಾನದ ಹೊರಗೆ ನಿಂತು ಆಕಾಶಕ್ಕೆ ಹಾರಿರುವ ಸಾಹಸಗಳನ್ನೆಲ್ಲ ಮಾಡಿರುವ ಟಾಮ್ ಕ್ರೂಸ್ ಈಗ ಮತ್ತೊಂದು ಅತ್ಯಂತ ಅಪಾಯಕಾರಿ ಸಾಹಸವನ್ನು ಮಾಡಿ ಮುಗಿಸಿದ್ದಾರೆ. ಅದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮೇಕಿಂಗ್ ವಿಡಿಯೋ, ಅದ್ಭುತ ಆಕ್ಷನ್ ಸಿನಿಮಾ ನೋಡಿದ ಅನುಭವ ನೀಡುತ್ತಿದೆ.

ಬಹಳ ಎತ್ತರದ ಬೆಟ್ಟದಿಂದ ಬೈಕ್ ಓಡಿಸಿಕೊಂಡು ಬೆಟ್ಟದ ತುದಿಯಿಂದ ಸಾವಿರಾರು ಅಡಿಗಳ ಪ್ರಪಾತಕ್ಕೆ ಜಿಗಿದಿದ್ದಾರೆ ಟಾಮ್ ಕ್ರೂಸ್ ಇದಕ್ಕಾಗಿ ಅವರು ಮಾಡಿಕೊಂಡಿರುವ ತಯಾರಿ, ಪ್ರಯೋಗಗಳು, ಸಿದ್ಧತೆ, ಭದ್ರತೆ ಅಚ್ಚರಿ ಮೂಡಿಸುತ್ತದೆ.

ದಿನಕ್ಕೆ 30 ಬಾರಿ ವಿಮಾನಿಂದ ಜಿಗಿಯುತ್ತಿದ್ದ ಟಾಮ್ ಕ್ರೂಸ್!

ದಿನಕ್ಕೆ 30 ಬಾರಿ ವಿಮಾನಿಂದ ಜಿಗಿಯುತ್ತಿದ್ದ ಟಾಮ್ ಕ್ರೂಸ್!

ಶೂಟ್ ಮಾಡುವುದಕ್ಕೂ ಮುನ್ನ ತರಬೇತಿಗೆಂದು ಹಲವು ದಿನಗಳನ್ನು ಟಾಮ್ ಕ್ರೂಸ್ ವ್ಯಯಿಸಿದ್ದಾರೆ. ಮೊದಲಿಗೆ ವಿಮಾನದಿಂದ ಹಲವು ಬಾರಿ ಡೈವಿಂಗ್ ಮಾಡಿ ಅಭ್ಯಾಸ ಮಾಡಿದ್ದಾರೆ. ಡೈವಿಂಗ್, ಟಾಮ್ ಕ್ರೂಸ್‌ಗೆ ಮೊದಲಿನಿಂದಲೂ ಅಭ್ಯಾಸವೇ ಆದರೂ, ಕ್ಯಾಮೆರಾ ಪ್ಲೇಸ್‌ಮೆಂಟ್‌ಗೆ ಅನುಗುಣವಾಗಿ ಆಕಾಶದಿಂದ ಡೈವ್ ಮಾಡಲೆಂದು ಸತತ ಅಭ್ಯಾಸ ಮಾಡಿದ್ದಾರೆ. ಒಂದು ದಿನಕ್ಕೆ ಸುಮಾರು 30 ಬಾರಿ ಆಕಾಶದಿಂದ ಕೆಳಕ್ಕೆ ನೆಗೆಯುತ್ತಿದ್ದರಂತೆ ಟಾಮ್. ಎಲ್ಲ ರೀತಿಯ ಪರಿಸ್ಥಿತಿಗಳಿಗೂ ತಯಾರಾಗುವುದು ಅವರ ಉದ್ದೇಶ.

ಬೈಕ್ ಹಾರಿಸಿದ ಟಾಮ್ ಕ್ರೂಸ್

ಬೈಕ್ ಹಾರಿಸಿದ ಟಾಮ್ ಕ್ರೂಸ್

ಅದರ ಬಳಿಕ ಡರ್ಟ್‌ ಬೈಕ್ ಅನ್ನು ಹಾರಿಸುವ ತಯಾರಿ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಟ್ರ್ಯಾಕ್‌ಗಳನ್ನು ನಿರ್ಮಿಸಿ ತರಬೇತಿ ಪಡೆದುಕೊಂಡಿದ್ದಾರೆ. ಮೊದಲಿಗೆ ಬೈಕ್‌ನಲ್ಲಿ ಕೃತಕ ಗುಡ್ಡಗಳನ್ನು ಹಾರಿಸಿ ಅದು ಕರಗತವಾದ ಬಳಿಕ ಬೈಕ್‌ಗೆ ಕ್ಯಾಮೆರಾ ಫಿಕ್ಸ್‌ ಮಾಡಿ ಹಾರಿಸಿದ್ದಾರೆ. ಟಾಮ್ ಅದರಲ್ಲಿ ಅದೆಷ್ಟು ನಿಪುಣರಾದರೆಂದರೆ, ಒಂದೇ ಒಂದು ಟ್ರ್ಯಾಕ್ ಅನ್ನು ಸಹ ಬಿಡದೆ ಅಂತರಾಷ್ಟ್ರೀಯ ಗುಣಮಟ್ಟದ ಬೈಕ್ ರೇಸರ್‌ನಂತೆ ಲ್ಯಾಪ್ ಮುಗಿಸಿದರಂತೆ.

ಏಳು ಬಾರಿ ಬೆಟ್ಟದಿಂದ ಕೆಳಗೆ ಹಾರಿದ ಟಾಮ್ ಕ್ರೂಸ್!

ಏಳು ಬಾರಿ ಬೆಟ್ಟದಿಂದ ಕೆಳಗೆ ಹಾರಿದ ಟಾಮ್ ಕ್ರೂಸ್!

ಆ ನಂತರವೇ ಆರಂಭವಾಗಿದ್ದು ನಿಜವಾದ ಸಾಹಸ. ಎತ್ತರದ ಬೆಟ್ಟದ ಮೇಲೆ ಬೈಕ್ ಟ್ರ್ಯಾಕ್ ಒಂದನ್ನು ನಿರ್ಮಿಸಲಾಗಿದೆ. ಅಲ್ಲಿ ಬೈಕ್ ಟ್ರ್ಯಾಕ್ ನಿರ್ಮಿಸಲು ವಸ್ತುಗಳನ್ನು ಸಹ ಹೆಲಿಕಾಪ್ಟರ್‌ನಲ್ಲಿಯೇ ತರಬೇಕಿತ್ತಂತೆ. ಬಳಿಕ ಆ ಟ್ರ್ಯಾಕ್‌ ಮೇಲೆ ಬೈಕ್ ಚಲಾಯಿಸಿದ ಟಾಮ್ ಕ್ರೂಸ್ ಬೆಟ್ಟದ ತುದಿಯಿಂದ ಆಳ ಪ್ರಪಾತಕ್ಕೆ ಹಾರಿದ್ದಾರೆ. ಆದರೆ ಒಂದು ಶಾಟ್‌ಗೆ ಟಾಮ್‌ಗೆ ತೃಪ್ತಿಯಾಗಿಲ್ಲ ಸತತ ಏಳು ಬಾರಿ ಆ ಬೆಟ್ಟದ ಮೇಲಿನಿಂದ ಪ್ರಪಾತಕ್ಕೆ ಹಾರಿ ಫರ್ಪೆಕ್ಟ್ ಎನ್ನುವ ಶಾಟ್‌ ಅನ್ನು ಟಾಮ್ ಕ್ರೂಸ್ ನೀಡಿದ್ದಾರೆ.

ಸಿನಿಮಾ ಬಿಡುಗಡೆ ಯಾವಾಗ?

ಸಿನಿಮಾ ಬಿಡುಗಡೆ ಯಾವಾಗ?

ಟಾಮ್ ಕ್ರೂಸ್‌ರ ಅದ್ಭುತ ಸಾಹಸ ಈ ವಿಡಿಯೋವನ್ನು ಪ್ಯಾರಾಮೌಂಟ್ ಪಿಕ್ಚರ್ಸ್ ಹಂಚಿಕೊಂಡಿದ್ದು, ಕೇವಲ ಹದಿನಾರು ಗಂಟೆಯಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 'ಮಿಷನ್ ಇಂಪಾಸಿಬಲ್; ಡೆಡ್ ರೆಕನಿಂಗ್' ಸಿನಿಮಾವು 2023 ರ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ತೆರೆಗೆ ಬರಲಿದೆ. 'ಮಿಷನ್ ಇಂಪಾಸಿಬಲ್' ಸರಣಿಯ ಏಳನೇ ಸಿನಿಮಾ ಇದಾಗಿದೆ. ಈ ಸಿನಿಮಾದ ಬಳಿಕ ಇದರದ್ದೇ ಪಾರ್ಟ್ 2 ತೆರೆಗೆ ಬರಲಿದೆ. 2024 ರ ಜೂನ್ ತಿಂಗಳಲ್ಲಿ ಆ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Mission Impossible dead reckoning: Hero Tom Cruise did insane stunt for the movie. Making video of the stunt released on YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X