Mission Impossible The Final Reckoning ; ಹೇಗಿದೆ ಟಾಮ್ ಕ್ರೂಸ್ ಕೊನೆಯ ಆಕ್ಷನ್ ಸರಣಿ, ಪ್ರೇಕ್ಷಕರು ಹೇಳಿದ್ದೇನು ?
ಭಯ ಅಂದರೇನು ಎಂದು ಅರಿಯದವರಲ್ಲಿ ಟಾಮ್ ಕ್ರೂಸ್ ಕೂಡ ಒಬ್ಬರು. ಹಿಂದೆ ಮುಂದೆ ಆಲೋಚನೆ ಮಾಡದೇ ಎಲ್ಲಿಂದ ಬೇಕಾದರೂ ಎಗರಬಲ್ಲ ಟಾಮ್ ಕ್ರೂಸ್, ಜಾಕಿ ಚಾನ್ ಹೊರತುಪಡಿಸಿದರೆ ಅತ್ಯಂತ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುವ ಸ್ಟಾರ್ ಕೂಡ ಹೌದು. ಇಂಥಾ ಟಾಮ್ ಕ್ರೂಸ್ ಅಭಿನಯದ ಮಿಷನ್
ಇಂಪಾಸಿಬಲ್ ನ 08ನೇ ಭಾಗ ಇಂದು ಭಾರತದೆಲ್ಲೆಡೆ ಬಿಡುಗಡೆಯಾಗಿದೆ.
ಇದು ಕೊನೆಯ ಭಾಗವಾದ ಕಾರಣ ಟಾಮ್ ಕ್ರೂಸ್ ಅಭಿಮಾನಿಗಳಲ್ಲಿ ನಿರಾಸೆ ಮನೆ ಮಾಡಿದೆ. ಇನ್ನೆಂದು ಮತ್ತೆ ಟಾಮ್ ಕ್ರೂಸ್ ಅವರನ್ನು ಎಥಾನ್ ಪಾತ್ರದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಟಾಮ್ ಕ್ರೂಸ್ ಅಭಿಮಾನಿ ಬಳಗ ಬೇಸರ ಮಾಡಿಕೊಂಡಿದೆ.

ಬೇಸರದಲ್ಲಿಯೇ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಅಭಿಮಾನಿಗಳ ದಂಡು ತೆರಳುತ್ತಿದೆ. ಹಾಗಿದ್ದರೆ ಮಿಷನ್ ಇಂಪಾಸಿಬಲ್- ಫೈನಲ್ ರೆಕನಿಂಗ್ ಹೇಗಿದೆ ? ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡಿದ ಚಿತ್ರ ರಸಿಕರು ಚಿತ್ರದ ಕುರಿತು, ಟಾಮ್ ಕ್ರೂಸ್ ಸಾಹಸಗಾಥೆಯ ಕುರಿತು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಹುಸಿಯಾದ ನಿರೀಕ್ಷೆ
ಮಿಷನ್ ಇಂಪಾಸಿಬಲ್‌ನ ಈ ಕೊನೆಯ ಭಾಗದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಕಡಿಮೆ ಇವೆ. ನಿರೂಪಣೆ ಉತ್ತಮವಾಗಿದ್ದು ಇರುವ ಸಾಹಸ ಸನ್ನಿವೇಶಗಳು ಮೈ ನವಿರೇಳಿಸುವಂತೆ ಇವೆ. ಚಿತ್ರದಲ್ಲಿ ಎಷ್ಟು ಪಾಸಿಟಿವ್ ಅಂಶಗಳಿವೆಯೋ ಅಷ್ಟೇ ನೆಗೆಟಿವ್ ಅಂಶಗಳು ಕೂಡ ಇವೆ.
ಟಾಮ್ ಕ್ರೂಸ್ ಶ್ರಮ ಮೆಚ್ಚುವಂತಹದ್ದು
ಮಿಷನ್ ಇಂಪಾಸಿಬಲ್ ಸರಣಿ ನಿಜಕ್ಕೂ ಅಂತ್ಯಗೊಂಡರೆ ಈ ಅಂತ್ಯ ತೃಪ್ತಿದಾಯಕವಾಗಿದೆ. 30 ವರ್ಷದ ಹಿಂದೆ ಹೇಗೆ ಟಾಮ್ ಕ್ರೂಸ್ ಓಡುತ್ತಿದ್ದರೋ ಅದೇ ರೀತಿ ಇಲ್ಲಿಯೂ ಕೂಡ ಓಡಿದ್ದಾರೆ. ಅದ್ಭುತವಾದ ಸಾಹಸ ಸನ್ನಿವೇಶಗಳು ಚಿತ್ರದಲ್ಲಿವೆ. ಆದರೆ ನೋಡುವಾಗ ತಾಳ್ಮೆಯಿಂದ ಇರಬೇಕು. ಚಿತ್ರದ ಕಥಾವಸ್ತು ನಿಮಗೆ ಇಷ್ಟವಾಗುತ್ತಾ ಇಲ್ಲವಾ ಎನ್ನುವುದು ನಿಮಗೆ ಬಿಟ್ಟಿದ್ದಾದರೂ ಟಾಮ್ ಕ್ರೂಸ್ ಈ ಫ್ರಾಂಚೈಸಿಗಾಗಿ ಪಟ್ಟಿರುವ ಕಷ್ಟವನ್ನು ನಾವು ಮೆಚ್ಚಲೇಬೇಕು.
ಹೃದಯ ಸ್ಫರ್ಶಿ ವಿದಾಯ
ಮಿಷನ್ ಇಂಪಾಸಿಬಲ್ ದಿ ಫೈನಲ್ ರೆಕನಿಂಗ್ ಒಂದು ಸುಂದರವಾದ ಅನುಭವ. ಎಥಾನ್ ಹಂಟ್‌ನ ಈ ಪ್ರಯಾಣವನ್ನು ಆನಂದಿಸಿ, ಹಳೆಯ ನೆನಪುಗಳನ್ನು ಮತ್ತೆ ತಾಜಾ ಮಾಡುವಂತಹ ಸುಂದರವಾದ ಚಿತ್ರ ಇದು. ಹೃದಯ ಸ್ಫರ್ಶಿ ವಿದಾಯ.
ರೋಮಾಂಚಕ ಅನುಭವ
ನಿನ್ನೆಯಷ್ಟೇ ವಿಶೇಷವಾದ ಪ್ರದರ್ಶನದಲ್ಲಿ ಮಿಷನ್ ಇಂಪಾಸಿಬಲ್ ದಿ ಫೈನಲ್ ರೆಕನಿಂಗ್ ಚಿತ್ರವನ್ನು ನೋಡಿದೆ. ಟಾಮ್ ಕ್ರೂಸ್ ಅವರ ಬಗ್ಗೆ ದೂಸ್ರಾ ಮಾತನಾಡುವಂತೆ ಇಲ್ಲ. ಚಿತ್ರ ನೋಡುವ ನಿಮ್ಮ ಉತ್ಸಾಹವನ್ನು ಕಥೆಯ ಗುಟ್ಟು ಬಿಟ್ಟು ಕಡಿಮೆ ಮಾಡುವುದಿಲ್ಲ. ಚಿತ್ರಮಂದಿರದಲ್ಲಿ ನೋಡಿ. ಇದೊಂದು ರೋಮಾಂಚಕ ಅನುಭವ
ಹಾರ್ಡ್‌ಕೋರ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ ಇದು
ಈ ಸರಣಿಯ ಹಾರ್ಡ್ ಕೋರ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ ಇದು. ಟಾಮ್ ಕ್ರೂಸ್ ಮತ್ತು ಅವರ ತಂಡ ಸಾಹಸ ದೃಶ್ಯಗಳಿಗೆ ಮರು ವ್ಯಾಖ್ಯಾನವನ್ನು ಈ ಚಿತ್ರದಲ್ಲಿ ನೀಡಿದೆ. ಅದ್ಭುತ ಅಭಿನಯ, ಅದ್ಭುತ ನಿರ್ದೇಶನ ಚಿತ್ರದಲ್ಲಿ ಹಲವು ಹೃದಯ ಸ್ಫರ್ಶಿ ಕ್ಷಣಗಳಿವೆ. ಐ ಮ್ಯಾಕ್ಸ್‌ನನಲ್ಲಿ ಈ ಚಿತ್ರವನ್ನು ನೋಡುವ ಅನುಭವವೇ ಬೇರೆ. ನಾನೂ ಊಹಿಸಿದ್ದಕ್ಕಿಂತಲೂ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಹೀಗೆ ಹಲವಾರು ಜನ ಮಿಷನ್ ಇಂಪಾಸಿಬಲ್‌ನ ಕೊನೆಯ ಭಾಗದ ಕುರಿತು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ. ಟಾಮ್ ಕ್ರೂಸ್ ಅವರ ಶ್ರಮವನ್ನು ಕೊಂಡಾಡಿದ್ಧಾರೆ. ಸಾಹಸ ಸನ್ನಿವೇಶಗಳಿಗೆ ಮನ ಸೋತಿದ್ದಾರೆ. ಟಾಮ್ ಕ್ರೂಸ್ ಅವರಿಗೋಸ್ಕರವಾದರೂ ಈ ಚಿತ್ರವನ್ನು ಒಮ್ಮೆ ನೋಡಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











